IIMB Jobs: ಬೆಂಗಳೂರಲ್ಲಿ ಕೆಲಸ ಖಾಲಿ ಇದೆ: 14 ಲಕ್ಷ ರೂ.ಪ್ಯಾಕೇಜ್ ವೇತನ, ಇಂದೇ ಅರ್ಜಿ ಹಾಕಿ
ಬೆಂಗಳೂರು, ಮೇ 15: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (IIMB) ಸಂಸ್ಥೆ ತನ್ನಲ್ಲಿ ಖಾಲಿ ಇರುವ ಅನೇಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಅನೇಕ ಮ್ಯಾನೇಜರ್ ಐಟಿ ಆಪರೇಶನ್ಸ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ನಾಳೆ ಅಂದರೆ ಮೇ 16 ಗುರುವಾರ ಕೊನೆಯ ದಿನವಾಗಿದೆ. ಆದ್ದರಿಂದ ತಡಮಾಡದೇ 14 ಲಕ್ಷ ರೂ.ಪ್ಯಾಕೇಜ್ ಸಂಬಳದ ಕೆಲಸಕ್ಕೆ ಕೂಡಲೇ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಕೆಗೂ ಮೊದಲು ತಿಳಿಯಬೇಕಾದ ವಿಷಯಗಳು ಇಲ್ಲಿವೆ.
ಐಐಎಂಬಿ ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಐಐಎಂಬಿ
ಹೆದ್ದೆಗಳ ಹೆಸರು: ಮ್ಯಾನೇಜರ್ ಐಟಿ ಆಪರೇಶನ್ಸ್
ಪೋಸ್ಟಿಂಗ್: ಬೆಂಗಳೂರು
ವೇತನ: ವಾರ್ಷಿಕ ಪ್ಯಾಕೇಜ್ 13,20,000 ನಿಂದ 14,50,000 ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನ: 2024 ಮೇ 16 ಅಂದರೆ ನಾಳೆ
ಶೈಕ್ಷಣಿಕ ಅರ್ಹತೆಗಳು
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಕಡ್ಡಾಯವಾಗಿ ಇನ್ಫರ್ಮೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದು ಕಡ್ಡಾಯ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಅಧಿಸೂಚನೆ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ ಏನಿದೆ?
ಐಐಎಂಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಜಾತಿ ಮೀಸಲಾತಿಗೆ ಅನುಗುಣವಾಗಿ ಆಯಾ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಐಐಎಂಬಿ ಯು ಮೊದಲು ಲಿಖಿತ ಪರೀಕ್ಷೆ ನಡೆಸುತ್ತದೆ. ಅಲ್ಲಿ ಆಯ್ಕೆ ಆಗುರವವರಿಗೆ ನಂತರ ನೇರ ಸಂದರ್ಶನ ನಡೆಸುತ್ತದೆ. ಇಲ್ಲಿ ಆಯ್ಕೆಯಾಗುವವರಿಗೆ ಬೆಂಗಳೂರಿನಲ್ಲಿ ವಾರ್ಷಿಕ 13,20,000-14,50,000 ರೂಪಾಯಿ ಪ್ಯಾಕೇಜ್ ನಡಿ ಪೋಸ್ಟಿಂಗ್ ನೀಡಲಿದೆ.
ಅರ್ಜಿ ಶುಲ್ಕ ಇಲ್ಲ: ಸಲ್ಲಿಕೆ ಹೇಗೆ ತಿಳಿಯಿರಿ
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿಲ್ಲ. ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿಗಳನ್ನು ನಾಳೆಯೊಳಗೆ ಹಾಕಬೇಕು.
ಆಸಕ್ತರ ಅರ್ಜಿ ಸಲ್ಲಿಕೆಯ ಮೊದಲು ಇಲ್ಲಿ ನೀಡಲಾಗಿರುವ ಲಿಂಕ್ ಗೆ (https://www.iimb.ac.in/job-opportunities) ಭೇಟಿ ನೀಡಬೇಕು. ನಂತರ ಅಲ್ಲಿನ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಇಂದು ಗುರುವಾರ ಐಐಎಂಬಿ ಉದ್ಯೋಗ ಅರ್ಜಿಲ್ಲಿಕೆಗೆ ಇವತ್ತೇ ಕೊನೆ ದಿನ. ಸೂಕ್ತ ದಾಖಲೆಗಳ ಸಹಿತ ಸಂಜೆಯೊಳಗೆ ಅರ್ಜಿ ಸಲ್ಲಿಸಬೇಕು.












Click it and Unblock the Notifications