ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ನ್ಯೂಸ್: ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಜೊಮ್ಯಾಟೋ

|
Google Oneindia Kannada News

ನವದೆಹಲಿ, ನವೆಂಬರ್ 19: ದೇಶದಲ್ಲಿ ಇತ್ತೀಚಿಗೆ ಉದ್ಯೋಗ ಕಡಿತದ ಘಟನೆಗಳು ಹೆಚ್ಚಾಗುತ್ತಿವೆ. ಆಹಾರ ವಿತರಣೆ ಅಪ್ಲಿಕೇಶನ್ ಆಗಿರುವ ಜೊಮ್ಯಾಟೊ ಸಂಸ್ಥೆಯು ತನ್ನ ಉದ್ಯೋಗಿಗಳಲ್ಲಿ ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ದೈನಂದಿನ ಕಾರ್ಯಕ್ಷಮತೆ ಆಧಾರದ ಮೇಲೆ ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

"ನಮ್ಮ ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತ ಮಂಥನದ ಅಡಿಯಲ್ಲಿ ಶೇ.3ರಷ್ಟು ಕಡಿತಗೊಳಿಸಲಾಗಿದ್ದು, ಅದರಲ್ಲಿ ಹೆಚ್ಚೇನೂ ಇಲ್ಲ," ಎಂದು ಜೊಮ್ಯಾಟೋ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

ಹುಷಾರ್ ಕಣ್ರಿ: ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಹೀಗೇ ಹೇಳೋದಾ ಜೊಮ್ಯಾಟೋ?ಹುಷಾರ್ ಕಣ್ರಿ: ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಹೀಗೇ ಹೇಳೋದಾ ಜೊಮ್ಯಾಟೋ?

ಕಳೆದ ಎರಡು ವಾರಗಳಿಂದಲೂ ಉದ್ಯೋಗ ಕಡಿತದ ಪ್ರಕ್ರಿಯೆಯು ನಡೆಯುತ್ತಿದೆ. ಈ ಉದ್ಯೋಗ ಕಡಿತವು ಸರಿಸುಮಾರಿ 100 ಉದ್ಯೋಗಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಉದ್ಯೋಗ ಕಡಿತದ ಬಗ್ಗೆ ಮಾಹಿತಿಯುಳ್ಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Food-ordering app Zomato has cut 3 per cent of employees

ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ

ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಅವರು ಶುಕ್ರವಾರವಷ್ಟೇ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಇದರ ಬೆನ್ನಲ್ಲೇ ಗುಪ್ತಾ ರಾಜೀನಾಮೆ ಬಗ್ಗೆ ಬಹಿರಂಗಪಡಿಸಿರುವ ಜೊಮ್ಯಾಟೋ ಕಂಪನಿಯು ದೀರ್ಘಕಾಲದವರೆಗೂ ಅವರು ಹೂಡಿಕೆದಾರರಾಗಿ ಉಳಿದುಕೊಳ್ಳುತ್ತಾರೆ ಎಂಬುದನ್ನು ಉಲ್ಲೇಖಿಸಿತ್ತು.

ಕಳೆದ ಗುರುವಾರದಂದು ಜೊಮ್ಯಾಟೋ ಎರಡನೇ ತ್ರೈಮಾಸಿಕ ನಷ್ಟದ ಬಗ್ಗೆ ವರದಿ ಮಾಡಿದೆ, ಇದು ಆನ್‌ಲೈನ್ ಆರ್ಡರ್‌ನಲ್ಲಿ ನಿರಂತರ ಏರಿಕೆಗೆ ಸಹಾಯ ಮಾಡಿತು. ಈ ಹಿಂದಿನ ವರ್ಷದ 4.30 ಶತಕೋಟಿ ರೂಪಾಯಿಗಳಿಗೆ ಹೋಲಿಸಿದರೆ, ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಮೂರು ತಿಂಗಳ ಒಟ್ಟು ನಿವ್ವಳ ನಷ್ಟವು 2.51 ಶತಕೋಟಿ ರೂಪಾಯಿಯಷ್ಟಿತ್ತು ಎಂದು ಕಂಪನಿಯು ತಿಳಿಸಿದೆ.

English summary
Food-ordering app Zomato has cut 3 per cent of employees. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X