India Post Office Recruitment 2025: ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ?
India Post Office Recruitment 2025: ಸರ್ಕಾರಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಭಾರತೀಯ ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಕರ್ನಾಟಕದಲ್ಲಿ ಎಷ್ಟು ಖಾಲಿ ಇವೆ ಹಾಗೂ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕದಲ್ಲೂ 1,000 ಹೆಚ್ಚು ಹುದ್ದೆಗಳು ಇವೆ. ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು. ದೇಶದ್ಯಾಂತ 21,413 ಉದ್ಯೋಗಗಳು ಇವೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳು ಸೇರಿದಂತೆ ಕರ್ನಾಟಕಕ್ಕೂ ಉದ್ಯೋಗಗಳು ಮೀಸಲಿವೆ. ಆದ್ದರಿಂದ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಈಗಾಗಲೇ ಅರ್ಜಿ ಅಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, 03 ಮಾರ್ಚ್ 2025 ಕೊನೇ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಮೂರು ವಿಧಧ ಹುದ್ದೆಗಳಿವೆ. 10ನೇ ತರಗತಿಯಲ್ಲು ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಜ್ಞಾನ, ಇತರೆ ಕೌಶಲ್ಯಗಳು ಇದ್ದರೇ ಅಭ್ಯರ್ಥಿ ಆಯ್ಕೆಗೆ ಮತ್ತಷ್ಟು ಉತ್ತಮ ಆಗಿರಲಿದೆ.
ಗ್ರಾಮೀಣ ಡಾಕ್ ಸೇವಕರು (GDS), ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಸಹಾಯಕ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (ABPM) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ಹುದ್ದೆಗಳ ವರ್ಗೀಕರಣ ನೋಡೋದಾದ್ರೆ, ಸಾಮಾನ್ಯ ಅಭ್ಯರ್ಥಿಗಳು - 482, ಒಬಿಸಿ - 260, ಎಸ್ಸಿ - 175, ಎಸ್ಟಿ - 78, ಇಡಬ್ಲುಎಸ್ - 122, ಪಿಡಬ್ಲುಡಿ - ಎ - 03, ಪಿಡಬ್ಲುಡಿ - ಬಿ - 03, ಪಿಡಬ್ಲುಡಿ- ಸಿ - 12, ಒಟ್ಟು 1,135 ಹುದ್ದೆಗಳಿವೆ.
ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಸಾಮಾನ್ಯ ಅಭ್ಯರ್ಥಿಗಳಿಗೆ - 100 ರೂಪಾಯಿ, ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು, ಮಂಗಳಮುಖಿಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಆಯ್ಕೆಯಾದ GDS ಹುದ್ದೆಗೆ ಮಾಸಿಕ ವೇತನ 10,000 ದಿಂದ 24,470 ರೂಪಾಯಿ, BPM ಹುದ್ದೆಗೆ- 12,000-29,380 ರೂಪಾಯಿ, ABPM ಹುದ್ದೆಗೆ- 10,000-24,470 ರೂಪಾಯಿ ಇರಲಿದೆ.
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿಯಲ್ಲಿ ತಪ್ಪಿದ್ದರೇ ತಿದ್ದಪಡಿಗೆ ಮಾರ್ಚ್ 06ರಿಂದ 08ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://indiapostgdsonline.cept.gov.in/Notifications1/Model_Notification.pdf ಭೇಟಿ ನೀಡಬಹುದು.
ಹುದ್ದೆಗಳ ವರ್ಗೀಕರಣದ ವಿಚಾರಕ್ಕೆ https://indiapostgdsonline.cept.gov.in/Notifications1/Final_Post_Consolidation.pdf, ಅರ್ಜಿ ಸಲ್ಲಿಕೆಗೆ https://indiapostgdsonline.gov.in/ ಗೆ ಭೇಟಿ ನೀಡಬಹುದು.












Click it and Unblock the Notifications