IRCTC Recruitment: ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ, ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ
ಬೆಂಗಳೂರು, ಮೇ 27: ಭಾರತೀಯ ರೈಲ್ವೆ ಇಲಾಖೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿರುವ 'ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC- Indian Railway Catering and Tourism Corporation) ಯಲ್ಲಿ ಭರ್ಜರಿ ಉದ್ಯೋಗಗಳ ನೇಮಕಾತಿ ನಡೆದಿದೆ. ಈ ಸಂಬಂಧ ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದೆ. ಉನ್ನತ ಹುದ್ದೆ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಹೌದು, IRCTC ಹೊರಡಿಸಿರುವ ಅಧಿಸೂಚನೆ ಪ್ರಕಾರ, ಖಾಲಿ ಇರುವ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಕರೆಯಲಾದ IRCTC ಸಲಹೆಗಾರರ ಹುದ್ದೆಗಳಿಗೆ ನೇಮಕಾತಿ ಈಗಾಗಲೇ ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 06 ದಿನಾಂಕವರೆಗೆ ಸಮಯ ಇದೆ. ಹಾಗೆಂದ ಮಾತ್ರಕ್ಕೆ ಕೊನೆಯ ದಿನದವರೆಗೂ ಕಾಯದೇ ಕೂಡಲೇ ಅರ್ಜಿ ಹಾಕಬೇಕಿದೆ.

ಸದರಿ ಸಲಹೆಗಾರರ ಹುದ್ದೆ ಸೇರಬಯಸುವವರು IRCTC ಅಧಿಕೃತ ವೆಬ್‌ಸೈಟ್ irctc.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇಲ್ಲಿನ ಲಿಂಕ್ ಮೂಲಕ ಕೇಳಲಾದ ಎಲ್ಲ ಮಾಹಿತಿ ನಮೂದಿಸಿ ಸರ್ಜಿ ಸಲ್ಲಿಸಬೇಕು. ವಿಶೇಷವೆಂದರೆ ಲಿಖಿತ ಪರೀಕ್ಷೆ ಇಲ್ಲದೇ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: IRCTC
ಉದ್ಯೋಗ ಹೆಸರು: ಸಲಹೆಗಾರ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಜೂನ್ 06
ವಿದ್ಯಾರ್ಹತೆ: ಕನಿಷ್ಠ SSLC
ಪೋಸ್ಟಿಂಗ್: ಮಹಾರಾಷ್ಟ್ರದ ಮುಂಬೈ
ವಿದ್ಯಾರ್ಹತೆ
ಸದರಿ ಐಆರ್‌ಸಿಟಿಸಿ ಖಾಲಿ ಉದ್ಯೋಗಗಳ ಸೇರಬಯಸುವವರು 10 ನೇ ತರಗತಿ ಇಲ್ಲವೇ ಯಾವುದೇ ಶೈಕ್ಷಣಿಕ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಸಂದರ್ಶನದಲ್ಲಿ ಆಯ್ಕೆ ಆಗುವವರಿಗೆ ಆಕರ್ಷಕ ವೇತನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಗರಿಷ್ಠ ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 64 ವರ್ಷ. ಇದು ಈ ತಿಂಗಳ ಮೇ 19 ರವರೆಗಿನ ಲೆಕ್ಕಾಚಾರದಂತೆ ನಿರ್ಧರಿಸಲಾಗಿದೆ. ಇನ್ನೂ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಆಫ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ
ಆನ್‌ಲೈನ್ ಜೊತೆಗೆ ಇ-ಮೇಲ್ ಮೂಲಕವು ಅಜಿ ಸಲ್ಲಿಕೆಗೆ ಅರ್ಜಿ ಹಾಕಬಹುದು. ಕೇಳಲಾದ ಅಗತ್ಯ ದಾಖಲೆ ಸಮೇತ ನೀವು ಈ ಅಧಿಕೃತ [email protected] ಗೆ ಇಮೇಲ್ ಅಡ್ರೆಸ್‌ಗೆ ಮೇಲ್ ಮಾಡಬಹುದು. ಇದಷ್ಟೇ ಅಲ್ಲದೇ ಅಂಚೆ ಮೂಲಕ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ವಿಳಾಸ ''ವ್ಯವಸ್ಥಾಪಕರು (ಮಾನವ ಸಂಪನ್ಮೂಲ ಅಭಿವೃದ್ಧಿ), ಐಆರ್‌ಸಿಟಿಸಿ ಲಿಮಿಟೆಡ್, ಪಶ್ಚಿಮ ವಲಯ ಕಚೇರಿ, ಫೋರ್ಬ್ಸ್ ಕಟ್ಟಡ, ನೆಲ ಮತ್ತು 3 ನೇ ಮಹಡಿ, ಚರಂಜಿತ್ ರಾಯ್ ಮಾರ್ಗ, ಫೋರ್ಟ್, ಮುಂಬೈ - 400001'' ಇಲ್ಲಿಗೆ ಕಳುಹಿಸುವಂತೆ ಅಧಿಸೂಚನೆ ತಿಳಿಸಿದೆ. ಅರ್ಜಿ ಸಲ್ಲಿಕೆ ಮೊದಲು ಒಮ್ಮೆ ಅಧಿಸೂಚನೆ ಪೂರ್ಣ ಓದಿಕೊಂಡು ಸಲ್ಲಿಸುವುದು ಒಳಿತು.












Click it and Unblock the Notifications