ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ: ವಿವರಗಳು
ಮಡಿಕೇರಿ, ಡಿಸೆಂಬರ್ 22: ಕೊಡಗು ಜಿಲ್ಲೆಯಲ್ಲಿ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 21 ರಿಂದ 35 ವರ್ಷಗಳ ವಯೋಮಿತಿಯ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳು ಮತ್ತು ಅಂಕಪಟ್ಟಿಗಳೊಂದಿಗೆ ಜನವರಿ 8ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ. ಹುದ್ದೆಗಳ ವಿವರಗಳು ಇಲ್ಲಿವೆ.
ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ, ಎಪಿಡಿಮಿಯಾಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ 'ಯುವ ಸ್ಪಂದನ' ಯೋಜನೆ-ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳನ್ನು ಒದಗಿಸಲು ಹಾಗೂ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನದಡಿಯಲ್ಲಿ ಕಚೇರಿ ಕೆಲಸಕ್ಕೆ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

21 ರಿಂದ 35ವರ್ಷದೊಳಗಿನ ಪದವಿ ಹಾಗೂ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ, ಕನ್ನಡವನ್ನು ಬರೆಯುವ ಹಾಗೂ ಸ್ಪಷ್ಟವಾಗಿ ಮಾತನಾಡುವ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು, ಉತ್ತಮ ಅಂರ್ತವ್ಯಕ್ತಿತ್ವ, ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯವನ್ನು ಹೊಂದಿರುವ, ಕೊಡಗು ಜಿಲ್ಲೆಯಲ್ಲಿ ಪ್ರಯಾಣಿಸುವಂತಹ, ಸೇವಾ ಮನೋಭಾವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
ಅಭ್ಯರ್ಥಿಗಳು ತಮ್ಮ ಸ್ವ ವಿವರಗಳು ಮತ್ತು ಅಂಕಪಟ್ಟಿಗಳೊಂದಿಗೆ ಜನವರಿ 8 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ. ನೇರ ಸಂದರ್ಶನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಡಿಕೇರಿ ಇಲ್ಲಿ ನಡೆಯಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಕೊಡಗು ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9632104204, 7204363367.
ಮೂಲ ದಾಖಲೆಗಳ ಪರಿಶೀಲನೆ: ಕೊಡಗು ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.
ಖಾಲಿ ಇರುವ ಹುದ್ದೆಗಳ ಪೈಕಿ 6 ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 1:3 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗಾಗಿ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್‍ಸೈಟ್ http://kodagu.nic.in ನಲ್ಲಿ ಪ್ರಕಟಿಸಲಾಗಿದೆ.
ಈ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳ ಪರಿಶೀಲನೆಗೆ 2025ರ ಜನವರಿ 8ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿಯ ಕಚೇರಿ ಸಭಾಂಗಣದಲ್ಲಿ ಹಾಜರಾಗಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲಾಧಿಕಾರಿಯವರ ಕಚೇರಿ ದೂರವಾಣಿ ಸಂಖ್ಯೆ 08272-225811/ 225500 ಗೆ ಕರೆ ಮಾಡಿ ಆಡಳಿತ ಶಾಖೆಯನ್ನು ಸಂಪರ್ಕಿಸಬಹುದು.
ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: 500 ಅಸಿಸ್ಟೆಂಟ್ ಹುದ್ದೆಗಳಿಗೆ ನ್ಯೂ ಇಂಡಿಯಾ ಅಶುರನ್ಸ್ ಕಂಪನಿ ಲಿಮಿಟೆಡ್ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು 21 ರಿಂದ 30 ವರ್ಷದೊಳಗಿನ ಪದವೀಧರರಾಗಿರಬೇಕು. ಅರ್ಜಿಗಳನ್ನು ಜನವರಿ 1ರೊಳಗೆ ವೆಬ್‍ಸೈಟ್ https://www.newindia.co.in/ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬೇಕು.
ಡಿಸೆಂಬರ್ 27ರಂದು ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್‍ನಲ್ಲಿ ಈ ನೇಮಕಾತಿ ಪರೀಕ್ಷೆ ಹಾಗೂ ವಿವಿಧ ಬ್ಯಾಂಕ್ ಮತ್ತು ಇನ್ಶುರೆನ್ಸ್ ಕಂಪನಿಗಳ ನೇಮಕಾತಿ ಪರೀಕ್ಷೆಗಳ ಬಗ್ಗೆ ಉಚಿತ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಸಂದೇಶ ಕಳಿಸಬಹುದಾಗಿದೆ.












Click it and Unblock the Notifications