ಇಸ್ರೋದಲ್ಲಿ ವಿಜ್ಞಾನಿ/ಇಂಜಿನಿಯರ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

Posted By:
Subscribe to Oneindia Kannada

ಮೈಸೂರು, ಮೇ 19 : ಇಸ್ರೋದಲ್ಲಿ 375 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವವರು 2016ರ ಆಗಸ್ಟ್ 31ಕ್ಕೆ ಬಿ.ಇ./ಬಿ.ಟೆಕ್. ಪದವಿಯನ್ನು ಶೇಕಡ 65 ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು.

Job opportunity for scientists and engineers in ISRO

ವಯೋಮಿತಿ : 2016ರ ಮೇ 25ಕ್ಕೆ ಕನಿಷ್ಟ 21-35 ವರ್ಷ ಮೀರಿರಬಾರದು. ಎಸ್.ಸಿ./ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಓ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆಯುಂಟು.

ಅರ್ಜಿಯನ್ನು www.isro.gov.in ವೆಬ್‍ಸೈಟ್ ವಿಳಾಸದಲ್ಲಿ ಮೇ 25ರೊಳಗಾಗಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು, ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಬಹುದು.

Ramesh Kittur

ರಮೇಶ್ ಎಚ್. ಕಿತ್ತೂರು ಅವರಿಗೆ ಪಿಎಚ್.ಡಿ. ಪದವಿ

ಮೈಸೂರು ವಿಶ್ವವಿದ್ಯಾಲಯವು ರಮೇಶ್ ಎಚ್. ಕಿತ್ತೂರು ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಎಸ್. ಮದಿಅಲಗನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ "Effect of Selected Yogasanas and Pranayama on Physical and Physiological Parameters of Adolescent Boys" ಕುರಿತು ಸಾದರಪಡಿಸಿದ Physical Eduction ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ.

ರಮೇಶ್ ಎಚ್. ಕಿತ್ತೂರು ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government jobs in Karnataka : There are 375 scientist/engineer vacancies in ISRO. Interested BE and BTech candidates can apply online through ISRO official website. Last date to submit application is 25th May.
Please Wait while comments are loading...