ಜೂ.24ರಂದು ಬೆಂಗ್ಳೂರಿನ ಏಟ್ರಿಯಾ ಕಾಲೇಜಿನಲ್ಲಿ ಉದ್ಯೋಗ ಮೇಳ

Posted By:
Subscribe to Oneindia Kannada

ಬೆಂಗಳೂರು, ಜೂನ್ 20 : ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಆನಂದ ನಗರದಲ್ಲಿ ಇದೇ ಜೂನ್ 24ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಕರ್ನಾಟಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರಿನ ಆನಂದ ನಗರದ ಏಟ್ರಿಯಾ ಕಾಲೇಜು ಆವರಣದಲ್ಲಿ ಬೆಳಗ್ಗೆ 09 ರಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಮೇಳದಲ್ಲಿ ಸುಮಾರು 80 ಉದ್ಯೋಗ ನೀಡುವ ಕಂಪೆನಿಗಳು ಭಾಗವಹಿಸಲಿವೆ.

Job fair to be held at Atria Institute of technology ASKB Campus Bengaluru on June 24th

ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸಿದವರು, ಎಸ್‌ಎಸ್‌ಎಲ್‌ಸಿ, ಡಿಪ್ಲಮೋ, ಬಿಇ, ಬಿಟೆಕ್, ಐಟಿಐ, ಪದವಿ ಮುಗಿಸಿದ ಯುವಕ ಮತ್ತು ಯುವತಿಯರು ತಮ್ಮ ಮೂಲ ದಾಖಲಾತಿಗಳೊಂದಿಗೆ ಆಧಾರ್ ಕಾರ್ಡ್ ಪ್ರತಿ ಸಮೇತ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್ ನಿಂದ ಈ ಟೋಲ್ ಫ್ರೀ ನಂಬರಿಗೆ 7878704433 ಮಿಸ್ ಕಾಲ್ ಕೊಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸತಕ್ಕದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Job fair Mela to be held on 24.06.2017 at Atria Institute of technology ASKB Campus, 1st Main, AGS colony, Anand Nagar Bengaluru 560024. Mela Starts at 9AM.
Please Wait while comments are loading...