LIC Recruitment: ಕರ್ನಾಟಕದಲ್ಲೂ ಉದ್ಯೋಗ, ಒಟ್ಟು 192 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರ

LIC Recruitment 2025: ಭಾರತೀಯ ಜೀವ ವಿಮಾನ ನಿಗಮ (LIC) ಉಪಸಂಸ್ಥೆ ಹೌಸಿಂಗ್ ಫೈನಾನ್ಸ್ ಕಂಪನಿಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಈ ಸಂಬಂಧ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದಲ್ಲೇ ಉದ್ಯೋಗ ಮಾಡಬಯಸಿದ್ದರೆ, ನೀವು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ನೇಮಕಾತಿ ವಿವರ, ವಿದ್ಯಾರ್ಹತೆ, ವಯೋಮಿತಿ, ಶುಲ್ಕ ಇತರ ಪೂರ್ಣ ಮಾಹಿತಿ ಇಲ್ಲಿದೆ.

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯು ಕರ್ನಾಟಕ ಸೇರಿದಂತೆ ದೇಶಾದ್ಯಮತ ಒಟ್ಟು 192 ಹೊಸ ಅಪ್ರೆಂಟಿಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ https://www.lichousing.com/ ನೀಡುವ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ಒಮ್ಮೆ ಅಧಿಸೂಚನೆಯನ್ನು ಪೂರ್ಣವಾಗಿ ತಿಳಿದುಕೊಳ್ಳಿ.

LIC Recruitment 2025 Housing Finance Ltd Call Application for 192 Apprentice Post

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕಂಪನಿ

ಹುದ್ದೆಗಳ ಹೆಸರು: ವಿವಿಧ ಅಪ್ರೆಂಟಿಸ್

ಉದ್ಯೋಗಗಳು ಎಷ್ಟು: 192

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 22

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಪೋಸ್ಟಿಂಗ್ ಎಲ್ಲಿ: ಕರ್ನಾಟಕ ಸೇರಿ ಭಾರತಾದ್ಯಂತ

ಅಪ್ರೆಂಟಿಸ್ ತರಬೇತಿ: ನವೆಂಬರ್ 01ರಿಂದ 12 ತಿಂಳಗವರೆಗೆ.

ರಾಜ್ಯವಾರು ಖಾಲಿ ಹುದ್ದೆ ವಿವರ

* ಕರ್ನಾಟಕ: 28

* ಆಂಧ್ರ ಪ್ರದೇಶ: 14

* ತೆಲಂಗಾಣ: 20

* ತಮಿಳುನಾಡು: 27

* ಮಹಾರಾಷ್ಟ್ರ: 25

* ಉತ್ತರ ಪ್ರದೇಶ: 18

* ಮಧ್ಯಪ್ರದೇಶ: 12

* ಪಶ್ಚಿಮ ಬಂಗಾಳ: 10

ಅರ್ಹತೆ, ವಯೋಮಿತಿ

ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಯಾವುದಾದರೂ ಪದವಿಯನ್ನು 2021ರ ಸೆಪ್ಟೆಂಬರ್ ನಂತರ ಮತ್ತು ಸೆಪ್ಟೆಂಬರ್ 1, 2025ರ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಆಸ್ತಕರ ಕನಿಷ್ಠ ವಯಸ್ಸು 20 ಹಾಗೂ ಗರಿಷ್ಠ 25 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಬೇರೆ ಸಂಸ್ಥೆಗಳಲ್ಲಿ ಅಪ್ರೆಂಟಿಸ್ ಆಗಿರದೇ ಇರುವ ಹಾಗೂ ಬೇರೆಡೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ. ಅಂತವರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಶುಲ್ಕದ ವಿವರಗಳು

ಆಸಕ್ತ ಅಭ್ಯರ್ಥಿಗಳು ಕೂಡಲೇ ಅಭ್ಯರ್ಥಿಗಳು https://www.lichousing.com/ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 22 ರೊಳಗೆ ಅರ್ಜಿ ಸಲ್ಲಿಸಬೇಕು. ಓಬಿಸಿ ಅಭ್ಯರ್ಥಿಗಳಿಗೆ 944 ರೂ., ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 708, 708 ರೂಪಾಯಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 472 ರೂ. ಅರ್ಜಿ ಶುಲ್ಕ ಇದ್ದು, ಅದನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಮಾಸಿಕ ವೇತನ ಎಷ್ಟು?

ಅರ್ಜಿ ಸಲ್ಲಿಸುವವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮತ್ತು ನಂತರ ವೈಯಕ್ತಿಕ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆಗುವವರಿಗೆ ನಿಯಮಾನುಸಾರ ವೇತನ ಸಹಿತ 12,000 ಸ್ಟೈಫಂಡ್ ಇರಲಿದೆ. ಹೆಚ್ಚಿನ ಮಾಹಿತಿಗೆ ಮೇಲೆ ತಿಳಿಸಲಾದ ವೆಬ್‌ಸೈಟ್‌ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+