CISF ನೇಮಕಾತಿ: 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 15: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಒಟ್ಟು 787 ಕಾನ್ಸ್‌ಟೇಬಲ್ ಹಾಗೂ ಟ್ರೇಡ್ಸ್‌ಮೆನ್ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.cisfrectt.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನವು ಸಿಐಎಸ್‌ಎಫ್ ಸಂಸ್ಥೆಯಲ್ಲಿ ಒಟ್ಟು 787 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2022 ಆಗಿರುತ್ತದೆ.
CISF ನೇಮಕಾತಿ 2022ರಲ್ಲಿ ಖಾಲಿ ಹುದ್ದೆಯ ವಿವರ ಇಂತಿದೆ. ಒಟ್ಟು 779 ಹುದ್ದೆಗಳು. ಕಾನ್‌ಸ್ಟೇಬರ್ ಅಡುಗೆ: 304 ಪೋಸ್ಟ್‌ಗಳು, ಚಮ್ಮಾರ 6 ಪೋಸ್ಟ್‌ಗಳು, ಟೈಲರ್ 27 ಹುದ್ದೆಗಳು, ಬಾರ್ಬರ್ 102 ಪೋಸ್ಟ್‌ಗಳು, ವಾಷರ್ ಮ್ಯಾನ್ 118 ಪೋಸ್ಟ್‌ಗಳು, ಸ್ವೀಪರ್ 199 ಪೋಸ್ಟ್‌ಗಳು, ಪೇಂಟರ್ 01 ಪೋಸ್ಟ್, ಮೇಸನ್ 12 ಪೋಸ್ಟ್‌ಗಳು, ಪ್ಲಂಬರ್ 04 ಪೋಸ್ಟ್‌ಗಳು, ಮಾಲಿ 03 ಪೋಸ್ಟ್‌ಗಳು, ವೆಲ್ಡರ್ 03 ಪೋಸ್ಟ್‌ಗಳು ಖಾಲಿ ಇವೆ ಎಂದು ಪ್ರಕಟಣೆ ತಿಳಿಸಿದೆ.

ಇನ್ನೂ ಬ್ಯಾಕ್ ಲಾಗ್ ಖಾಲಿ ಹುದ್ದೆಗಳು ಚಮ್ಮಾರ 01 ಪೋಸ್ಟ್, ಕ್ಷೌರಿಕ: 7 ಪೋಸ್ಟ್‌ಗಳು ಖಾಲಿ ಇವೆ. ವಯಸ್ಸಿನ ಮಿತಿ ಅಭ್ಯರ್ಥಿಯು 01.08.2022 ರಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಅಭ್ಯರ್ಥಿಗಳು 02/08/1999 ಕ್ಕಿಂತ ಮೊದಲು ಮತ್ತು 01/08/2004 ಕ್ಕಿಂತ ನಂತರ ಹುಟ್ಟಿರಬಾರದು. ಪಾವತಿಸಬೇಕಾದ ಶುಲ್ಕ 100 ರೂಪಾಯಿಗಳು, ಮಹಿಳಾ ಅಭ್ಯರ್ಥಿಗಳು ಮತ್ತು ಮೀಸಲಾತಿಗೆ ಅರ್ಹರಾಗಿರುವ ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಮತ್ತು ಮಾಜಿ ಸೈನಿಕರು (ಇಎಸ್‌ಎಂ) ಗೆ ಸೇರಿದವರು ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ.

ಆನ್‌ಲೈನ್ ಅರ್ಜಿ ನಮೂನೆಯು ನವೆಂಬರ್ 21, 2022 ರಂದು ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2022. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.cisfrectt.in ನಲ್ಲಿ ಆನ್‌ಲೈನ್ ಮೋಡ್ ಮೂಲಕ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.












Click it and Unblock the Notifications