ಕೆಪಿಎಸ್ಸಿಯಿಂದ ಗೆಜೆಟೆಡ್ ಪ್ರೊಬೇಷನರ್ಸ್ 401 ಹುದ್ದೆಗೆ ಅರ್ಜಿ

Posted By:
Subscribe to Oneindia Kannada

ಬೆಂಗಳೂರು, ಮೇ 13: ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರ್ಸ್ 401 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಹರು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮೇ 12ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜೂನ್ 12, 2017 ಕೊನೆ ದಿನ.

ಜೂನ್ 13ರೊಳಗೆ ಶುಲ್ಕವನ್ನು ಪಾವತಿಸಿರಬೇಕು. ಇನ್ನು ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 20ರಂದು ನಡೆಸಲು ಉದ್ದೇಶಿಸಲಾಗಿದೆ. ಮುಖ್ಯ ಪರೀಕ್ಷೆಯನ್ನು ಇದೇ ನವೆಂಬರ್ ನಲ್ಲಿ ನಡೆಸಲು ಆಯೋಗವು ನಿರ್ಧರಿಸಿದೆ. ಅನಿವಾರ್ಯ ಕಾರಣಗಳಿದ್ದಲ್ಲಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಬಹುದು.[ಬಿಎಚ್ಇಎಲ್ ನಲ್ಲಿ ಉದ್ಯೋಗಾವಕಾಶ: ಮೇ 16 ರಂದು ಸಂದರ್ಶನ]

ಸಾಮಾನ್ಯ ಅಭ್ಯರ್ಥಿಗಳ ಪ್ರವೇಶ ಶುಲ್ಕ 300 ರುಪಾಯಿ ನಿಗದಿ ಮಾಡಿದ್ದರೆ, ಪ್ರ ವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳು 150 ರುಪಾಯಿ ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ಅಂಗವಿಕಲರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.[ಯುಪಿಎಸ್ ಸಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಪರೀಕ್ಷೆ ಹಾಗೂ ಹುದ್ದೆಗೆ ಸಂಬಂಧಪಟ್ಟ ವಿವರಗಳಿಗಾಗಿ ಮುಂದಿನ ಸ್ಲೈಡ್ ಗಳನ್ನು ಓದಿರಿ.

ಹುದ್ದೆಯ ಹೆಸರು ಮತ್ತು ಸಂಖ್ಯೆ

ಹುದ್ದೆಯ ಹೆಸರು ಮತ್ತು ಸಂಖ್ಯೆ

ಕರ್ನಾಟಕ ಆಡಳಿತ ಸೇವೆಗಳು _ಕೆ.ಎ.ಎಸ್(ಕಿರಿಯ ಶ್ರೇಣಿ) ಸಹಾಯಕ ಆಯುಕ್ತರು 30 ಹುದ್ದೆ
ಕರ್ನಾಟಕ ಪೋಲಿಸ್ ಸೇವೆಗಳು- ಆರಕ್ಷಕ ಉಪಾಧೀಕ್ಷಕರು (ಡಿ.ವೈ.ಎಸ್.ಪಿ.) (ಒಳಾಡಳಿತ ಇಲಾಖೆ) 20
ಕರ್ನಾಟಕ ಸಾಮಾನ್ಯ ಸೇವೆಗಳು(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ)- ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆ) 08
ಕರ್ನಾಟಕ ಖಜಾನೆ ಸೇವೆಗಳು- ಸಹಾಯಕ ನಿರ್ದೇಶಕರು/ಜಿಲ್ಲಾ ಖಜಾನಾಧಿಕಾರಿ (ಖಜಾನೆ ಇಲಾಖೆ) 14
ಕರ್ನಾಟಕ ಹಿಂದುಳಿದ ವರ್ಗಗಳ ಸೇವೆಗಳು- ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆ) 09[ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

ವಾಣಿಜ್ಯ ತೆರಿಗೆ ಇಲಾಖೆ

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳು- ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಆರ್ಥಿಕ ಇಲಾಖೆ) 65
ಕರ್ನಾಟಕ ಕಾರ್ಮಿಕ ಸೇವೆಗಳು- ಸಹಾಯಕ ಕಾರ್ಮಿಕ ಆಯುಕ್ತರು (ಕಾರ್ಮಿಕ ಇಲಾಖೆ) 04
ಕರ್ನಾಟಕ ಆಡಳಿತ ಸೇವೆಗಳು- ತಹಶೀಲ್ದಾರ್-(ಗ್ರೇಡ್-2) (ಕಂದಾಯ ಇಲಾಖೆ) 66
ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳು- ವಾಣಿಜ್ಯ ತೆರಿಗೆ ಅಧಿಕಾರಿ (ಆರ್ಥಿಕ ಇಲಾಖೆ) 10
ಕರ್ನಾಟಕ ಕಾರಾಗೃಹಗಳ ಆಡಳಿತ ಸೇವೆಗಳು- ಸಹಾಯಕ ಅಧೀಕ್ಷಕರು, ಕಾರಾಗೃಹಗಳ ಇಲಾಖೆ (ಒಳಾಡಳಿತ ಇಲಾಖೆ) 01
ಕರ್ನಾಟಕ ಅಬಕಾರಿ ಸೇವೆಗಳು- ಅಬಕಾರಿ ಉಪ ಅಧೀಕ್ಷಕರು (ಅಬಕಾರಿ ಇಲಾಖೆ) 05
ಕರ್ನಾಟಕ ಖಜಾನೆ ಸೇವೆಗಳು- ಸಹಾಯಕ ಖಜಾನಾಧಿಕಾರಿ 04
ಕರ್ನಾಟಕ ಪೌರಾಡಳಿತ ಸೇವೆಗಳು ಮುಖ್ಯಾಧಿಕಾರಿ ಶ್ರೇಣಿ-1, ಪೌರಾಡಳಿತ ನಿರ್ದೇಶನಾಲಯ (ನಗರಾಭಿವೃದ್ಧಿ ಇಲಾಖೆ) 19

ಆಹಾರ ನಾಗರಿಕ ಸರಬರಾಜು

ಆಹಾರ ನಾಗರಿಕ ಸರಬರಾಜು

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳು- ಸಹಾಯಕ ನಿರ್ದೇಶಕರು (ಆಹಾರ, ನಾಗರಿಕ
ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ) 02
ಕರ್ನಾಟಕ ಕೃಷಿ ಮಾರುಕಟ್ಟೆ ಸೇವೆಗಳು- ಸಹಾಯಕ ನಿರ್ದೇಶಕರು, ಕೃಷಿ ಮಾರುಕಟ್ಟೆ ಇಲಾಖೆ, (ಸಹಕಾರ
ಇಲಾಖೆ) 02
ಕರ್ನಾಟಕ ಸಹಕಾರ ಸೇವೆಗಳು- ಸಹಕಾರ ಸಂಘಗಳ ಸಹಾಯಕ ನಿಬಂಧಕರು (ಸಹಕಾರ ಇಲಾಖೆ) 36
ಕರ್ನಾಟಕ ಸಹಕಾರ ಲೆಕ್ಕಪರಿಶೋಧನಾ ಸೇವೆಗಳು- ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರು,
ಲೆಕ್ಕಪರಿಶೋಧನಾ ಇಲಾಖೆ (ಸಹಕಾರ ಇಲಾಖೆ) 02
ಕರ್ನಾಟಕ ಕಾರ್ಮಿಕ ಸೇವೆಗಳು- ಕಾರ್ಮಿಕ ಅಧಿಕಾರಿ (ಕಾರ್ಮಿಕ ಇಲಾಖೆ) 05
ಕರ್ನಾಟಕ ಉದ್ಯೋಗ ಮತ್ತು ತರಬೇತಿ ಸೇವೆಗಳು- ಉದ್ಯೋಗಾಧಿಕಾರಿ (ಉದ್ಯೋಗ ಮತ್ತು ತರಬೇತಿ ಇಲಾಖೆ) 09

ಪರೀಕ್ಷಾ ಶುಲ್ಕ, ಅರ್ಜಿ ಸಲ್ಲಿಕೆ ದಿನಾಂಕ

ಪರೀಕ್ಷಾ ಶುಲ್ಕ, ಅರ್ಜಿ ಸಲ್ಲಿಕೆ ದಿನಾಂಕ

ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 12-05-2017.
ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017 ರ ರಾತ್ರಿ 11.45
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 13-06-2017
ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿರುವ ದಿನಾಂಕ: 20-08-2017
ಮುಖ್ಯ ಪರೀಕ್ಷೆಯನ್ನು 2017ರ ನವೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಸಾಮಾನ್ಯ ಅಭ್ಯರ್ಥಿಗಳಿಗೆ ಐದು ಅವಕಾಶ

ಸಾಮಾನ್ಯ ಅಭ್ಯರ್ಥಿಗಳಿಗೆ ಐದು ಅವಕಾಶ

ಸಾಮಾನ್ಯ ಅಭ್ಯರ್ಥಿಗೆ ಈ ಪರೀಕ್ಷೆ ಬರೆಯಲು 5 ಬಾರಿ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗೆ 7 ಬಾರಿ ಅವಕಾಶವಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರಯತ್ನಗಳ ಮಿತಿ ಇಲ್ಲ. ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ಪ್ರಯತ್ನವನ್ನು ಒಂದು ಅವಕಾಶವೆಂದು ಪರಿಗಣಿಸಲಾಗುವುದು.

ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬಳ್ಳಾರಿ, ಮೈಸೂರು, ಬೆಳಗಾವಿ, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಕಲಬುರಗಿ, ದಾವಣಗೆರೆ, ಶಿವಮೊಗ್ಗ, ರಾಯಚೂರು. ಗ್ರೂಪ್ ‘ಎ' 150, ಗ್ರೂಪ್ ‘ಬಿ' 251 ಹುದ್ದೆಗಳಿವೆ. ಹೆಚ್ಚಿನ ವಿವರಗಳಿಗೆ ಆಯೋಗದ ವೆಬ್ ಸೈಟ್ http://kpsc.kar.nic.in ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KPSC invites application for 401 post Gazetted probationers (prelims)-2017. June 12, 2017 is last date to apply. Here is the complete details about notification.
Please Wait while comments are loading...