IRCTC ನೇಮಕಾತಿ: ರೈಲ್ವೆ ವ್ಯಾಪ್ತಿಯಲ್ಲಿ ಉದ್ಯೋಗವಕಾಶ, ಭರ್ಜರಿ ವೇತನ ವಿವರ
ಬೆಂಗಳೂರು, ಜುಲೈ 24: ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಯೋಜಿತ ಪ್ರವಾಸ (IRCTC) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿಯು ಮೂರು ವರ್ಷದ ಅವಧಿಗೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ನಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್/ಐಟಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಅವರಿಗೆ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಲಿದೆ.

ಅರ್ಜಿ ಸಲ್ಲಿಕೆಗೂ ಮೊದಲು ಯಾರು ಅರ್ಹರು, ಗರಿಷ್ಠ ವಯಸ್ಸು, ವೇತನ, ಪೋಸ್ಟಿಂಗ್, ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಮಾಹಿತಿ ಇಲ್ಲಿ ತಿಳಿಯಿರಿ.
ಹುದ್ದೆ ಹೆಸರು: ಗ್ರೂಪ್ ಜನರಲ್ ಮ್ಯಾನೇಜರ್/ಐಟಿ ಹುದ್ದೆಗೆ
ಒಟ್ಟು ಹುದ್ದೆ: ಒಂದು
ಪೋಸ್ಟಿಂಗ್: ನವದೆಹಲಿ
ಮಾಸಿಕ ವೇತನ: ರೂ.37400 ರಿಂದ 67000 ರೂ.
ಅರ್ಜಿ ಸಲ್ಲಿಕೆ ಕೊನೆ ದಿನ: 10 ಆಗಸ್ಟ್ 2024
ವಿದ್ಯಾರ್ಹತೆ ಮಾಹಿತಿ
IRCTC ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಹುದ್ದೆಗೆ ಅಗತ್ಯ ವಿದ್ಯಾರ್ಹತೆಗಳನ್ನು ಹೊಂದಿರಬೇಕಿದೆ. ಅಭ್ಯರ್ಥಿಗಳು ಮಾಹಿತಿ ತಂತ್ರಜ್ಞಾನ (ಐಟಿ) ಮಾನ್ಯತೆ ಹೊಂದಿರುವ ಅಧಿಕಾರಿಗಳಾಗಿರಬೇಕು. ಇವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ವಯೋಮಿತಿ ವಿವರ
ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಗರಿಷ್ಠ ವಯಸ್ಸು 55 ವರ್ಷಗಳನ್ನು ದಾಟಿರಬಾರದು. 03 ವರ್ಷಗಳ ಆರಂಭಿಕ ಅವಧಿಗೆ ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು IRCTC ನೇಮಕಾತಿ ಅಧಿಸೂಚನೆ ತಿಳಿಸಿದೆ.
ಅನುಭವಿ ಅಭ್ಯರ್ಥಿಗಳಿಗೆ ಆದ್ಯತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ವಾಣಿಜ್ಯ ವಿಭಾಗದಲ್ಲಿ ಅನುಭವ ಹೊಂದಿರಬೇಕು. ಈ ರಂಗದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಅಧಿಕಾರಿಯ ಅನುಭವದ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪೋಸ್ಟಿಂಗ್, ಮಾಸಿಕ ವೇತನ
IRCTC ಈ ಹುದ್ದೆಗೆ ಆಯ್ಕೆ ಆಗುವವರಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುವುದು. ಅವರಿಗೆ ಮಾಸಿಕ ರೂ.37400ರಿಂದ 67000 ರೂ.ವರೆಗೆ ನೀಡಲಾಗುವುದು (ಆರನೇ ವೇತನ ಆಯೋಗಡಿ GP-10000 ರೂ.ಸಿಗಲಿದೆ).
ಅರ್ಹ ಅಭ್ಯರ್ಥಿಗಳು ಈ ಕೂಲಡೇ ಅಗತ್ಯ ದಾಖಲೆಗಳ ಸಹಿತ ನಿರ್ದಿಷ್ಟಪಡಿಸಿದ ಇಮೇಲ್ ವಿಳಾಸಕ್ಕೆ ಸ್ಕ್ಯಾನ್ ಮಾಡಿದ ಪ್ರತಿಯನ್ನು ಇಮೇಲ್ ([email protected]) ಮೂಲಕ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications