ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಚ್ಇಎಲ್‌ನಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್) ನಲ್ಲಿ 22ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದಾಗಿದೆ. ಇಂಜಿನಿಯರ್, ಸೂಪರ್ ವೈಸರ್ ಹುದ್ದೆಗೆ ಅರ್ಜಿ ಹಾಕುವವರು ಅಕ್ಟೋಬರ್ 01ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು : ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್)
ಒಟ್ಟು ಹುದ್ದೆಗಳ ಸಂಖ್ಯೆ: 22
ಹುದ್ದೆ ಹೆಸರು: ಇಂಜಿನಿಯರ್, ಸೂಪರ್ ವೈಸರ್ (FTA)
ಹುದ್ದೆ ಸ್ಥಳ : ಕೋಲ್ಕತ್ತಾ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01 ಅಕ್ಟೋಬರ್ 2021

ಒಟ್ಟು ಹುದ್ದೆ: 22
ಇಂಜಿನಿಯರ್ (ಸಿವಿಲ್): 07
ಸೂಪರ್ ವೈಸರ್ (ಸಿವಿಎಲ್): 15

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಇಂಜಿನಿಯರಿಂಗ್ ಪದವಿ (ಸಿವಿಎಲ್) ಅಥವಾ 5 ವರ್ಷಗಳ ಸ್ನಾತಕೋತ್ತರ ಪದವಿ. ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು ಪದವಿಯಲ್ಲಿ ಶೇ 60ರಷ್ಟು ಪಡೆದಿರಬೇಕು. ಅರ್ಹ ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು ಎಂದು ನಿಗದಿಯಾಗಿದೆ.

BHEL recruitment 2021 for Engineer Posts

ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ 2 ವರ್ಷಗಳ ಸೇವಾವಧಿ ಅನುಭವ ಹೊಂದಿರತಕ್ಕದ್ದು. ಸಿಮೆಂಟ್ ಪ್ಲಾಂಟ್, ಆರ್ ಸಿ ಸಿ, ಫ್ಯಾಬ್ರಿಕೇಷನ್, ಉಕ್ಕು ಸ್ಥಾವ, ರಿಫೈನರಿ, ಪೆಟ್ರೋ ಕೆಮಿಕಲ್ ಮುಂತಾದೆಡೆ ಕಾರ್ಯ ನಿರ್ವಹಿಸಿದ ಅನುಭವವಿದ್ದವರಿಗೆ ಆದ್ಯತೆ.

ತಾಂತ್ರಿಕವಾಗಿ ಬೇಸಿಕ್ ಕಂಪ್ಯೂಟರ್ ಜ್ಞಾನ, ಆಟೋ ಕ್ಯಾಡ್, ಎಂಎಸ್ ಪ್ರಾಜೆಕ್ಟ್ ತಿಳಿದಿರಬೇಕು.

ಸೂಪರ್ ವೈಸರ್ ಹುದ್ದೆ:
ತಾಂತ್ರಿಕ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಡಿಪ್ಲೋಮಾ(ಸಿವಿಎಲ್). ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು ಪದವಿಯಲ್ಲಿ ಶೇ 60ರಷ್ಟು ಪಡೆದಿರಬೇಕು. ಅರ್ಹ ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು ಎಂದು ನಿಗದಿಯಾಗಿದೆ.

ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ 2 ವರ್ಷಗಳ ಸೇವಾವಧಿ ಅನುಭವ ಹೊಂದಿರತಕ್ಕದ್ದು. ಸಿಮೆಂಟ್ ಪ್ಲಾಂಟ್, ಆರ್ ಸಿ ಸಿ, ಫ್ಯಾಬ್ರಿಕೇಷನ್, ಉಕ್ಕು ಸ್ಥಾವ, ರಿಫೈನರಿ, ಪೆಟ್ರೋ ಕೆಮಿಕಲ್ ಮುಂತಾದೆಡೆ ಕಾರ್ಯ ನಿರ್ವಹಿಸಿದ ಅನುಭವವಿದ್ದವರಿಗೆ ಆದ್ಯತೆ.

ವಯೋಮಿತಿ :
ಸಾಮಾನ್ಯ ವರ್ಗ : ಗರಿಷ್ಠ 34 ವರ್ಷ (01/09/2021ರಂತೆ)
ಒಬಿಸಿ : ಕೆನೆಪದರ ರಹಿತ 3 ವರ್ಷ ವಿನಾಯಿತಿ
ಎಸ್ ಸಿ/ ಎಸ್ಟಿ : 5 ವರ್ಷ ವಿನಾಯಿತಿ
ದಿವ್ಯಾಂಗ (ಸಾಮಾನ್ಯ): 10 ವರ್ಷ ವಿನಾಯಿತಿ
ದಿವ್ಯಾಂಗ (ಒಬಿಸಿ): 13 ವರ್ಷ (ಕೆನೆಪದರ ರಹಿತ)
ದಿವ್ಯಾಂಗ (ಎಸ್ ಸಿ/ ಎಸ್ ಟಿ): 15 ವರ್ಷ.

ಸರ್ಕಾರದ ಮಾರ್ಗಸೂಚಿಯಂತೆ ಮಾಜಿ ಯೋಧ ಅಭ್ಯರ್ಥಿಗಳಿಗೂ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ಸಂಬಳ ನಿರೀಕ್ಷೆ:
ಇಂಜಿನಿಯರ್ (FTA): 71,040 plus ಮೆಡಿಕ್ಲೇಮ್ 2 ಲಕ್ಷ ರು ತನಕ (ಅವಲಂಬಿತರು ಸೇರಿ)
ಸೂಪರ್ ವೈಸರ್ (FTA): 39,670 plus ಮೆಡಿಕ್ಲೇಮ್ 2 ಲಕ್ಷ ರು ತನಕ (ಅವಲಂಬಿತರು ಸೇರಿ)

ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ, ದಿವ್ಯಾಂಗ ಅಭ್ಯರ್ಥಿ ಹೊರತುಪಡಿಸಿ ಮಿಕ್ಕ ಅಭ್ಯರ್ಥಿಗಳಿಗೆ 200 ರು.

ಅರ್ಜಿ ಶುಲ್ಕ ಪಾವತಿ; ಎಸ್ ಬಿಐ ಕಲೆಕ್ಟ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ (BHEL, PSER, Kolkata) ಹೆಸರಿನಲ್ಲಿ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸುವುದು ಹೇಗೆ: ಅರ್ಹ, ಆಸಕ್ತ ಅಭ್ಯರ್ಥಿಗಳು ಸೂಕ್ತ ಅರ್ಜಿ ಮಾದರಿಯನ್ನು ಬಿಎಚ್ಇಎಲ್ ವೆಬ್ ತಾಣ(https://careers.bhel.in/)ದಿಂದ ಪಡೆದುಕೊಂಡು ಭರ್ತಿ ಮಾಡಿ ಆನ್ ಲೈನ್ ಮೂಲಕ ಸಲ್ಲಿಸತಕ್ಕದ್ದು.ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯ ದಾಖಲೆ ಪತ್ರಗಳನ್ನು ಲಗತ್ತಿಸಿರತಕ್ಕದ್ದು

ಮುಖ್ಯ ದಿನಾಂಕಗಳು:
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟೆಂಬರ್ 24, 2021.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 01, 2021
ಅಂಚೆ ಮೂಲಕ ದೂರದ ಪ್ರದೇಶ ಅರ್ಜಿ ಸ್ವೀಕಾರ ಕೊನೆ ದಿನಾಂಕ: ಅಕ್ಟೋಬರ್ 08, 2021
ಅರ್ಜಿ ಸಲ್ಲಿಸಲು ಅಂಚೆ ವಿಳಾಸ:
Sr. Deputy General Manager (HR)
BHEL, Power Sector Eastern Region,
BHEL Bhawan, Plot No. DJ- 9/1, Sector- II, Salt Lake City, Kolkata - 700091

ಅರ್ಜಿ ಮೇಲೆ Application for the Post of Engineer (FTA-Civil) or Supervisor (FTA-Civil) ಎಂದು ಬರೆಯತಕ್ಕದ್ದು.

ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಡಿಪ್ಲೋಮಾ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

English summary
BHEL recruitment 2021 notification has been released on official website for the recruitment of 22 vacancies at Bharat Heavy Electrical Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X