IRCTC Recruitment 2023: ಐಆರ್‌ಸಿಟಿಸಿಯಲ್ಲಿ ಉದ್ಯೋಗವಕಾಶ, ಇದೇ ಏ. 13ಕ್ಕೆ ನೇರ ಸಂದರ್ಶನ
ಬೆಂಗಳೂರು, ಏಪ್ರಿಲ್ 05: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ವು ತನ್ನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಖಾಲಿ ಇರುವ ಒಟ್ಟು 6 ಟೂರಿಸಂ ಮಾನಿಟರ್ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು. ಇದೇ ತಿಂಗಳ ಏಪ್ರಿಲ್ 13 ರಂದು ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯಸುವುದಾಗಿ ನಿಗಮ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ಖಾಲಿ ಹುದ್ದೆಗಳು ಯಾವವು, ಪೋಸ್ಟಿಂಗ್, ಶೈಕ್ಷಣಿಕ ಅರ್ಹತೆ, ವೇತನ, ಇನ್ನಿತರ ಅಂಶಗಳನ್ನು ಇಲ್ಲಿ ತಿಳಿಯಿರಿ.
ಖಾಲಿ ಹುದ್ದೆಗಳ ವಿವರ
ಒಟ್ಟು ಖಾಲಿ ಹುದ್ದೆ - 06
ಹುದ್ದೆ ಹೆಸರು - ಟೂರಿಸಂ ಮಾನಿಟರ್
ಶೈಕ್ಷಣಿಕ ಅರ್ಹತೆ - ಪದವಿ, ಸ್ನಾತಕೋತ್ತರ ಪದವಿ
ಉದ್ಯೋಗದ ಸ್ಥಳ - ಬೆಂಗಳೂರು,ಚೆನ್ನೈ, ತ್ರಿವಂಡ್ರಮ್
ವೇತನ- 30,000 - 35,000 ರೂಪಾಯಿ
ಸಂದರ್ಶನ ಯಾವಾಗ - ಏಪ್ರಿಲ್ 13

ಶೈಕ್ಷಣಿಕ ಅರ್ಹತೆ
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ.
ವಯಸ್ಸಿನ ಮಿತಿ- ಸಡಿಲಿಕೆ ಮಾಹಿತಿ
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ತಿಳಿಸಿರುವಂತೆ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನಲ್ಲಿ ಸಡಿಲಿಕೆ ಇರಲಿದೆ. ಇನ್ನೂ PwBD ಅಭ್ಯರ್ಥಿಗಳು ಒಟ್ಟು ಹತ್ತು ವರ್ಷ ಸಡಿಲಿಕೆ ಇರಲಿದೆ.
ಸಂದರ್ಶನ ನಡೆಯುವ ಸ್ಥಳಗಳು
ಸಂದರ್ಶನ ನಡೆಯುವ ಸ್ಥಳದ ಮಾಹಿತಿ ನೋಡುವುದಾದರೆ, ಬೆಂಗಳೂರು (ಕರ್ನಾಟಕ)- ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, MS ಬಿಲ್ಡಿಂಗ್ ಮತ್ತು SKSJTI ಹಾಸ್ಟೆಲ್ ಹತ್ತಿರ, SJ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು-560001. ಇಲ್ಲಿ ನಡೆಯುವ ಸಂದರ್ಶನದಲ್ಲಿ ಅಭ್ಯರ್ಥಿಗಳು ಹಾಜರಾಗಬೇಕು.
ಅದೇ ರೀತಿ ಚೆನ್ನೈ (ತಮಿಳುನಾಡು)ನಲ್ಲಿ ಸಹ ಸಂದರ್ಶನ ನಡೆಯಲಿದೆ. ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, 4 ನೇ ಕ್ರಾಸ್ ಸ್ಟ್ರೀಟ್, CIT ಕ್ಯಾಂಪಸ್, ತಾರಾಮಣಿ, ಚೆನ್ನೈ - 600113 ಇಲ್ಲಿ ಏಪ್ರಿಲ್ 10 ಮತ್ತು 11 ರಂದು ನೇರ ಸಂದರ್ಶನ ಜರುಗಲಿದೆ.
ಜೊತೆಗೆ ಕೇರಳದ ತ್ರಿವಂಡ್ರಮ್ ನಲ್ಲಿ ಸಹ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಜಿ.ವಿ.ರಾಜ ರಸ್ತೆ, ಕೋವಲಂ, ತಿರುವನಂತಪುರಂ - 695527 ಇಲ್ಲಿ ಏಪ್ರಿಲ್ 6 ರಂದು ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿ IRCTC ವೆಬ್‌ಸೈಟ್ ಸಂಪರ್ಕಿಸಿದೆ.












Click it and Unblock the Notifications