ಬಿಇಎಂಎಲ್ ನಲ್ಲಿ 42 ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 02 : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಸಹಾಯಕ ಜನರಲ್ ಮ್ಯಾನೇಜರ್, ಡಿಪ್ಲಮೋ ಟ್ರೈನಿ ಸೇರಿದಂತೆ ಒಟ್ಟು 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಸಹಾಯಕ ಜನರಲ್ ಮ್ಯಾನೇಜರ್-17 ಹುದ್ದೆಗಳು, ಡಿಪ್ಲಮೋ ಟ್ರೈನಿ-25 ಒಟ್ಟು 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

BEML Limited Recruitment 2017 42 asst manager and Diploma Trainees posts

ವಯೋಮಿತಿ: ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ 43 ವರ್ಷ, ಡಿಪ್ಲಮೋ ಟ್ರೈನಿ ಅಭ್ಯರ್ಥಿಗಳಿಗೆ 26 ವರ್ಷ ವಯಸ್ಸು ನಿಗದಿ ಮಾಡಲಾಗಿದೆ.

ವಿದ್ಯಾರ್ಹತೆ: * ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಡಿಗ್ರಿ, ಮೆಕ್ಯಾನಿಕಲ್/ಆಟೋಬೈಲ್ಸ್/ಎಲೆಕ್ಟ್ರಿಕಲ್/ ಪದವಿ ಪಡೆದಿರಬೇಕು.

* ಡಿಪ್ಲಮೋ ಟ್ರೈನಿ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಡಿಪ್ಲಮೋದಲ್ಲಿ ಇಂಜಿನಿಯರಿಂಗ್ ಮೆಕ್ಯಾನಿಕಲ್/ಆಟೋಬೈಲ್ಸ್/ಎಲೆಕ್ಟ್ರಿಕಲ್/ ಪದವಿ ಪಡೆದಿರಬೇಕು.

ವೇತನ: * ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ - 32900-58000/-. * ಡಿಪ್ಲಮೋ ಟ್ರೈನಿ ಹುದ್ದೆಗೆ-51300-73000/-.

ಆಯ್ಕೆ ವಿಧಾನ: ಸಂದರ್ಶನ.

ಅರ್ಜಿ ಶುಲ್ಕ: ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಡಿಪ್ಲಮೋ ಟ್ರೈನಿ ಹುದ್ದೆಗೆ ಅರ್ಜಿ ಹಾಕುವ ಓಬಿಸಿ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ 500 ರು ಚಲನ್ ತುಂಬಬೇಕು. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BEML Limited, a pioneer in Multi Business invites application from eligible candidates for the recruitment of Assistant General Manager, Diploma Trainees & Various Posts. Last date February 21.
Please Wait while comments are loading...