Karnataka City Corporation Recruitment 2023: ಐದು ಜಿಲ್ಲೆಗಳಲ್ಲಿ 704 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಬೆಂಗಳೂರು, ಜನವರಿ 20: ಕರ್ನಾಟಕ ರಾಜ್ಯದ ವಿವಿಧೆಡೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 704 ಹುದ್ದೆಗಳ ಭರ್ತಿಗೆ ಸರ್ಕಾರ ಅರ್ಹ ಮಹಿಳೆಯರು ಮತ್ತು ಪರುಷರಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯದ ಬಳ್ಳಾರಿ ಜಿಲ್ಲೆ ಉಡುಪಿ, ಚಿತ್ರದುರ್ಗ, ಮಂಡ್ಯ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳಿಗೆ ಅರ್ಹರು ಅರ್ಜಿಯನ್ನು ಫೆಬ್ರವರಿ 14ರೊಳಗೆ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹರೆ, ವಯಸ್ಸು, ಶುಲ್ಕ ಮತ್ತು ವಿಧಾನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಮಹಾನಗರ ಪಾಲಿಕೆ ಹುದ್ದೆಗಳ ವಿವರ
ಖಾಲಿ ಹುದ್ದೆಗಳು- 704
ಹುದ್ದೆ ಹೆಸರು - ಪೌರ ಕಾರ್ಮಿಕರು
ಕೆಲಸದ ಸ್ಥಳ - ಚಿತ್ರದುರ್ಗ, ಮಂಡ್ಯ, ಬಳ್ಳಾರಿ, ಉಡುಪಿ ಮತ್ತು ತುಮಕೂರು

ಎಲ್ಲೆಲ್ಲಿ ಎಷ್ಟು ಹುದ್ದೆಗಳು ಇವೆ
* ಬಳ್ಳಾರಿ - 220
* ಚಿತ್ರದುರ್ಗ - 30
* ಮಂಡ್ಯ - 170
* ತುಮಕೂರು - 129
* ಉಡುಪಿ - 155
ವೇತನದ ಮಾಹಿತಿ
ರಾಜ್ಯದ ಈ ಐದು ಮಹಾನಗರ ಪಾಲಿಕೆಗಳ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಮಾಸಿಕವಾಗಿ 17,000 ರೂ.ನಿಂದ 28,950ರೂ. ವರೆಗೆ ಸಂಬಳ ಇರಲಿದೆ.

ವಯಸ್ಸಿನ ಅರ್ಹತೆ
ಅಭ್ಯರ್ಥಿಗಳಿಗೆ ಕನಿಷ್ಠ -18 ವರ್ಷಗಳು
ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ- 55 ವರ್ಷಗಳು
ವಿದ್ಯಾರ್ಹತೆ ಏನು?
ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಲ್ಲದೇ ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ ಪೌರಕಾರ್ಮಿಕರಾಗಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಕ್ಲೀನಿಂಗ್ ವಿಭಾಗದಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿದ ಅನುಭವ ಇರಬೇಕು.
ಅರ್ಜಿ ಶುಲ್ಕ
* ಸಾಮಾನ್ಯ ವರ್ಗ, 2ಎ/ 2ಬಿ/ 3ಎ/3ಬಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- 100 ರೂಪಾಯಿ.
* ನಿಗದಿತ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಕೆಳಗಿನ ಲಿಂಕ್ ಅಥವಾ ಅಧಿಕೃತ ವೆಬ್‌ಸೈಟ್ ಲಿಂಕ್‌ಗಳಿಗೆ ಭೇಟಿ ನೀಡಿ ಅಧಿಸೂಚನೆ ಪಡೆಯಿರಿ. ನಂತರ ಅಧಿಸೂಚನೆಯನ್ನು ಓದಿ ಅಲ್ಲಿ ತಿಳಿಸಲಾದ ವಿಳಾಸಕ್ಕೆ ಅರ್ಜಿ ಭರ್ತಿ ಮಾಡಿ 14 ಫೆಬ್ರವರಿ 2023ರೊಳಗೆ ಸಲ್ಲಿಸಬೇಕು.
ಲಿಂಕಗಳು:
ಉಡುಪಿ - https://drive.google.com/file/d/1NFrW0v-SjQp-L_RJWKGwpvFWWBGkkpaE/view
ಚಿತ್ರದುರ್ಗ- https://drive.google.com/file/d/1QLxSF9-L4ym9LzI1SkBiF-01fMbl2Axj/view
ಮಂಡ್ಯ- https://drive.google.com/file/d/1QM5izN0HupoE5K_w6JCvru3R_rgSzsH1/view
ಬಳ್ಳಾರಿ- https://drive.google.com/file/d/1QQClWcpakrg8lYUdtD0Q0N2U8Vs4XDOK/view
ತುಮಕೂರು- https://drive.google.com/file/d/1QUwRaxh4hFkRE-Z50UnQEubMmnPsCepu/view












Click it and Unblock the Notifications