Indian Navy Recruitment: ಭಾರತೀಯ ನೌಕಾಪಡೆಯಲ್ಲಿ 1,266 ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Navy Recruitment 2025: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 1,266 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದ್ರೆ, ಅರ್ಜಿ ಸಲ್ಲಿಸಬಯಸುವವರು ಏನೆಲ್ಲಾ ಅರ್ಹತೆ ಹೊಂದಿರಬೇಕು ಹಾಗೂ ಕೊನೇ ದಿನಾಂಕ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತೀಯ ನೌಕಾಪಡೆಯು ಗ್ರೂಪ್ ಸಿ ಗ್ರೂಪ್‌ನ ಟ್ರೇಡ್ಸ್‌ಮನ್ ಸ್ಕಿಲ್ಡ್, ನಾನ್-ಗೆಜೆಟೆಡ್, ಇಂಡಸ್ಟ್ರಿಯಲ್ ವಿಭಾಗಗಳಲ್ಲಿ 1,266 ಹುದ್ದೆಗಳನ್ನು ಭರ್ತಿ ಮಾಡಲು ಮಾಜಿ ನೌಕಾಪಡೆಯ ಅಪ್ರೆಂಟಿಸ್‌ಗಳಿಂದ ಅರ್ಜಿಗಳನ್ನು ಆಹ್ವಾನಿದೆ. ಆಸಕ್ತ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.

Indian Navy Recruitment 2025 Apply for 1 266 Tradesman Skilled Posts Check Eligibility Last Date

ಅರ್ಜಿ ಪ್ರಕ್ರಿಯೆ ಪ್ರಕ್ರಿಯೆ ಆಗಸ್ಟ್ 13ರಿಂದ ಪ್ರಾರಂಭ ಆಗಿದ್ದು, ಸೆಪ್ಟೆಂಬರ್ 2, 2025 ಕೊನೇ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indiannavy.gov.in ಅಥವಾ onlineregistrationportal.inಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಅಂಶಗಳು

* ಅಧಿಸೂಚನೆ ಬಿಡುಗಡೆ ದಿನಾಂಕ: ಆಗಸ್ಟ್ 9, 2025
* ಅರ್ಜಿ ಪ್ರಕ್ರಿಯೆ ಆರಂಭ: ಆಗಸ್ಟ್ 13, 2025
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್, 2 2025
* ಒಟ್ಟು ಹುದ್ದೆಗಳು: 1,266

ಯಾವೆಲ್ಲಾ ವಿಭಾಗಗಳಲ್ಲಿ ಎಷ್ಟು ಹುದ್ದೆಗಳು?: 49 ಸಹಾಯಕ ಹುದ್ದೆಗಳು, ಸಿವಿಲ್ ವರ್ಕ್ಸ್ - 17, ಎಲೆಕ್ಟ್ರಿಕಲ್ - 172, ಎಲೆಕ್ಟ್ರಾನಿಕ್ಸ್ ಮತ್ತು ಗೈರೊ - 50, ಪ್ಯಾಟರ್ನ್ ಮೇಕರ್/ ಮೋಲ್ಡರ್/ ಫೌಂಡ್ರಿಮೆನ್ - 9, ಡೀಸೆಲ್ ಎಂಜಿನ್ - 121, ಇನ್ಸ್ಟ್ರುಮೆಂಟ್‌ಮ್ಯಾನ್ - 9, ಮೆಷಿನ್ - 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೆಕ್ಯಾನಿಕಲ್ ಸಿಸ್ಟಮ್ಸ್ - 79, ಮೆಕಾಟ್ರಾನಿಕ್ಸ್ - 23, ಮೆಟಲ್ - 217, ಮಿಲ್‌ರೈಟ್ - 28, ರೆಫ್ರಿಜರೇಷನ್ ಮತ್ತು ಎಸಿ (ರೆಫ್ & ಎಸಿ) - 17, ಶಿಪ್ ಬಿಲ್ಡಿಂಗ್ - 228 ಜಾಗೂ 49 ವೆಪನ್ ಎಲೆಕ್ಟ್ರಾನಿಕ್ಸ್ ಹುದ್ದೆಗಳಿಗೆ ಭಾರತೀಯ ನೌಕಾಪಡೆಯಿಂದ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಕೆ ಮಾಡಬಹುದು.

ಅರ್ಹತೆಗಳ ವಿವರ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ (SSLC) ತರಗತಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಸಂಬಂಧಿತ ವ್ಯಾಪಾರದಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ.

ವಯೋಮಿತಿ ವಿವರ: ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 25 ವರ್ಷಗಳ ನಡುವೆ ಇರುತ್ತದೆ. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ indiannavy.gov.inಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+