ಬಳ್ಳಾರಿ ಉದ್ಯೋಗ ಮೇಳ; 110 ಜನರಿಗೆ ಉದ್ಯೋಗ
ಬಳ್ಳಾರಿ, ಮಾರ್ಚ್ 04: ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಶ್ರೀ ಶಂಕರ್ ಆನಂದ್ ಸಿಂಗ್ ಕಾಲೇಜು ಜಂಟಿಯಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದವು. 19 ಖಾಸಗಿ ಕಂಪನಿಗಳು ಭಾಗಿಯಾಗಿದ್ದು, 110 ಜನರಿಗೆ ಉದ್ಯೋಗ ಸಿಕ್ಕಿದೆ.
ಬುಧವಾರ ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಯುವ ಮುಖಂಡ ಸಂದೀಪ್ ಸಿಂಗ್, "ಉದ್ಯೋಗ ಮೇಳಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಯುವ ಪೀಳಿಗೆಯ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ" ಎಂದರು.
"ಇಂದಿನ ಯುವಜನತೆಗೆ ಉದ್ಯೋಗದ ಅವಶ್ಯಕತೆಯಿದೆ, ಅವರ ಬದುಕು ಕಟ್ಟಿಕೊಳ್ಳಲು ಉದ್ಯೋಗವು ನೆರವಾಗಲಿದೆ. ಈ ನಿಟ್ಟಿನಲ್ಲಿ ಇಂತಹ ಉದ್ಯೋಗ ಮೇಳಗಳು ಇಲ್ಲಿಗೆ ಸೀಮಿತವಾಗದೆ ನಿರಂತರವಾಗಿ ನಡೆಯಲಿ" ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ 19 ಖಾಸಗಿ ಕಂಪನಿಗಳು ಭಾಗಿಯಾಗಿದ್ದವು. 617 ಪುರುಷರು ಮತ್ತು 352 ಮಹಿಳೆಯರನ್ನು ಒಳಗೊಂಡಂತೆ ಒಟು 969 ಜನರು ತಮ್ಮ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದರು. 110 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ದಾವಣಗೆರೆಯಲ್ಲಿ ಉದ್ಯೋಗ ಮೇಳ; ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾರ್ಚ್ 6ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ದಾವಣಗೆರೆ ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಜಂಟಿಯಾಗಿ ಮೇಳ ಆಯೋಜಿಸಿದ್ದು, ಆಸಕ್ತರು ಬೆಳಗ್ಗೆ 10 ಗಂಟೆಗೆ ಮೇಳಕ್ಕೆ ಆಗಮಿಸಬಹುದು.












Click it and Unblock the Notifications