Railway 4650 Jobs: ಭಾರತೀಯ ರೈಲ್ವೆಯ ಭರ್ಜರಿ ನೇಮಕಾತಿ, ಅರ್ಜಿ ಆಹ್ವಾನ
ಬೆಂಗಳೂರು, ಮೇ 08: ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವವರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೆಯು ಭರ್ಜರಿ 4650 ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವೇತನ, ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ ಇನ್ನಿತರ ಮಾಹಿತಿ ತಿಳಿದು ಕೂಡಲೇ ಅರ್ಜಿ ಸಲ್ಲಿಸಬೇಕು.
ರೈಲ್ವೇ ಇಲಾಖೆಯಲ್ಲಿ ಇತ್ತೀಚಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ರೈಲ್ವೆ ಇಲಾಖೆ ವ್ಯಾಪ್ತಿಯ ರೈಲ್ವೇ ರಕ್ಷಣಾ ಪಡೆಯಲ್ಲಿ ಖಾಲಿ ಇರುವ ಒಟ್ಟು 4660 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಸಬ್ ಇನ್ಸ್ಪೆಕ್ಟರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಇದೇ ಮೇ ತಿಂಗಳ 14ಕ್ಕೆ ನಿಗದಿ ಮಾಡಲಾಗಿದೆ.
ವಿದ್ಯಾರ್ಹತೆ
ಸಬ್ ಇನ್ಸ್ಪೆಕ್ಟರ್ ಹುದ್ದೆ ಸೇರಬಯಸುವವರು ಮಾನ್ಯತೆ ಪಡೆದ ಯಾವುದಾದರೂ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಯಾವ ವಿಷಯದಲ್ಲಿ ಬೇಕಾದರೂ ಪದವಿ ಪೂರ್ಣಗೊಳಿಸಿರಬೇಕು.
ಇನ್ನೂ ಕಾನ್ಸ್ಟೇಬಲ್ ಹುದ್ದೆಯ ಆಸಕ್ತರು ಮಾನ್ಯತೆ ಪಡೆದ ಯಾವುದಾದರೂ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ SSLC ಪೂರ್ಣಗೊಳಿಸಿರಬೇಕು ಎಂದು ಹೇಳಲಾಗುತ್ತಿದೆ.

ಮಾಸಿಕ ವೇತನ ಎಷ್ಟಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆ ಆದರೆ ಮಾಸಿಕ 35400 ರೂಪಾಯಿ ಹಾಗೂ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ಆಗುವವರಿಗೆ ಮಾಸಿಕವಾಗಿ 21700 ರೂಪಾಯಿ ನೀಡಲಾಗುವುದು. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವೇತನ, ಭತ್ಯೆಗಳು ಲಭ್ಯವಾಗಲಿವೆ ಎಂದು ತಿಳಿಸಲಾಗಿದೆ.
ವಯೋಮಿತಿ ವಿವರ
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮೇ 15ರ ಹೊತ್ತಿಗೆ ಕನಿಷ್ಟ 18 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು ಎಂದು ರೈಲ್ವೆ ಇಲಾಖೆ ಹೇಳಿದೆ.
ಅರ್ಜಿ ಶುಲ್ಕದ ಮಾಹಿತಿ
ಎಸ್‌ಸಿ, ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ / EWS/ PwBD ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ಇದೆ. ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ನಿಗದಿ ಮಾಡಲಾಗಿದೆ. ಈ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ವಯೋಮಿತಿಯಲ್ಲಿ ಸಡಿಲಿಕೆ ಎಷ್ಟು ಸಿಗಲಿದೆ?
ಮೀಸಲಾತಿಗೆ ಅನುಗುಣವಾಗಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 05 ವರ್ಷ, ಇತರೆ ಹಿಂದೂಳಿದ ವರ್ಗದವರಿಗೆ 03 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವವರುವ ರೈಲ್ವೆ ಇಲಾಖೆ ನಿಗದಿಪಡಿಸುವ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕು. ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೇ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಅಭ್ಯರ್ಥಿಗಳು ಈ ಲಿಂಕ್ (https://www.rrbbnc.gov.in/) ಬಳಸಬೇಕು. ದೇಶದ ಇತರೆ ಅಭ್ಯರ್ಥಿಗಳು ಈ ಲಿಂಕ್ (https://rpf.indianrailways.gov.in/RPF/PDF/Upcoming.pdf) ಬಳಸಬೇಕು. ಅಧಿಸೂಚನೆ ಮಾಹಿತಿಯನ್ನು ನೀವು ಇದೇ ವೆಬ್‌ಸೈಟ್‌ನಲ್ಲಿ ಪಡೆಯಬಹದು.












Click it and Unblock the Notifications