Budget 2022; ಆತ್ಮ ನಿರ್ಭರ ಭಾರತದಡಿ 6 ಮಿಲಿಯನ್ ಉದ್ಯೋಗ ಸೃಷ್ಟಿ
ನವದೆಹಲಿ, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಸಚಿವರು ಆತ್ಮ ನಿರ್ಭರ್ ಭಾರತ್ ಬಗ್ಗೆ ಮಾತನಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಕನಸು.
ಬಜೆಟ್ ಭಾಷಣದಲ್ಲಿ ಆತ್ಮ ನಿರ್ಭರ್ ಭಾರತ್ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಈ ಯೋಜನೆಯಡಿ 6 ಮಿಲಿಯನ್ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದು ಘೋಷಣೆ ಮಾಡಿದರು.

14 ಸೆಕ್ಟೆರ್‌ಗಳಲ್ಲಿ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆ (ಪಿಎಲ್‌ಐ) ಅಡಿ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
2020ರ ಮೇನಲ್ಲಿ ಕೋವಿಡ್ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಭರ್ ಭಾರತ್ ಅಭಿಯಾನದ ಕರೆ ನೀಡಿದರು. ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ್ದ ಅವರು ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಮತ್ತು ಆರ್‌ಬಿಐ ನಿರ್ಣಯಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಅದು 20 ಲಕ್ಷ ಕೋಟಿ ರೂ. ಆಗುತ್ತದೆ ಮತ್ತು ಅದು ಭಾರತದ ಜಿಡಿಪಿಯ ಶೇ.10 ರಷ್ಟಾಗುತ್ತದೆ ಎಂದರು. ಈ ಪ್ಯಾಕೇಜ್ ಆತ್ಮ ನಿರ್ಭರ್ ಭಾರತ್ ಗುರಿ ಸಾಧನೆಯ ನಿಟ್ಟಿನಲ್ಲಿ ಅಗತ್ಯವಾದ ಚೈತನ್ಯ ನೀಡುತ್ತದೆ ಎಂದು ಹೇಳಿದ್ದರು.
ಆತ್ಮ ನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತ ಚಳವಳಿಗೆ ಪ್ರಧಾನಿ ಕರೆ ನೀಡಿದ್ದರು. ಆರ್ಥಿಕತೆ, ಮೂಲಸೌಕರ್ಯ, ಸರಕಾರಿ ವ್ಯವಸ್ಥೆ, ಕ್ರಿಯಾಶೀಲ ಜನಸಂಖ್ಯೆ ಮತ್ತು ಬೇಡಿಕೆ ಈ 5 ಅಂಶಗಳನ್ನು ಆತ್ಮ ನಿರ್ಭರ್ ಭಾರತ್‌ನ ಐದು ಆಧಾರಸ್ಥಂಭಗಳೆಂದು ವಿವರಣೆ ನೀಡಿದ್ದರು.
ಪ್ರಧಾನಿ ಭಾಷಣದ ಬಳಿಕ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2020ರ ಮೇ 13ರಿಂದ 17ರ ವರೆಗೆ ನಡೆಸಿದ ಸರಣಿ ಸುದ್ದಿಗೋಷ್ಠಿಯಲ್ಲಿ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ವಿವರಗಳನ್ನು ನೀಡಿದ್ದರು. ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಕ್ಷಣವೇ ಆತ್ಮ ನಿರ್ಭರ್ ಭಾರತ್ ಅಭಿಯಾನದಡಿ ಆರ್ಥಿಕ ಪ್ಯಾಕೇಜ್‌ನಲ್ಲಿ ಘೋಷಿಸಲಾಗಿರುವ ಅಂಶಗಳ ಅನುಷ್ಠಾನ ಆರಂಭಿಸಿತು.












Click it and Unblock the Notifications