Kalaburagi Gram Panchayat Jobs: 45 ಲೈಬ್ರರಿ ಸೂಪರ್‌ವೈಸರ್ ಹುದ್ದೆ ಖಾಲಿ ಇವೆ, ವೇತನ, ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 24: ಕಲಬುರಗಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳ ಖಾಲಿ ಇದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರಿ ಹುದ್ದೆ ಬಯಸುವವರು ಶೀಘ್ರವೇ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಕಲಬುರಗಿ ಗ್ರಾಮ ಪಂಚಾಯತಿ ಒಟ್ಟು 45 ಲೈಬ್ರರಿ ಸೂಪರ್‌ವೈಸರ್ (ಗ್ರಂಥಾಲಯ ಮೇಲ್ವಿಚಾರಕರು) ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಪಂಚಾಯಿತಿಯು ಸೆಪ್ಟೆಂಬರ್ 2023ರಲ್ಲಿ ಹೊರಡಿಸಿರುವ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 13ರೊಳಗೆ ಆಪ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಕಲಬುರಗಿ ಗ್ರಾಮ ಪಂಚಾಯಿತಿ
ಹುದ್ದೆಗಳ ಹೆಸರು: ಗ್ರಂಥಾಲಯ ಮೇಲ್ವಿಚಾರಕರು
ಖಾಲಿ ಹುದ್ದೆಗಳ ಸಂಖ್ಯೆ: 45
ಉದ್ಯೋಗ ಸ್ಥಳ: ಕಲಬುರಗಿ
ಮಾಸಿಕ ವೇತನ: 15,196.72ರೂಪಾಯಿ
ವಿದ್ಯಾರ್ಹತೆ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ದ್ವಿತೀಯ ಪಿಯುಸಿ, ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣೀಕರಣ ಕೋರ್ಸ್ ಮುಗಿಸಿರಬೇಕು ಎಂದು ಕಲಬುರಗಿ ಗ್ರಾಮ ಪಂಚಾಯತ್ ಅಧಿಕೃತ ಅಧಿಸೂಚನೆ ತಿಳಿಸಿದೆ.
ವಯೋಮಿತಿ ಮತ್ತು ಸಡಿಲಿಕೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಅಕ್ಟೋಬರ್ 13 ರಂದು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ-I ಅಭ್ಯರ್ಥಿಗಳಿಗೆ ಐದು ವರ್ಷ 05 ವರ್ಷ, ಪ್ರವರ್ಗ 2ಎ/2B/3A ಮತ್ತು 3B ಅಭ್ಯರ್ಥಿಗಳಿಗೆ ಮೂರು ವರ್ಷ, PWD/ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕದ ಮಾಹಿತಿ
ಎಲ್ಲ ಅಭ್ಯರ್ಥಿಗಳಿಗೆ ಸಮಾನವಾಗಿ ಅರ್ಜಿ ಶುಲ್ಕವನ್ಉ ರೂ.40 ನಿಗದಿ ಮಾಡಲಾಗಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಮೆರಿಟ್ ಆಧಾರದಲ್ಲಿ ಮಾಡಲಾಗುವುದು ಎಂದು ಗ್ರಾಮಪಂಚಾಯತಿ ತಿಳಿಸಿದೆ.
ಅಜಿ ಸಲ್ಲಿಕೆ ವಿಧಾನ
ಅಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಜೊತೆಗೆ ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಅಕ್ಟೋಬರ್ 13ರೊಳಗೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಲಬುರಗಿ, ಕರ್ನಾಟಕ ಇಲ್ಲಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://kalaburagi.nic.in/ ಜಾಲತಾಣಕ್ಕೆ ಭೇಟಿ ನೀಡುವಂತೆ ತಿಳಿಸಿದೆ.











Click it and Unblock the Notifications