DRDO Recruitment 2023: ಬೆಂಗಳೂರಿನಲ್ಲೇ ಉತ್ತಮ ಉದ್ಯೋಗ, ಆ.30ರೊಳಗೆ ಅರ್ಜಿ ಹಾಕಿ, ವೇತನ ವಿವರ
ಬೆಂಗಳೂರು, ಆಗಸ್ಟ್ 13: ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO CEMILAC) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ.ಈ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿಯೇ ಉದ್ಯೋಗ ಪಡೆಯಬೇಕು ಎಂಬ ಆಸಕ್ತರು ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.
ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO CEMILAC) ಒಟ್ಟು ಒಂದು ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆಗೂ ಮೊದಲು ಖಾಲಿ ಹುದ್ದೆಯ ಮಾಹಿತಿ, ವಿದ್ಯಾರ್ಹತೆ, ವೇತನ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ತಿಳಿದು ಅರ್ಜಿ ಕಳುಹಿಸಬೇಕಿದೆ.
ನೇಮಕಾತಿ ವಿವರ
ಸಂಸ್ಥೆ -DRDO CEMILAC
ಒಟ್ಟು ಹುದ್ದೆ - 01
ಹುದ್ದೆ ಹೆಸರು - ಜೂನಿಯರ್ ರಿಸರ್ಚ್ ಫೆಲೋ
ವಯಸ್ಸಿನ ಮಿತಿ - ಗರಿಷ್ಠ 28
ಮಾಸಿಕ ವೇತನ - 31,000 ರೂಪಾಯಿ.
ಉದ್ಯೋಗ ಸ್ಥಳ- ಬೆಂಗಳೂರು
ಶೈಕ್ಷಣಿಕ ಅರ್ಹತೆ ಮಾಹಿತಿ
ಅರ್ಜಿ ಕಳುಹಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥಾವ ವಿಶ್ವವಿದ್ಯಾಲಯದಲ್ಲಿ ಪದವಿ, ಬಿಐ/ಬಿ.ಟೆಕ್, ಎಂಐ/ಎಂ.ಟೆಕ್, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನೇಮಕಾತಿ ಪ್ರಕಟಣೆ ತಿಳಿಸಿದೆ.

ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಆಯ್ಕೆಯಾಗುವವರಿಗೆ ಮಾಸಿಕ 31,000 ರೂಪಾಯಿ ವೇತನ ನೀಡಲಾಗುವುದು ಎಂದು ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗರಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಸಂಸ್ಥೆ ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ, ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಲಿದೆ. ಆದ್ದರಿಂದ ಕೂಡಲೇ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ''ಮುಖ್ಯ ಕಾರ್ಯನಿರ್ವಾಹಕರು (ವಾಯುಯೋಗ್ಯತೆ), ಮಿಲಿಟರಿ ವಾಯು ಯೋಗ್ಯತೆ ಮತ್ತು ಪ್ರಮಾಣೀಕರಣ ಕೇಂದ್ರ (CEMILAC), DRDO, ರಕ್ಷಣಾ ಸಚಿವಾಲಯ, ಮಾರತ್ತಹಳ್ಳಿ ಕಾಲೋನಿ ಪೋಸ್ಟ್, ಬೆಂಗಳೂರು - 560037 ಇಲ್ಲಿಗೆ ಆಗಸ್ಟ್ 30ರ ಒಳಗಾಗಿ ಕಳುಹಿಸಬೇಕು.











Click it and Unblock the Notifications