Indian Railways: ಭಾರತೀಯ ರೈಲ್ವೆಯಲ್ಲಿ ಇಷ್ಟು ಲಕ್ಷ ಉದ್ಯೋಗಗಳು ಖಾಲಿ: ವಲಯವಾರು ಮಾಹಿತಿ ಇಲ್ಲಿದೆ

ನವದೆಹಲಿ, ಆಗಸ್ಟ್‌, 08: ಭಾರತೀಯ ರೈಲ್ವೆ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಹಾಗಾದರೆ ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ವಿಭಾಗದವರಿಗೆ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.

ಭಾರತೀಯ ರೈಲ್ವೆಯಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಹೆಚ್ಚಿನ ಹುದ್ದೆಗಳು ಗ್ರೂಪ್ ಸಿ ಉದ್ಯೋಗಗಳಿಗೆ ಸಂಬಂಧಿಸಿವೆ ಎಂದು ಕೇಂದ್ರ ಸರ್ಕಾರ ಸೋಮವಾರ (ಆಗಸ್ಟ್ 7) ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ರೈಲ್ವೆಯ ಎಲ್ಲಾ ವಲಯಗಳಲ್ಲಿ ಗ್ರೂಪ್ ಸಿ ಹುದ್ದೆಗಳಲ್ಲಿ ಒಟ್ಟು 2,48,895 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

Indian Railways: 2.5 lakh Post vacancies in Indian Railways says Ashwini Vaishnaw

ವಲಯವಾರು ಖಾಲಿ ಇರುವ ಹುದ್ದೆಗಳ ವಿವರ

ಉತ್ತರ ವಲಯ - 32,468 ಹುದ್ದೆಗಳು

ಪೂರ್ವ ವಲಯದಲ್ಲಿ 29,869 ಹುದ್ದೆಗಳು

ಪಶ್ಚಿಮ ವಲಯದಲ್ಲಿ 25,597 ಹುದ್ದೆಗಳು

ಕೇಂದ್ರ ವಲಯದಲ್ಲಿ 25,281 ಹುದ್ದೆಗಳು

ಅಷ್ಟೇ ಅಲ್ಲದೆ, ಗ್ರೂಪ್ 'ಎ' & 'ಬಿ' ನಲ್ಲಿ ಒಟ್ಟು 2,070 ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ಮೂಲಕ ರೈಲ್ವೆಯಲ್ಲಿ ಖಾಲಿಯುರುವ ಹುದ್ದೆಗಳ ಸಂಖ್ಯೆ 2,50,965ಕ್ಕೆ ಏರಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಜೂನ್ 30, 2023ರವರೆಗೆ ಅಧಿಸೂಚನೆಗಳ ವಿರುದ್ಧ ಒಟ್ಟು 1,28,349 ಅಭ್ಯರ್ಥಿಗಳನ್ನು ಗ್ರೂಪ್ ಸಿ ಹುದ್ದೆಗಳಿಗೆ (ಲೆವೆಲ್ -1 ಹೊರತುಪಡಿಸಿ) ಎಂಪಾನೆಲ್ ಮಾಡಲಾಗಿದೆ ಎಂದು ಸಚಿವರು ಪರಿಶೀಲನೆ ಮಾಡಿದರು. ಗ್ರೂಪ್ ಎ ಸೇವೆಗಳಿಗೆ ನೇರ ನೇಮಕಾತಿಯನ್ನು ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ (UPSC)ನಡೆಸುತ್ತದೆ ಎಂದು ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಅಲ್ಲದೆ ಯುಪಿಎಸ್‌ಸಿ ಮತ್ತು ಡಿಒಪಿಟಿ ಮೇಲೆ ಇಂಡೆಂಟ್ ಇಡಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 1, 2022ರ ವೇಳೆಗೆ ದೇಶಾದ್ಯಂತ ಖಾಲಿ ಇರುವ 3.12 ಲಕ್ಷ ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಹೋಲಿಸಿದರೆ, ರೈಲ್ವೆಯ ಒಟ್ಟು ಹುದ್ದೆಗಳು 2.5 ಲಕ್ಷ ಕಡಿಮೆ. ದೇಶದ ಅತಿದೊಡ್ಡ ಉದ್ಯೋಗದಾತ ಎಂದು ಪರಿಗಣಿಸಲಾದ ರೈಲ್ವೆಯು ಫೆಬ್ರವರಿ 1, 2023ರೊಳಗೆ ಒಟ್ಟು 11.75 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+