ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ

By Gururaj
|
Google Oneindia Kannada News

Recommended Video

KSRTC Recruitment 2018 : 200 ಹುದ್ದೆಗಳು ಖಾಲಿ ಇವೆ | Oneindia Kannada

ಬೆಂಗಳೂರು, ಜೂನ್ 18 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 200 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 16, 2018ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಎಸ್ಆರ್‌ಟಿಸಿ ವಿಭಾಗ ಮಟ್ಟದ ಮೇಲ್ವಿಚರಕ ಹುದ್ದೆಯಾದ 'ಭದ್ರತಾ ರಕ್ಷಕ' ದರ್ಜೆ -3 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ರಾಜ್ಯವ ವಿವಿಧ ವಿಭಾಗಗಳಲ್ಲಿ ಸೇರಿಸಿ ಒಟ್ಟು 200 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತದೆ.

ಕೊಪ್ಪಳದಲ್ಲಿ ಜೂನ್ 20ರಂದು ಮಿನಿ ಉದ್ಯೋಗ ಮೇಳಕೊಪ್ಪಳದಲ್ಲಿ ಜೂನ್ 20ರಂದು ಮಿನಿ ಉದ್ಯೋಗ ಮೇಳ

ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಹಂತಕ್ಕೆ ತಲುಪಬಹುದು. ದೈಹಿಕ ಪರೀಕ್ಷೆ, ಸಾಮಾನ್ಯ ಪ್ರವೇಶ ಪರೀಕ್ಷೆ, ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 94 ಹುದ್ದೆಗಳಿವೆ, ಅರ್ಜಿ ಹಾಕಿಕರ್ನಾಟಕ ಅರಣ್ಯ ಇಲಾಖೆಯಲ್ಲಿ 94 ಹುದ್ದೆಗಳಿವೆ, ಅರ್ಜಿ ಹಾಕಿ

ರಾಮನಗರ ವಿಭಾಗದಲ್ಲಿ 22, ತುಮಕೂರು 15, ಮಂಡ್ಯ 10, ಚಾಮರಾಜನಗರ 12, ಮೈಸೂರು 10, ಮೈಸೂರು ಗ್ರಾಮಾಂತರ 13, ಮಂಗಳೂರು 12, ಪುತ್ತೂರು 20, ಚಿಕ್ಕಮಗಳೂರು 15, ಕೆ.ಬಿ.ಎಸ್. ವಿಭಾಗ 48, ಶಿವಮೊಗ್ಗ 10, ಚಿತ್ರದುರ್ಗ 13 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ಮಾಹಿತಿ ಚಿತ್ರಗಳಲ್ಲಿ...

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆಯ ವಿವರ

ವಿದ್ಯಾರ್ಹತೆಯ ವಿವರ

ಪಿಯುಸಿ ಉತ್ತೀರ್ಣರಾಗಿರಬೇಕು ಅಥವ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ ಅಥವ ನೌಕಾಪಡೆ/ವಾಯುಪಡೆಯಲ್ಲಿ ತತ್ಸಮಾನ ದರ್ಜೆ ಪ್ರಮಾಣ ಪತ್ರ ಹೊಂದಿದ್ದ ಮಾಜಿ ಸೈನಿಕನಾಗಿರಬೇಕು.

ಆಯ್ಕೆಯಾದ ಅಭ್ಯರ್ಥಿಯನ್ನು 2 ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿಗೆ ನಿಯೋಜಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ 9,100 ತರಬೇತಿ ಭತ್ಯೆ ಮತ್ತು ವಿವಿಧ ಭತ್ಯೆಗಳನ್ನು ನೀಡಲಾಗುತ್ತದೆ.

ವೇತನ ಶ್ರೇಣಿ : 11640-140-11920-170-12600-250-14100-320-15700

ಅರ್ಜಿ ಸಲ್ಲಿಸಲು ವಯಸ್ಸು

ಅರ್ಜಿ ಸಲ್ಲಿಸಲು ವಯಸ್ಸು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ನಿಗದಿ ಪಡಿಸಿದ ಕೊನೆಯ ದಿನವಾದ 16-7-2018ಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

* ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷಗಳು
* 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳು 38 ವರ್ಷಗಳು
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.

ಇಲಾಖಾ ಅಭ್ಯರ್ಥಿಗಳು ಸಲ್ಲಿಸಿರುವ ಸೇವಾವಧಿಯ ಗರಿಷ್ಠ 10 ವರ್ಷಗಳಿಗೆ ಮೀರದಂತೆ ವಯೋಮಿತಿಗೆ ಅರ್ಹರು ಅವರ ವಯಸ್ಸು 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕಗಳು

ಅರ್ಜಿ ಶುಲ್ಕಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಶುಲ್ಕದ ವಿವರಗಳು
ಸಾಮಾನ್ಯ, 2ಎ, 2ಬಿ, 3ಎ ಮತ್ತು 3 ಬಿ ವರ್ಗದ ಅಭ್ಯರ್ಥಿಗಳು 800 ರೂ. ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ -1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 600 ರೂ. ಶುಲ್ಕವಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಚಲನ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಂಚೆ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಇ-ಪೇಮೆಂಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ವರ್ಗೀಕರಣದ ಬದಲಾಗಬಹುದು

ವರ್ಗೀಕರಣದ ಬದಲಾಗಬಹುದು

ಆಯ್ಕೆಯಾದ ಅಭ್ಯರ್ಥಿಗಳನ್ನು ಕ.ರಾ.ರ.ಸಾ. ನಿಗಮದ ವ್ಯಾಪ್ತಿಯಲ್ಲಿ ಬರುವ ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಮಂಗಳೂರು, ಪುತ್ತೂರು, ಚಿಕ್ಕಮಗಳೂರು, ಕೆಂಪೇಗೌಡ ವಾಹನ ನಿಲ್ದಾಣ, ಶಿವಮೊಗ್ಗ, ಚಿತ್ರದುರ್ಗ ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಚೇರಿ/ಘಟಕಗಳಿಗೆ ಮೀಸಲಾತಿ ವರ್ಗೀಕರಣದ ಅನುಸಾರ ನಿಯೋಜನೆ ಮಾಡಬಹುದು.

ಮೂರು ಹಂತಗಳಲ್ಲಿ ಪರೀಕ್ಷೆ

ಮೂರು ಹಂತಗಳಲ್ಲಿ ಪರೀಕ್ಷೆ

ಒಟ್ಟು ಮೂರು ಹಂತದ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಹಂತಕ್ಕೆ ಆಯ್ಕೆಯಾಗಬಹುದು.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನಡೆಸುವ ದೈಹಿಕ ಸಾಮರ್ಥ್ಯ ಪರೀಕ್ಷೆ ವಿರ ಇಲ್ಲಿದೆ ನೋಡಿ.

English summary
Karnataka State Road Transport Corporation (KSRTC) issued notification for recruitment of 200 vacancies. The candidate who is looking for Security Guard job can apply online before 16th July 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X