ದಾವಣಗೆರೆ; ವಿವಿಧ ಹುದ್ದೆಗೆ ಅರ್ಜಿ ಕರೆದ ಜಿಲ್ಲಾ ಪಂಚಾಯಿತಿ
ದಾವಣಗೆರೆ, ಆಗಸ್ಟ್ 16: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿ ಅರ್ಜಿಗಳನ್ನು ಕರೆದಿದೆ. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಕೆ ಮಾಡಲು ಆಗಸ್ಟ್ 24 ಕೊನೆಯ ದಿನವಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಖಾಲಿ ಇರುವ ಹುದ್ದೆಗಳ ವಿವರಗಳು ಹಾಗೂ ಸದರಿ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು ಮಾಸಿಕ ಸಂಭಾವನೆ ವಿವರ ಇಲ್ಲಿದೆ.

ಯಾವ-ಯಾವ ಹುದ್ದೆಗಳು; ತಾಂತ್ರಿಕ ಸಹಾಯಕ (ಸಿವಿಲ್) 4, ತಾಂತ್ರಿಕ ಸಹಾಯಕ (ಕೃಷಿ) 1, ತಾಂತ್ರಿಕ ಸಹಾಯಕ (ತೋಟಗಾರಿಕೆ) 6, ತಾಂತ್ರಿಕ ಸಹಾಯಕ (ಅರಣ್ಯ) 2, ತಾಂತ್ರಿಕ ಸಹಾಯಕ (ರೇಷ್ಮೆ) 1, ಆಡಳಿತ ಸಹಾಯಕರು 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಎಲ್ಲಾ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷಗಳು (1/8/2023ಕ್ಕೆ ಅನ್ವಯವಾಗುವಂತೆ). ತಾಂತ್ರಿಕ ಸಹಾಯಕ (ಸಿವಿಲ್), ತಾಂತ್ರಿಕ ಸಹಾಯಕ (ಕೃಷಿ), ತಾಂತ್ರಿಕ ಸಹಾಯಕ (ತೋಟಗಾರಿಕೆ), ತಾಂತ್ರಿಕ ಸಹಾಯಕ (ಅರಣ್ಯ), ತಾಂತ್ರಿಕ ಸಹಾಯಕ (ರೇಷ್ಮೆ) ಹುದ್ದೆಗಳಿವೆ ವೇತನ 28,000 + ಪ್ರಯಾಣ ಭತ್ಯೆ ಗರಿಷ್ಠ ರೂ. 2000 ತನಕ. ಆಡಳಿತ ಸಹಾಯಕರು ಹುದ್ದೆಗಳಿಗೆ 22,000 ರೂ. ವೇತನ ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು 24/8/2023 ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆ ಮಾಡಲು ವಿಳಾಸ davanagere.nic.in. ಈ ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆ ಹಾಗೂ ನಂತರದಲ್ಲಿ ಮೆರಿಟ್ ಪಟ್ಟಿ, ಶಾರ್ಟ್ ಲಿಸ್ಟ್, ಆಯ್ಕೆ, ಪಟ್ಟೆಯ ವಿವರಗಳನ್ನು ವೀಕ್ಷಿಸಬಹುದಾಗಿದೆ.
ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿದ ನಂತರ ಪಡೆದ ಸ್ವೀಕೃತಿ ಪತ್ರದ ಪ್ರತಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಪಂಚಾಯತ್ ಕಚೇರಿಯ ನರೇಗಾ ವಿಭಾಗ, ಕೊಠಡಿ ಸಂ. 111 ಗೆ ದಿನಾಂಕ: 24/8/2023ರೊಳಗೆ ಸಲ್ಲಿಸಿ, ಸ್ವೀಕೃತಿ ಪಡೆಯಬೇಕು.
ಆಯ್ಕೆ ವಿಧಾನ; ಸ್ವೀಕರಿಸಿದ ಅರ್ಜಿಗಳ ವಿವರಗಳನ್ನು ಪರಿಶೀಲಿಸಿ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಹೆಚ್ಚು ಅಂಕದಿಂದ ಕಡಿಮೆ ಅಂಕದ ಆಧಾರದಲ್ಲಿ (Highest to lower order of Merit) ಒಟ್ಟು 100 ಅಂಕಗಳಿಗೆ ಕೆಳಗಿನಂತೆ ಮೆರಿಟ್ ಪಟ್ಟಿಯನ್ನು ತಯಾರಿಸಿಕೊಳ್ಳಲಾಗುವುದು.
ತಯಾರಿಸಿದ ಮೆರಿಟ್ ಪಟ್ಟಿಯನ್ನು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ/ davanagere.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಕಾಲವಕಾಶ ನೀಡಲಾಗುವುದು. ಆಕ್ಷೇಪಣೆ ಪ್ರಕ್ರಿಯೆ ನಂತರ, ಮೆರಿಟ್ ಪಟ್ಟಿಯನ್ನು ಅವಶ್ಯವಿರುವ ಹುದ್ದೆಗನುಗುಣವಾಗಿ ಅನುಪಾತ 1:3 ರಂತೆ Short list ಅನ್ನು ತಯಾರಿಸಲಾಗುವುದು.
ಶಾರ್ಟ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಗೆ ಅಭ್ಯರ್ಥಿಗಳನ್ನು ಜಿಲ್ಲಾ ಪಂಚಾಯತ್‌ಗೆ ಆಹ್ವಾನಿಸಿ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನಾ ದಿನಾಂಕವನ್ನು ಇ-ಮೇಲ್/ ದೂರವಾಣಿ ಮೂಲಕ ತಿಳಿಸಲಾಗುವುದು.
ಒಂದು ವೇಳೆ ಮೆರಿಟ್ ಶಾರ್ಟ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಅಥವಾ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ, ಮೆರಿಟ್ ಪಟ್ಟಿಯಲ್ಲಿರುವ (Waiting list) ಮುಂದಿನ ಅಭ್ಯರ್ಥಿಗಳನ್ನು ಹುದ್ದೆಯ ನೇಮಕಾತಿಗೆ ಪರಿಗಣಿಸಲಾಗುವುದು.
ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ತಿಳಿದಿರಬೇಕು. ತಾಂತ್ರಿಕ ಸಹಾಯಕ ಹುದ್ದೆಯ ನೇಮಕಾತಿಗೆ ಯಾವುದೇ ನೇರ ಸಂದರ್ಶನ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ.
ಆಡಳಿತ ಸಹಾಯಕ ಹುದ್ದೆಗೆ ಮೆರಿಟ್ ಶಾರ್ಟ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳನ್ನು ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಬಗ್ಗೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಸಂಸ್ಥೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು, ನೇಮಕಾತಿಯ ಅವಧಿಯು 11 ತಿಂಗಳಾಗಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಂತಿಮ ಆಯ್ಕೆ ಪಟ್ಟಿ ಅನುಮೋದಿಸುವುದು ಅಥವಾ ರದ್ದುಪಡಿಸುವುದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ದಾವಣಗರ ಇವರ ತೀರ್ಮಾನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿಯ ನರೇಗಾ ವಿಭಾಗ ಅಥವಾ ಜಿಲ್ಲಾ ಪಂಚಾಯತ್ ಕಚೇರಿಯ ಉಚಿತ ಸಹಾಯವಾಣಿ ಸಂಖ್ಯೆ 1800 425 2203ಗೆ ಕರೆ ಮಾಡುವುದು.











Click it and Unblock the Notifications