ದಾವಣಗೆರೆ; ಕೆಲಸ ಖಾಲಿ ಇದೆ, 17 ರಿಂದ 28 ಸಾವಿರ ರೂ. ವೇತನ

ದಾವಣಗೆರೆ, ಜನವರಿ 02: ದಾವಣಗೆರೆ ಮಹಾನಗರ ಪಾಲಿಕೆಗೆ ಕಾರ್ಯಾಲಯ ಪೌರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕಛೇರಿಯ ಅವಧಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲು 30/1/2024 ಕೊನೆಯ ದಿನಾಂಕವಾಗಿದೆ.

ಪೌರಕಾರ್ಮಿಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಹೊರಡಿಸಿರುವ ಸರ್ಕಾರದ ಆದೇಶ ದಿನಾಂಕ 9/3/2023ರಂತೆ ಹಾಗೂ ಸರ್ಕಾರದ ಅಧಿಸೂಚನೆ ದಿನಾಂಕ 27/10/2023ರ ಆದೇಶದನ್ವಯ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ಸಂಖ್ಯೆ 119.

Davanagere Pourakarmika Recruitment Salary Details

ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ, 1976ರ (ಕರ್ನಾಟಕ ಕಾಯ್ದೆ 1977ರ ಸಂಖ್ಯೆ 14)ರ ಕಲಂ 421ನೇ ಉಪ ಕಲಂ 1ರ ರೀತ್ಯಾ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ (ರಾಜ್ಯದ ಪಾಲಿಕೆಗಳ ಪೌರಕಾರ್ಮಿಕರ ನೇಮಕಾತಿ) (ವಿಶೇಷ) ನಿಯಮಗಳು-2022ರ ರೀತ್ಯಾ ಸಂಖ್ಯಾತಿರಿಕ್ತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಮತ್ತು ವೇತನ ವಿವರ; ಆಯ್ಕೆಯಾಗುವ ಪೌರ ಕಾರ್ಮಿಕರಿಗೆ 17,000-28,950 ರೂ. ವೇತನ ಶ್ರೇಣಿಯನ್ನು ನಿಗದಿಗೊಳಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡುವವರು ಕನ್ನಡ ಮಾತನಾಡಲು ಬರಬೇಕು. ಮಹಾನಗರ ಪಾಲಿಕೆಗಳಲ್ಲಿ ಹಾಲಿ ನೇರ ಪಾವತಿ/ ಕ್ಷೇಮಾಭಿವೃದ್ಧಿ/ ದಿನಗೂಲಿ ಆಧಾರದ ಮೇಲೆ 2 ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮಾತ್ರ ಆದ್ಯತೆ ಹಾಗೂ ಹಾಗೂ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಅರ್ಜಿಗಳನ್ನು ಸಲ್ಲಿಕೆ ಮಾಡಲು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. 29/12/2023 ರಿಂದ 30/1/2024ರ ತನಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಸಲು ವಿಳಾಸ ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ರೈಲ್ವೆ ನಿಲ್ದಾಣದ ಎದುರು, ಪಿ. ಬಿ. ರಸ್ತೆ, ದಾವಣಗೆರೆ.

ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಪರಿಗಣಿಸಿ ಒಂದು ಅರ್ಜಿಯನ್ನು ಮಾತ್ರ ಯಾವುದೇ ಮುನ್ಸೂಚನೆ ಇಲ್ಲದೇ ತಿರಸ್ಕರಿಸಲಾಗುತ್ತದೆ. ಅರ್ಜಿಗಳನ್ನು ಖುದ್ದಾಗಿ ಕಛೇರಿಗೆ ಸಲ್ಲಿಸತಕ್ಕದ್ದು, ಅರ್ಜಿ ಸಲ್ಲಿಕೆ ಮಾಡುವ ಮುನ್ನ ಕಡ್ಡಾಯವಾಗಿ ಸೂಚನೆಗಳನ್ನು ಓದಿಕೊಳ್ಳಬೇಕು. ತಪ್ಪು ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಪಾಲಿಕೆಯು ಸೂಕ್ತ ಕಾನುನು ಕ್ರಮವನ್ನು ಕೈಗೊಳ್ಳಲಿದೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರಪಾವತಿ/ ಕ್ಷೇಮಾಭಿವೃದ್ಧಿ/ ದಿನಗೂಲಿ ಆಧಾರದ ಮೇಲೆ 2 ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರಪಾವತಿ/ ಕ್ಷೇಮಾಭಿವೃದ್ಧಿ/ ದಿನಗೂಲಿ ಆಧಾರದ ಮೇಲೆ 2 ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರು 2 ವರ್ಷಗಳಿಗೆ ಮೇಲ್ಪಟ್ಟು ಪಾಲಿಕೆಯಲ್ಲಿ ವೇತನ ಪಡೆದ ದಾಖಲಾತಿಗಳನ್ನು ನೇಮಕಾತಿಯಲ್ಲಿ ಆದ್ಯತೆಗೆ ಪರಿಗಣಿಸಲಾಗುತ್ತದೆ.

ಆದ್ಯತೆಯನ್ನು ನೀಡುವಲ್ಲಿ ಎರಡು ಅಭ್ಯರ್ಥಿಗಳ ಸೇವಾ ಅವಧಿ ಒಂದೇ ಇದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಜೇಷ್ಟತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ವಯಸ್ಸಿನಲ್ಲಿ ಹಿರಿಯರಾದವರನ್ನು ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಮತ್ತು ಸೇವಾ ಅವಧಿ ಒಂದೇ ಆಗಿದ್ದಲ್ಲಿ ಲಾಟರಿ ಮುಖಾಂತರ ಪರಿಗಣಿಸತಕ್ಕದ್ದು.

ನೇರಪಾವತಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ದಿನಾಂಕ 27/10/2023ಕ್ಕಿಂತ ಮುಂಚೆ ಕನಿಷ್ಟ 02 ವರ್ಷಗಳು ಮಹಾನಗರ ಪಾಲಿಕೆಯಲ್ಲಿ ಪಾವತಿಸಲಾದ ಕಾರ್ಮಿಕರ ರಾಜ್ಯ ವಿಮೆ (ಇ.ಎಸ್.ಐ) ಮತ್ತು ಭವಿಷ್ಯ ನಿಧಿ(ಪಿ.ಎಫ್) ಹಾಜರಾತಿ ಮತ್ತು ವೇತನ ಪಡೆದ ದಾಖಲಾತಿಗಳನ್ನು ಪರಿಗಣಿಸಲಾಗುವುದು.

ಹೊರಗುತ್ತಿಗೆ ಪೌರಕಾರ್ಮಿಕರನ್ನು ಪರಿಗಣಿಸುವುದಕ್ಕಾಗಿ ದಿನಾಂಕ 27/10/2023ಕ್ಕಿಂತ ಮುಂಚೆ ಕನಿಷ್ಠ 02 ವರ್ಷಗಳು ಕಾರ್ಯನಿರ್ವಹಿಸಿರುವ ಮತ್ತು ಭವಿಷ್ಯ ನಿಧಿ, ಇಎಸ್.ಐ ಮತ್ತು ವೇತನದ ದಾಖಲೆಗಳನ್ನು ಪರಿಗಣಿಸಲಾಗುವುದು.

ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಲಭ್ಯವಾಗದೇ ಇದ್ದ ಪಕ್ಷದಲ್ಲಿ ಒಂದು ಬಾರಿ ಮಾತ್ರ ವಿನಾಯಿತಿ ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಪರಿಗಣಿಸಿ ನೇಮಕಾತಿ ಪರಿಗಣಿಸಲಾಗುತ್ತದೆ.

ಸಂಖ್ಯಾತಿರಿತ್ಯ ಪೌರಕಾರ್ಮಿಕರ ಹುದ್ದೆಗಳನ್ನು ಭತಿ ಮಾಡಬೇಕಾದರೆ ಸಮತಳ ಮೀಸಲಾತಿಯಡಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ಮಾಜಿ ಸೈನಿಕ ಅಭ್ಯಥಿಗಳಿಗೆಂದು ಮೀಸಲಾದ ಹುದ್ದೆಗಳಿಗೆ ಅರ್ಹ Activate Windows ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಅರ್ಹರಿರುವ ಪೌರಕಾರ್ಮಿಕರುಗಳನ್ನು ಪರಿಗಣಿಸುವುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ www.davanagerecity.mrc.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+