ಗುಪ್ತಚರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 26 : ಗುಪ್ತಚರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ಕರ್ನಾಟಕ ಪೊಲೀಸ್ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 15 ಜನವರಿ 2017ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ: ಸಬ್ ಇನ್ಸ್ ಪೆಕ್ಟರ್ (41)
ಹುದ್ದೆ ಸ್ಥಳ: ಕರ್ನಾಟಕ
ವೇತನ ಶ್ರೇಣಿ: 20000 ರಿಂದ 36300 ರು ವರೆಗೆ(ತಿಂಗಳಿಗೆ).
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15 ಜನವರಿ 2017. [ಕೆಪಿಎಸ್ ಸಿಯಿಂದ 1203 ಹುದ್ದೆಗೆ ಅರ್ಜಿ ಆಹ್ವಾನ]

Karnataka Police Recruitment 2016-17 (Sub Inspector Posts)

ವಯೋಮಿತಿ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 21, ಗರಿಷ್ಠ 28 ವಯೋಮಿತಿ ಉಳ್ಳವರಾಗಿರಬೇಕು.

ವಿದ್ಯಾರ್ಹತೆ: ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಯಾವುದಾದರೂ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 250 ರು. ಇತರೆ ಹಿಂದುಳಿದ ವರ್ಗಕ್ಕೆ 100ರು, ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Police recruitment 2016-17 notification Sub Inspector posts :- Karnataka Police invites application for the position of 41 Police Sub Inspector (Intelligence) vacancies. Apply online before 15th January 2017.
Please Wait while comments are loading...