ದೇನಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 15 : ಕೈತುಂಬ ಸಂಬಳ ತರುವಂಥ ಬ್ಯಾಂಕ್ ಉದ್ಯೋಗ ಅರ್ಹ ಅಭ್ಯರ್ಥಿಗಳಿಗಾಗಿ ಕಾದಿದೆ. ಬ್ಯಾಂಕ್ ಉದ್ಯೋಗವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅರ್ಹತೆ ಇದ್ದರೆ ಕೂಡಲೆ ಅರ್ಜಿ ಸಲ್ಲಿಸಿ.

ಸೆಕ್ಯುರಿಟಿ ವಿಭಾಗದಲ್ಲಿ ಒಟ್ಟು 16 ಮ್ಯಾನೇಜರ್ ಹುದ್ದೆಗಳನ್ನು ತುಂಬಿಕೊಳ್ಳಲು ದೇನಾ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 29ನೇ ಏಪ್ರಿಲ್, 2017. ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿವೆ, ತ್ವರೆ ಮಾಡಿ.

ಬ್ಯಾಂಕ್ ಹೆಸರು : ದೇನಾ ಬ್ಯಾಂಕ್
ಹುದ್ದೆ : ಮ್ಯಾನೇಜರ್ (16)
ಕೆಲಸದ ಸ್ಥಳ : ಭಾರತದಾದ್ಯಂತ
ಅರ್ಜಿ ಸಲ್ಲಿಕೆಗೆ ಕಡೆಯ ದಿನ : 29ನೇ ಏಪ್ರಿಲ್, 2017

Dena Bank Recruitment 2017 Apply Online

ಅರ್ಹತೆ : ಗುರುತಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಭೂಸೇನೆ, ನೌಕಾದಳ, ವಾಯುಸೇನೆಯಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ಅಥವಾ ಎಸ್ಪಿ, ಡಿವೈಎಸ್ಪಿ ಮಟ್ಟದ ಪೊಲೀಸ್ ಅಧಿಕಾರಿಯಾಗಿ ಅಥವಾ ಪ್ಯಾರಾ ಮಿಲಿಟರಿಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು.

ಸಂಬಳ :31,705 - 45,950 ಪ್ರತಿ ತಿಂಗಳು
ವಯೋಮಿತಿ : 2017ರ ಏಪ್ರಿಲ್ 1ರ ಹೊತ್ತಿಗೆ 35 ವರ್ಷದವರಾಗಿರಬೇಕು.

ಆಯ್ಕೆಯ ವಿಧಾನ : ಅರ್ಹ ಅಭ್ಯರ್ಥಿಗಳ ಸಂದರ್ಶನವನ್ನು ದೇನಾ ಬ್ಯಾಂಕ್ ನಡೆಸುತ್ತದೆ.

ಶುಲ್ಕ : ಮ್ಯಾನೇಜರ್ ಹುದ್ದೆಗಳಿಗೆ ಅರ್ಹತೆ ಉಳ್ಳವರು ಮತ್ತು ಇಚ್ಛೆಯುಳ್ಳವರು ಕೆಳಗಿನ ಶುಲ್ಕವನ್ನು ಪಾವತಿಸಬೇಕು.

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ : 50 ರು.
ಇತರರು : 400 ರು.

ನೋಂದಾಯಿಸಿಕೊಳ್ಳುವುದು ಹೇಗೆ? : ಈ ಕೊಂಡಿಯನ್ನು ಕ್ಲಿಕ್ಕಿಸಿ ಅರ್ಜಿಯನ್ನು ಗುಜರಾಯಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dena Bank released new notification on their official website denabank.com for the recruitment of 16 (sixteen) vacancies for Manager (Security). Job seekers should register till 29th April 2017.
Please Wait while comments are loading...