Post Office Jobs: SSLC ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ: ಕೂಡಲೇ ಅರ್ಜಿ ಹಾಕಿ
ಬೆಂಗಳೂರು, ಮೇ 30: ಭಾರತೀಯ ಅಂಚೆ ಇಲಾಖೆ (Post Office Jobs) ತನ್ನಲ್ಲಿ ಖಾಲಿರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿ ಈಗಾಗಲೇ ಕೆಲವು ದಿನಗಳು ಕಳೆದಿವೆ. ಆಸಕ್ತ ಅಭ್ಯರ್ಥಿಗಳು ತಡಮಾಡದೇ ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗ ಪಡೆಯಬಹುದು.
ದೇಶದ ಅಂಚೆ ಕಚೇರಿಯಲ್ಲಿ ಒಟ್ಟು 19 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅಂದರೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ನಾಳೆ ಮೇ 31ರಂದು ಕೊನೆ ದಿನವಾಗಿದೆ. ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ಇಲಾಖೆ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಯಬಹುದು. ಅನುಭವ, ವಿದ್ಯಾರ್ಹತೆ, ವೇತನ, ಆಯ್ಕೆ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು: ಸ್ಟಾಫ್ ಕಾರ್ ಡ್ರೈವರ್
ಒಟ್ಟು ಹುದ್ದೆ: 19
ವೇತನ: ನಿಯಮಾನುಸಾರ
ವಿದ್ಯಾರ್ಹತೆ: ಹತ್ತನೇ ತರಗತಿ
ಅರ್ಜಿ ಸಲ್ಲಿಕೆ: ಆಫ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನ: ಮೇ 31 ನಾಳೆ.
ವಿದ್ಯಾರ್ಹತೆ ಏನಿರಬೇಕು?
ಡ್ರೈವಿಂಗ್‌ನಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಯಾವುದೇ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯೋಮಿತಿ ವಿವರ
ಆಸಕ್ತ ಅಭ್ಯರ್ಥಿಗಳ ವಯಸ್ಸು ನಾಳೆ 2024ರ ಮೇ 31ಕ್ಕೆ ಗರಿಷ್ಠ 56 ವರ್ಷ ದಾಟಿರಬಾರದು. ಜಾತಿ ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯಸ್ಸಿನ ಮೀತಿಯಲ್ಲಿ ಸಡಿಲಿಕೆ ಸಿಗಲಿದೆ ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಡ್ರೈವಿಂಗ್ ಲೈಸೆನ್ಸ್ ಹಾಗೂ ಸ್ಕಿಲ್ ಟೆಸ್ಟ್ ಪರಿಶೀಲಿಸಲಾಗುತ್ತದೆ. ನಂತರ ಒಂದು ಸುತ್ತಿನ ಸಂದರ್ಶನ ನಡೆಸಲಾಗುವುದು. ನಂತರ ಅವರನ್ನು ಬಿಹಾರದ ಪಾಟ್ನಾದಲ್ಲಿ ನಿಯಮಾನುಸಾರ ಮಾಸಿಕ ವೇತನದ ಆಧಾರದಲ್ಲಿ ನಿಯೋಜನೆ ಮಾಡಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಅಗತ್ಯ ದಾಖಲೆ ಸಮೇತ ಭರ್ತಿ ಮಾಡಿದ ಅರ್ಜಿಯನ್ನು ಇಲ್ಲಿನ ವಿಳಾಸ, ''ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಬಿಹಾರ ಸರ್ಕಲ್, ಪಾಟ್ನಾ-800001' ಇಲ್ಲಿಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.
ನೆನಪಿಡಬೇಕಾದ ದಿನಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2024 ಏಪ್ರಿಲ್ 16
ಅರ್ಜಿ ಸಲ್ಲಿಕೆ ಕೊನೆ ದಿನ: ನಾಳೆ 2024 ಮೇ 31.
ಆಸಕ್ತ ಅಭ್ಯರ್ಥಿಗಳು ಇಂದು ಸಂಜೆವರೆಗೂ ಕಾಯದೇ ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು. ಚಾಲನೆ ವೃತ್ತಿಯಲ್ಲಿರುವವರಿಗೆ, ಅದರಲ್ಲೂ ಹತ್ತನೆ ತರಗತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರ ಹುದ್ದೆ ಸಿಗುವ ಅವಕಾಶ ಇದಾಗಿದೆ.












Click it and Unblock the Notifications