ದಾವಣಗೆರೆ, ಉಡುಪಿಯಲ್ಲಿ ಕೆಲಸ ಖಾಲಿ ಇದೆ

ಬೆಂಗಳೂರು, ಆಗಸ್ಟ್ 24: ದಾವಣಗೆಯಲ್ಲಿ ಫಿಜಿಯೋಥೆರಪಿಸ್ಟ್‌ಗಳ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಡುಪಿಯಲ್ಲಿ ಆಗಸ್ಟ್‌ 25ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಉದ್ಯೋಗ ಹುಡುಕುತ್ತಿರುವ ಯುವಕ/ ಯುವತಿಯರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಫಿಜಿಯೋಥೆರಪಿಸ್ಟ್‌ ಸೇವೆಯನ್ನು ಕೆಲಸ ಮತ್ತು ಪಾವತಿ ಆಧಾರದ ಮೇಲೆ ತಾತ್ಕಾಲಿಕ ನೇಮಕಾತಿಗಾಗಿ ದಾವಣಗೆರೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಆಗಸ್ಟ್‌ 29 ಕೊನೆಯ ದಿನವಾಗಿದೆ.

Davanagere and Udupi Job News Know Details

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಅಗತ್ಯವುಳ್ಳ ಮಕ್ಕಳ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯಚಟುವಟಿಕೆಗಳ ಕಾರ್ಯ ಅನುಷ್ಠಾನಕ್ಕಾಗಿ ತೀವ್ರ ನ್ಯೂನತೆ ಹೊಂದಿರುವ ವಿಶೇಷ ಚೇತನ ಮಕ್ಕಳಲ್ಲಿ ಗುರುತಿಸಲ್ಪಟ್ಟಿರುವ ದೈಹಿಕ ನ್ಯೂನತೆ ಮತ್ತು ಬಹುನ್ಯೂನತೆ ಹೊಂದಿರುವ ಮಕ್ಕಳಿಗೆ ಫಿಜಿಯೋಥೆರಪಿಸ್ಟ್‌ ಮೂಲಕ ನ್ಯೂನತೆಯ ಪ್ರಮಾಣವನ್ನು ತಗ್ಗಿಸುವ ದೃಷ್ಠಿಯಿಂದ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಅಗತ್ಯತೆ ಇರುವ ಮಕ್ಕಳಿಗೆ ಫಿಜಿಯೋಥೆರಪಿ ಸೇವೆ ಒದಗಿಸಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಡಿ.ಪಿ.ಟಿ ಅಥವಾ ಬಿ.ಪಿ.ಟಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿಯನ್ನು ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕೆ.ಇ.ಬಿ ಸರ್ಕಲ್, ದಾವಣಗೆರೆ ಇಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಹಿಂದಿರುಗಿಸಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಆ. 25ರಂದು ನೇರ ಸಂದರ್ಶನ; ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಆಗಸ್ಟ್ 25ರಂದು ಬೆಳಗ್ಗೆ 10.30ಕ್ಕೆ ಉಡುಪಿಯಲ್ಲಿ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ.

ಈ ನೇರ ಸಂದರ್ಶನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್‌ ಜೊತೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

ಈ ನೇರ ಸಂದರ್ಶನ ಉಡುಪಿ ನಗರದ ಬನ್ನಂಜೆ ರೋಡ್ ಶ್ರೀರಾಮ್ ಬಿಲ್ಡಿಂಗ್ 2ನೇ ಮಹಡಿಯ ಮಹೀಂದ್ರ ರೂರಲ್ ಹೌಸಿಂಗ್ ಪ್ರೈ, ಲಿ. ಇಲ್ಲಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಇವರನ್ನು ಸಂಪರ್ಕಿಸಬಹುದು.

ಕರೆ ಮಾಡಲು ದೂರವಾಣಿ ಸಂಖ್ಯೆಗಳು 8105618291, 9945856670, 8105774936 ಹಾಗೂ 9901472710.

ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ; ದಾವಣಗೆರೆ ಜಿಲ್ಲೆಯ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ 18 ರಿಂದ 35 ವರ್ಷದೊಳಗಿನ, ಕನಿಷ್ಠ ಎಸ್ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ ನಿರುದ್ಯೋಗ ಯುವಕ/ ಯುವತಿಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ.

ಆಸಕ್ತರು ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಆಗಸ್ಟ್ 31 ಕೊನೆಯ ದಿನ. ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತದೆ.

ಆಟೋಮೇಷನ್ ಅಂಡ್ ಕಂಟ್ರೋಲ್, ರಿವರ್ಸ್ ಇಂಜಿನಿಯರಿಂಗ್, ಇಂಟರ್ನೆಟ್ ಆಫ್ ಥಿಂಗ್ (ಐಒಟಿ), 3ಡಿ ಪ್ರಿಂಟಿಂಗ್ (ಆರ್‌ಪಿಟಿ), ಸಿಎನ್‌ಸಿ ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಸಿಎನ್‌ಸಿ ಆಪರೇಟ್ ಟರ್ನಿಂಗ್, ಪ್ರೊಡಕ್ಟ್ ಡಿಸೈನ್ ಅಂಡ್ ಡೆವಲಪ್‍ಮೆಂಟ್, ಸಿಎನ್‌ಸಿ ಪ್ರೊಗ್ರಾಮರ್, ಸಿಎನ್‌ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಸಿಎನ್‌ಸಿ ಪ್ರೊಗ್ರಾಮಿಂಗ್ ಮತ್ತು ಆಪರೇಷನ್, ಟರ್ನರ್ ಪ್ರೊಡಕ್ಷನ್ ಇಂಜಿನಿಯರ್ (ಸಿಎಡಿ-ಸಿಎಎಮ್), ಡಿಸೈನರ್ ಮೆಕಾನಿಕಲ್, ಮಿಲ್ಲರ್, ಗ್ರೈಡರ್, ಟೂಲ್ ರೂಮ್ ಮಷಿನಿಸ್ಟ್ ತರಬೇತಿ ನೀಡಲಾಗುತ್ತದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 22 ಸಿ ಮತ್ತು ಡಿ. ಕೆ.ಐ.ಎ.ಡಿ.ಬಿ, ಕೈಗಾರಿಕಾ ಪ್ರದೇಶ ಹರ್ಲಾಪುರ, ಹರಿಹರ-577601 ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆಗಳು 9845941245, 8711913947.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+