ಕರ್ನಾಟಕ ಹೈಕೋರ್ಟಿನಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಹೈಕೋರ್ಟಿನಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ವಿವರ ನೀಡಲಾಗಿದೆ. ಭಾಷಾಂತರಗಾರ(Translators) ಹುದ್ದೆಗೆ ಅರ್ಜಿ ಸಲ್ಲಿಸಲು ನವೆಂಬರ್ 15, 2017 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್
ಹುದ್ದೆ ಹೆಸರು: ಭಾಷಾಂತರಗಾರರು
ಒಟ್ಟು ಹುದ್ದೆ : 10
ಉದ್ಯೋಗ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15 ನವೆಂಬರ್ 2017

ವಿದ್ಯಾರ್ಹತೆ: ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ (ಕನಿಷ್ಟ ಎರಡನೇ ದರ್ಜೆಯಲ್ಲಿ ಪಾಸಾಗಿರಬೇಕು). ಪದವಿಯಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ವ್ಯಾಸಂಗ ಮಾಡಿರಬೇಕು.
ವಯೋಮಿತಿ: SC/ST/OBC (ಕೆಟಗರಿ-I) ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ (ಕೆಟಗರಿ-II-A/II-B/IIIA/III-B) 18 ರಿಂದ 38 ವರ್ಷ, ಇತರೆ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ (15/11/2017 ರಂತೆ ಅನ್ವಯ).
ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಮುಂತಾದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications