KEA 2024: ಜಿಲ್ಲಾವಾರು ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಅಭ್ಯರ್ಥಿಗಳ ಅಂಕ ಪಟ್ಟಿ ರಿಲೀಸ್; ಪರಿಶೀಲಿಸುವುದೇಗೆ?
ಬೆಂಗಳೂರು, ನವೆಂಬರ್, 27: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗ್ರಾಮ ಆಡಳಿತ ಅಧಿಕಾರ-2024 ವಿಒಎ ನೇಮಕಾತಿಗೆ ಅಕ್ಟೋಬರ್ 27ರಂದು ಪರೀಕ್ಷೆ ನಡೆದಿತ್ತು. ಜಿಲ್ಲಾವಾರು ಇಂದು (ನವೆಂಬರ್ 27) ಈ ಪರೀಕ್ಷೆಯ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ. ಹಾಗಾದರೆ, ವೀಕ್ಷಿಸುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು http://cetonline.karnataka.gov/kea/vacrec24 ವೆಬ್‌ಸೈಟ್‌ಗೆ ಭೇಟಿ ನೀಡಿ ಅಂಕಪಟ್ಟಿಯನ್ನು ಪರಿಶೀಲಬೆ ಮಾಡಬಹುದಾಗಿದೆ.

ಪೇಪರ್ 1 ಮತ್ತು 2ರ ಅಂಕಗಳ ಲಿಸ್ಟ್ ಪ್ರಕಟ ಮಾಡಲಾಗಿದ್ದು, ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ತಮ್ಮ ಸ್ಕೋರ್ ಲಿಸ್ಟ್ ಅನ್ನು ಪರಿಶೀಲನೆ ಮಾಡಬಹುದಾಗಿದೆ. ಅಕ್ಟೋಬರ್ 27ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಪೇಪರ್-1ಕ್ಕೆ 100 ಅಂಕಗಳಿಗೆ ಕಟ್ ಆಫ್ ಅಂಕಗಳಿದ್ದವು. ಅದೇ ರೀತಿ ಪೇಪರ್ 2 100 ಅಂಕಗಳಿಗೂ ನೆಗಟಿವ್ ಅಂಕಗಳಿದ್ದವು.
ಆಕ್ಷೇಪಣೆ ಸಲ್ಲಿಸಲು ಪ್ರಕಟಣೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ 402 ಪಿಎಸ್‌ಐ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಕ್ಟೋಬರ್ 3, 2024ರಂದು ನಡೆಸಲಾಗಿದ್ದ ಪರೀಕ್ಷೆಯ ಕೀ ಉತ್ತರಗಳನ್ನು ನವೆಂಬರ್ 06ರಂದು ಅಭ್ಯರ್ಥಿಗಳ ಅಂಕಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಮೂಲಕ ಪರೀಕ್ಷೆ ಬರೆದ 42,933 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 9ರೊಳಗೆ ಸಲ್ಲಿಸುವಂತೆ ಪ್ರಟಣೆಯಲ್ಲಿ ತಿಳಿಸಲಾಗಿದೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 3, 2024ರಂದು ಪಿಎಸ್‌ಐ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ವಿವರಗಳುಳ್ಳ ತಾತ್ಕಾಲಿಕ ಅಂಕಪಟ್ಟಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/vaoresult/resultdescomr.aspxನಲ್ಲಿ ಪ್ರಕಟಿಸಲಾಗಿತ್ತು.
ಇನ್ನು ಅಭ್ಯರ್ಥಿಗಳು ಯಾವುದೇ ಆಕ್ಷೇಪಣೆಗಳಿದ್ದರೆ, ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಲಿಂಕ್ ಮೂಲಕ ನವೆಂಬರ್ 09, 2024ರ ಸಂಜೆ 5:30 ವರೆಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಬೇರೆ ಯಾವುದೇ ಇತರೆ ರೀತಿಯಲ್ಲಿ ಸಲ್ಲಿಕೆ ಮಾಡುವ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಅಂತಲೂ ತಿಳಿಸಿತ್ತು.
ನವೆಂಬರ್ 06ರಂದು ಪ್ರಕಟಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾತ್ರ ಲಿಂಕ್ ಮೂಲಕ ಸಲ್ಲಿಸುವುದು. ಈಗಾಗಲೇ ಕೀ ಉತ್ತರಗಳನ್ನು ಅಂತಿಮಗೊಳಿಸಿದ್ದು, ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಇನ್ನು ಪರೀಕ್ಷೆ ಬರೆದ ಅಭ್ಯರ್ಥಿಗಳು ಪೇಪರ್-1, ಪೇಪರ್-2ರಲ್ಲಿ ಪಡೆದ ನಿರ್ದಿಷ್ಟ ಅಂಕಗಳು ಹಾಗೂ ಎರಡೂ ಪತ್ರಿಕೆ ಸೇರಿ ನೇಮಕಾತಿಗೆ ಪರಿಗಣಿಸುವ ಒಟ್ಟು ಅಂಕಗಳ ಮಾಹಿತಿಯನ್ನೂ ನೀಡಲಾಗಿದೆ. ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಿಸಿದ ಪಟ್ಟಿಯಲ್ಲಿ ಅಥವಾ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ವೈಯಕ್ತಿಕವಾಗಿ ಅಂಕಪಟ್ಟಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ವೈಯಕ್ತಿಕ ಅಂಕಪಟ್ಟಿಗಾಗಿ https://cetonline.karnataka.gov.in/keawebentry456/PSIREC2024/ScoreListkannada.pdf ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಎಂದು ತಿಳಿಸಿತ್ತು.












Click it and Unblock the Notifications