ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇಯಿಂದ ಫೇಸ್ಬುಕ್ಕಿನಲ್ಲಿ ಉದ್ಯೋಗಗಳ ಮಾಹಿತಿ

By Mahesh
|
Google Oneindia Kannada News

ಬೆಂಗಳೂರು, ಸೆ.30: ಕನ್ನಡಿಗರ ಹಾಗೂ ಕರ್ನಾಟಕದ ಏಳಿಗೆಯಲ್ಲಿ ದುಡಿಮೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕನ್ನಡಿಗರು ಹೆಚ್ಚು ಹೆಚ್ಚು ಉದ್ಯಮಶೀಲರಾಗಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಉದ್ಯೋಗ ಮಾಹಿತಿ ನೀಡಲು ಫೇಸ್ ಬುಕ್ ಪುಟ ಆರಂಭಿಸಿದೆ.

ಇಂದಿನ ಜಾಗತೀಕರಣದ ಭರಾಟೆಯಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಕರ್ನಾಟಕ ಉದ್ಯೋಗಗಳ ಕಣಜವಾಗಿ ಹೊರಹೊಮ್ಮಿದೆ. ಪ್ರತಿವರ್ಷ ಲಕ್ಷಾಂತರ ಉದ್ಯೋಗಗಳನ್ನು ಕರ್ನಾಟಕ ಸೃಷ್ಠಿಸುತ್ತದೆ. ಆದರೆ ಇದರ ಲಾಭ ನಮ್ಮ ಕನ್ನಡಿಗರಿಗೆ ಸಿಗುತ್ತಿಲ್ಲ ಎನ್ನುವುದು ದುಖಃದ ಸಂಗತಿ. ಇದಕ್ಕೆ ಕಾರಣ ಹಲವಾರಿವೆ.

ಮೊದಲನೆಯದಾಗಿ ಕನ್ನಡಿಗರಿಗೆ ಉದ್ಯೋಗಗಳ ಮಾಹಿತಿ ಸರಿಯಾದ ಸಮಯಕ್ಕೆ ಸಿಗದಿರುವುದು, ವಿವಿಧ ಕ್ಷೇತ್ರಗಳಲ್ಲಿ ಇರುವ ಸರಕಾರಿ, ಅರೆಸರಕಾರಿ, ಖಾಸಗಿ ಹುದ್ದೆಗಳ ಪರಿಚಯವಿಲ್ಲದಿರುವುದು. ಇಂದು ಕೇವಲ ಐಟಿ ಉದ್ಯಮಕ್ಕೆ ಮಾತ್ರ ಹೆಚ್ಚಿನ ಮಹತ್ವ ಸಿಗುತ್ತಿದೆ.

Karnataka Rakshana Vedike Job Information Facebook Page

ಆದರೆ, ಐಟಿ ಉದ್ಯಮ ಹೊರತುಪಡಿಸಿ ಇತರೆ ವಲಯಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ಗಮನ ಹರಿಸದಿರುವುದು. ಕಾಲೇಜು ಮಟ್ಟದಲ್ಲಿ ಇವುಗಳ ಬಗ್ಗೆ ಮಾಹಿತಿ ಸಿಗದಿರುವುದು, ಈ ಹುದ್ದೆಗಳನ್ನು ಪಡೆಯಲು ಬೇಕಿರುವ ಪೂರ್ವತಯಾರಿ, ಹೀಗೆ ಹಲವಾರು ಸಮಸ್ಯೆಗಳನ್ನು ನಮ್ಮ ಕನ್ನಡಿಗರು ಎದುರಿಸುತ್ತಿದ್ದಾರೆ.

ಈ ಸಮಸ್ಯೆಗಳನ್ನು ಪರಿಹರಿಸುವ ಒಂದು ಪ್ರಯತ್ನವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲು ಸಜ್ಜಾಗಿದೆ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಮೊದಲಿನ ದಿನಗಳಿಂದಲೂ ಕರ್ನಾಟಕದಲ್ಲಿ ಹುಟ್ಟುವ ಕೆಲಸಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್
ನುವ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಾ ಬರುತ್ತಿದೆ. ಇದಕ್ಕೆ ನಾವು ಮಾಡಿರುವ ಹೊರಾಟಗಳು ಹಲವಾರಿವೆ. ಇದರ ಮುಂದುವರಿದ ಯೋಜನೆಯೇ " ಕರವೇ ಉದ್ಯೋಗ ಮಾಹಿತಿ ಕೇಂದ್ರ".

ಈ ಯೋಜನೆಯ ಮೂಲಕ ಕರ್ನಾಟಕದಲ್ಲಿರುವ ಯುವಶಕ್ತಿಗೆ ತಮ್ಮ ಕಾಲಮೇಲೆ ತಾವು ನಿಲ್ಲುವ ಪ್ರಯತ್ನಕ್ಕೆ ಒತ್ತಾಸೆಯಾಗಿ ನಿಲ್ಲುತಿದ್ದೇವೆ. ಈ ಯೋಜನೆಯ ಮೊದಲ ಹಂತವಾಗಿ ಫೇಸ್‌ಬುಕ್ ಗುಂಪೊಂದನ್ನು ತೆರೆಯಲಾಗಿದೆ.

ಈ ಗುಂಪಿನಲ್ಲಿ ಕೆಲಸ ಅರಸುವವರು, ವಿವಿಧ ಕಂಪನಿಗಳ ಹೆಚ್.ಆರ್ ಗಳು, ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಗಳು, ಅನುಭವಿಗಳು ಇದ್ದಾರೆ. ಈ ಗುಂಪಿನ ಮೂಲಕ ಕೆಲಸ ಅರಸುವವರಿಗೆ ಉದ್ಯೋಗ ಮಾಹಿತಿ, ಕೆಲಸ ಪಡೆಯಲು ಬೇಕಿರುವ ತಯಾರಿ, ಉಪಯುಕ್ತ ಮಾಹಿತಿ ಹೀಗೆ ಹಲವಾರು ವಿಧಗಳಲ್ಲಿ ಕನ್ನಡಿಗರಿಗೆ ನೆರವಾಗಲು ಈ ಗುಂಪು ಸಜ್ಜಾಗಿದೆ.

ಈ ಗುಂಪಿನಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ವಲಯಗಳ, ಎಲ್ಲಾ ತರಹದ ಖಾಲಿ ಕೆಲಸಗಳ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಈ ಮೂಲಕ ನಾಡಿನಾದ್ಯಂತ ಕೆಲಸ ಹುಡುಕುತ್ತಿರುವ ಕನ್ನಡಿಗರಿಗೆ ನೆರವಾಗುವ ಪ್ರಯತ್ನ.

ಈ ಪ್ರಯತ್ನ ಸಫಲವಾಗುವುದಕ್ಕೆ ನಿಮ್ಮಗಳ ನೆರವು ಅತ್ಯಾವಶ್ಯಕ. ಈ ಯೋಜನೆಯನ್ನು ಎಲ್ಲಾ ಕನ್ನಡಿಗರಿಗೆ ತಲುಪಿಸುವಲ್ಲಿ ನಿಮ್ಮ ಸಹಾಯ ನಮಗೆ ಬೇಕೇ ಬೇಕು.

ನೀವು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಇದ್ದಲ್ಲಿ ಕರವೇ ಉದ್ಯೋಗ ಮಾಹಿತಿ ಕೇಂದ್ರದಲ್ಲಿ ಹಂಚಿಕೊಳ್ಳಿ. ಉದ್ಯೋಗ ಹುಡುಕುತ್ತಿರುವ ಕನ್ನಡಿಗರಿಗೆ "ಕರವೇ ಉದ್ಯೋಗ ಮಾಹಿತಿ ಕೇಂದ್ರ"ದ ಬಗ್ಗೆ ತಿಳಿಸಿ. ಫೇಸ್ ಬುಕ್ ಪುಟದ ಲಿಂಕ್ ಕ್ಲಿಕ್ ಮಾಡಿ.

English summary
Karnataka Rakshana Vedike IT unit has created a Facebook page to give information about the latest job opening in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X