Boeing Layoffs: ಕಂಪನಿಯಿಂದ 400ಕ್ಕೂ ಅಧಿಕ ನೌಕರರ ವಜಾ ಘೋಷಣೆ: ನೋಟಿಸ್ ರವಾನೆ
Boeing Jobs Cut: ವೃತ್ತಿಪರ ವಿಮಾನ ಕೈಗಾರಿಕಾ ಕಂಪನಿಯಾಗಿರುವ ಬೋಯಿಂಗ್ (Boeing Layoffs) ತನ್ನ ವೃತ್ತಿಪರ ಏರೋಸ್ಪೇಸ್ ಲೇಬರ್ ಯೂನಿಯನ್‌ನ 400ಕ್ಕೂ ಅಧಿಕ ಉದ್ಯೋಗಿಗಳಿಗೆ ಶಾಕ್ ನೀಡಿದೆ. ವಿವಿಧ ಕಾರಣಗಳನ್ನು ಉಲ್ಲೇಖಿಸಿರುವ ಕಂಪನಿಯು ಈ ನೌಕರರಿಗೆ ಒಂದು ವಾರದ ಹಿಂದೆಯೇ ಉದ್ಯೋಗ ಕಡಿತದ ನೋಟಿಸ್ ಅನ್ನು ರವಾನಿಸಿದೆ. ಇದು ಕಂಪನಿಯು ಇತರರ ನೌಕರರಲ್ಲೂ ಆತಂಕ ಹೆಚ್ಚಾಗಲು ಕಾರಣವಾಗಲಿದೆ.
ಈಗಾಗಲೇ ಕಂಪನಿಯು ಸಂಬಂಧಿಸಿದ ವಿಭಾಗಕ್ಕೆ ನೌಕರರ ವಜಾ ಮಾಡಲು ಅಗತ್ಯ ಸೂಚನೆ ನೀಡಿದೆ. ಈ ನಿರ್ಧಾರಕ್ಕೆ ಕಂಪನಿಯು ಆರ್ಥಿಕ ತೊಂದರೆ, ಇತ್ತೀಚಿನ ಹಿನ್ನಡಲೆ, ಅಲ್ಲದೇ ಎರಡು ತಿಂಗಳ ಹಿಂದಷ್ಟೇ ಯಂತ್ರ ಪರಿಣಿತರ ಒಕ್ಕೂಟದ ಮುಷ್ಕರ ಎಲ್ಲವುಗಳನ್ನು ಕಾರಣವಾಗಿ ನೀಡಿದೆ. ಹೀಗಾಗಿ ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆಸಲಾಗುವುದು ಎಂದು ರವಾನಿಸಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ದಿ ಸಿಯಾಟಲ್ ಟೈಮ್ಸ್‌ನ ವರದಿ ಮಾಡಿದೆ.

ವರದಿ ಪ್ರಕಾರ, ಉದ್ಯೋಗ ಕಡಿತದ ಸಂದೇಶ/ನೋಟಿಸ್ ಸೊಸೈಟಿ ಆಫ್ ಪ್ರೊಫೆಷನಲ್ ಇಂಜಿನಿಯರಿಂಗ್ ಎಂಪ್ಲಾಯೀಸ್ ಇನ್ ಏರೋಸ್ಪೇಸ್ (SPEEA) ಸದಸ್ಯರಿಗೆ ಕಳುಹಿಸಿದೆ. ಪೇರೋಲ್ ಅನ್ವಯ ಉದ್ಯೋಗಿಗಳು ಬೋಯಿಂಗ್ ಕಂಪನಿಯಲ್ಲಿ ಜನವರಿ ಮಧ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ನಂತರ ಹೊರ ಬರಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿಯೇ ಬೋಯಿಂಗ್ ತನ್ನ ಒಟ್ಟು ಸಿಬ್ಬಂದಿಯಲ್ಲಿ 10 ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು. ಅಂದರೆ ಒಟ್ಟು ಸುಮಾರು 17,000 ಉದ್ಯೋಗಿಗಳಲ್ಲಿ ಶೇಕಡಾ 10 ರಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿತ್ತು. ಕಂಪನಿ ಕಾರ್ಯಪಡೆ ಮರ ಸಂಘಟಿಸಲು, ಆರ್ಥಿಕ ಸುಧಾರಣೆ, ಒಂದಷ್ಟು ಬದಲಾವಣೆಯ ಕಾರಣದಿಂದಾಗಿ ಈ ಉದ್ಯೋಗಿಗಳ ವಜಾ ಅಗತ್ಯವಾಗಿದೆ ಎಂದು ಕಂಪನಿ ಸಿಇಒ ಮಾತನಾಡಿದ್ದರು.
ಕಂಪನಿಯ ಈ ವಜಾ ನಿರ್ಧಾರದಿಂದಾಗಿ SPEEA ದ 438 ಸದಸ್ಯರು ಕೆಲಸ ಕಳೆದುಕೊಳ್ಳಲಿದ್ದಾರೆ. ಒಟ್ಟು ಸುಮಾರು 17,000 ಬೋಯಿಂಗ್ ಉದ್ಯೋಗಿಗಳನ್ನು ಪ್ರತಿನಿಧಿಸುವ ಒಕ್ಕೂಟವು ಪ್ರಾಥಮಿಕವಾಗಿ ವಾಷಿಂಗ್ಟನ್ ನಗರದಲ್ಲಿದೆ.
ಸದ್ಯ ಉದ್ಯೋಗ ಕಡಿತದ ನೋಟಿಸ್ ಪಡೆದಿರುವ ಒಟ್ಟು 438 ಉದ್ಯೋಗಿಗಳಲ್ಲಿ 218 ಮಂದಿ SPEEA ಯೂನಿಯನ್ ಭಾಗವಾಗಿದ್ದಾರೆ. ಯಂತ್ರ ಪರಿಣಿತರ ಜೊತೆಗೆ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಇದರಲ್ಲಿದ್ದಾರೆ. ಹೆಚ್ಚಾಗಿ ತಾಂತ್ರಿಕ ಘಟಕಕ್ಕೆ ಸೇರಿದ ವಿಶ್ಲೇಷಕರು, ಯೋಜಕರು, ತಂತ್ರಜ್ಞರು ಉದ್ಯೋಗ ಕಡಿತ ಪಟ್ಟಿಯಲ್ಲಿದ್ದಾರೆ ಎಂದು ವರದಿ ಆಗಿದೆ.
ಬೋಯಿಂಗ್ ಕೆಲಸದಿಂದ ತೆಗೆಯಲ್ಪಡುವ ಈ ಉದ್ಯೋಗಿಗಳು ಮುಂದಿನ ಮೂರು ತಿಂಗಳ ಕಾಲ ಕಂಪನಿಯಿಂದ ಸಹಾಯಧನದಲ್ಲಿ ಆರೋಗ್ಯ ಸೌಲಭ್ಯ ಪಡೆಯಲಿದ್ದಾರೆ. ಅಲ್ಲದೇ ವಜಾ ವೇಳೆ ಪಡೆಯುವ ಸವಲತ್ತುಗಳನ್ನು ಪಡೆಯಲಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ.












Click it and Unblock the Notifications