ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಸಿಎಲ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29 : ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು (ಕೆಪಿಸಿಎಲ್) ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/9/2016.

ಸಹಾಯಕ (ಆಡಳಿತ) 44 ಹುದ್ದೆ, ಸಹಾಯಕ (ಲೆಕ್ಕ) 41 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗಮದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.[KPSC ನೇಮಕಾತಿ ವಿವರಗಳು]

jobs

ವಿದ್ಯಾರ್ಹತೆ : ಸಹಾಯಕ (ಆಡಳಿತ) ಯುಜಿಸಿಯಿಂದ ಅನುಮೋದಿಸಲ್ಪಟ್ಟ ಕರ್ನಾಟಕದಲ್ಲಿನ ಅಂಗೀಕೃತ ವಿಶ್ವವಿದ್ಯಾಲಯದ 3 ವರ್ಷಗಳ ನಿಯತ ಬಿಎ/ಬಿಕಾಂ/ಬಿಎಸ್‌ಸಿ ಪದವಿ ಪಡೆದಿರಬೇಕು.[ವೆಬ್ ಸೈಟ್ ವಿಳಾಸ]

ಸಹಾಯಕ (ಲೆಕ್ಕ) ಯುಜಿಸಿಯಿಂದ ಅನುಮೋದಿಸಲ್ಪಟ್ಟ ಕರ್ನಾಟಕದಲ್ಲಿನ ಅಂಗೀಕೃತ ವಿಶ್ವವಿದ್ಯಾಲಯದ 3 ವರ್ಷಗಳ ನಿಯತ ಬಿಕಾಂ ಪದವಿ ಪಡೆದಿರಬೇಕು.

job

ಮರುಪಾವತಿಸದ ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಪ್ರವರ್ಗ -1 ಅಭ್ಯರ್ಥಿಗಳಿಗೆ 100 ರೂ.. ಅಂಚೆ ಸೇವಾ ಶುಲ್ಕ 15 ರೂ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ಮಾಜಿ ಸೈನಿಕರು, ಯುದ್ಧದಲ್ಲಿ ಮಡಿದ ಅಥವ ವಿಕಲಚೇತನರಾದ ಯೋಧರ ಮಕ್ಕಳು, ವಿಕಲಚೇತನರು 50 ರೂ. (35 ರೂ. ಪ್ರಕ್ರಿಯೆ ಶುಲ್ಕ, ರೂ.15 ಅಂಚೆ ಸೇವಾ ಶುಲ್ಕ). ಅರ್ಜಿ ಶುಲ್ಕವನ್ನು ಕರ್ನಾಟಕದ ಯಾವುದೇ ಗಣಕೀಕೃತ ಅಂಚೆ ಕಚೇರಿಯ ಮೂಲಕ ಪಾವತಿ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Power Corporation Limited (KPCL) invited applications for the post of Assistant (Administration) and Assistant (Accounts). September 29, 2016 last date for submit application.
Please Wait while comments are loading...