KSRTC Recruitment: ಚಾಲಕ-ನಿರ್ವಾಹಕ ಹುದ್ದೆ ಅರ್ಜಿ ಸಲ್ಲಿಸಿದವರು ಗಮನಿಸಿ
ಬೆಂಗಳೂರು, ಜುಲೈ 08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ವರ್ಷಗಳ ಹಿಂದೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಹಂತ ಹಂತವಾಗಿ ಅರ್ಹ ಅಭ್ಯರ್ಥಿಗಳ ದೇಹದಾರ್ಡ್ಯ ಮತ್ತು ದಾಖಲಾತಿ ಪರಿಶೀಲನೆ ಮಾಡುತ್ತಾ ಬಂದಿದೆ. ಇದೀಗ ಮತ್ತೆ ಇದೇ ಪರಿಶೀಲನೆಗೆ ದಿನಾಂಕ ನಿಗದಿ ಮಾಡುವ ಮೂಲಕ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.
ಇಷ್ಟು ದಿನಗಳ ಕಾಲ ಅರ್ಜಿ ಸಲ್ಲಿಸಿ ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭ, ಆಹ್ವಾನ ಕುರಿತು ತಲೆಕೆಡಿಸಿಕೊಂಡುದ್ದ ಅಭ್ಯರ್ಥಿಗಳು ಇದೇ ಜುಲೈ 13ರಂದು ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.

ಇದುವರೆಗೂ ನಡೆದ ಕೆಲವು ದಾಖಲಾತಿ ಮತ್ತು ದೇಹದಾರ್ಡ್ಯತೆ ಪರಿಶೀಲನೆ ವೇಳೆ ಗೈರಾದವರಿಗೆ ಮತ್ತೊಂದು ಅವಕಾಶ ಸಿಕ್ಕದಂತಾಗಿದೆ. ಇಂತವರು ಕೂಡಲೇ ನಿಗಮದ ಅಧಿಕೃತ ವೆಬ್-ಸೈಟ್ (ksrtcjobs.karnataka.gov.in) ಗೆ ಭೇಟಿ ಕೊಟ್ಟು ಅಲ್ಲಿನ ಅಂತಿಮ ಕರೆಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು.
ನಿಗದಿತ ದಿನಾಂಕ ಇಲ್ಲವೇ ನಿಗದಿತ ದಿನಾಂಕ ಇಲ್ಲವೇ 13-07-2024 ರೊಳಗಾಗಿ ತಪ್ಪದೇ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ತದನಂತರ ಯಾವುದೇ ಪರಿಶೀಲನಾ ಕಾರ್ಯ ನಡೆಯುವುದಿಲ್ಲ ಹಾಗೂ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತೊಮ್ಮೆ ಪ್ರಕಟಣೆಯಲ್ಲಿ ತಿಳಿಸಿದೆ.
KSRTC ನಿಗಮದಲ್ಲಿ ಜಾಹೀರಾತು ಸಂ.1/2020 ದಿನಾಂಕ 14-02-2020 ರಂದು ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದರಲ್ಲಿ ಅರ್ಜಿ ಸಲ್ಲಿಸಿ ಶಾರ್ಟ್ ಲಿಸ್ಟ್ ಆದವರ ದೇಹದಾರ್ಡ್ಯ ಹಾಗೂ ದಾಖಲಾತಿ ಪರಿಶೀಲನೆಯನ್ನು ನಡೆಸುತ್ತಲೇ ಬಂದಿದೆ. ಇದೀಗ ಅಂತಿಮ ಸುತ್ತಿನ ಪರಿಶೀಲನೆ ಇದೇ ತಿಂಗಳು ಹಮ್ಮಿಕೊಂಡಿದೆ.

ಇನ್ನೂ ಅಧಿಸೂಚನೆ ಪಾರದರ್ಶಕವಾಗಿ ನಡೆಯಲಿದೆ. ಇದರಲ್ಲಿ ಯಾವುದೇ ವ್ಯಕ್ತಿಗಳ ಹಸ್ತಕ್ಷೇಪ ಇರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಮಧ್ಯವರ್ತಿಗಳ ಮಾತು ನಂಬಿ ಆಮಿಷಕ್ಕೆ ಒಳಗಾಗಬಾರದು, ನೇರವಾಗಿ ದಾಖಲಾತಿ ಪರಿಶೀಲನೆಗೆ ಒಳಗಾಗಬೇಕು ಎಂದು ನಿಗಮ ತಿಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಈ ಹಿಂದೆಯು ಕೆಲವು ಭಾರಿ ಈ ದೈಹಿಕ ಪರೀಕ್ಷೆ ನಡೆಸಿದ್ದರು. ಆಗ ಒಂದಷ್ಟು ಮಂದಿ ಅಭ್ಯರ್ಥಿಗಳು ಗೈರಾಗಿದ್ದರು. ಇದೀಗ ಅವರೆಲ್ಲರಿಗೂ ಮತ್ತೊಮ್ಮೆ ಪರಿಶೀಲನೆಗೆ ಒಳಗಾಗುವ, ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications