CFTRI ನೇಮಕಾತಿ: 31 ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೈಸೂರು, ಜನವರಿ 10: ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ 2020ನೇ ಸಾಲಿನ ನೇಮಕಾತಿ ಆರಂಭಿಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಫೆಬ್ರವರಿ 06ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Central Food Technological Research Institute (CFTRI)
ಹುದ್ದೆ ಹೆಸರು: Scientist, Senior Scientist & Principal Scientist
ಒಟ್ಟು ಹುದ್ದೆ: 31
ಉದ್ಯೋಗ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳು ಮೈಸೂರು, ಲಕ್ನೋ, ಹೈದರಾಬಾದ್, ಗುವಾಹಟಿ, ಮುಂಬೈನಲ್ಲಿ ಕೆಲಸ ಮಾಡಬೇಕಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.02.2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ ಬಿ. ಟೆಕ್/ ಎಂಎಸ್ಸಿ/ ಎಂ.ಇ/ ಎಂ.ಟೆಕ್/ ಪಿಎಚ್ ಡಿ ಅಥವಾ ತತ್ಸಮಾನ.

ವಯೋಮಿತಿ : 32 ವರ್ಷಗಳು ವಿಜ್ಞಾನಿ ಹುದ್ದೆಗೆ, 37 ವರ್ಷ ಹಿರಿಯ ವಿಜ್ಞಾನಿ, 45 ವರ್ಷ ಮುಖ್ಯ ವಿಜ್ಞಾನಿ.
ನೇಮಕಾತಿ ಪ್ರಕ್ರಿಯೆ: ಉನ್ನತ ಪದವಿ ಅಂಕಗಳು, ಅನುಭವ, ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಆಯ್ಕೆ.
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 08.01. 2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.02. 2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications