ಬಿಇಎಲ್ ನೇಮಕಾತಿ 2019 : ಸಹಾಯಕ ಇಂಜಿನಿಯರ್ ಹುದ್ದೆಗಳಿವೆ
ಬೆಂಗಳೂರು, ಮಾರ್ಚ್ 26:ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2019ರ ನೇಮಕಾತಿ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಡೆಪ್ಯುಟಿ ಇಂಜಿನಿಯರ್ ಗಳ ಹುದ್ದೆಗೆ ನೇಮಕವಾಗಲು ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 03ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಹುದ್ದೆ ಹೆಸರು: ಡೆಪ್ಯುಟಿ ಇಂಜಿನಿಯರ್
ಒಟ್ಟು ಹುದ್ದೆಗಳು: ವಿವಿಧ
ಹುದ್ದೆಯ ತಾಣ: ಬೆಂಗಳೂರು (ಕರ್ನಾಟಕ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 03, 2019
ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಎಂಎಸಿ ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಾನಿಕ್ಸ್ ಸೈನ್ಸ್ ಅಥವಾ ತತ್ಸಮಾನ ಪದವಿ

ವಯೋಮಿತಿ : ಗರಿಷ್ಠ ವಯಸ್ಸು 26 ವರ್ಷ
ಸಂಬಳ ನಿರೀಕ್ಷೆ: 40,000 ರು ನಿಂದ 1,40,000 ರು
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವಯಕ್ತಿಕ ಸಂದರ್ಶನ
ಪ್ರಮುಖ ದಿನಗಳು:
ಅರ್ಜಿ ಸಲ್ಲಿಕೆ ಆರಂಭ : 25 ಮಾರ್ಚ್ 2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03 ಏಪ್ರಿಲ್ 2019
ಅರ್ಜಿ ಸಲ್ಲಿಸುವ ವಿಧಾನ:
ಸೂಕ್ತ ಶೈಕ್ಷಣಿಕ ಅರ್ಹತೆ, ಜನನ ಪ್ರಮಾಣ ಪತ್ರ, ಜಾತಿ ಇನ್ನಿತರ ಪ್ರಮಾಣ ಪತ್ರ ಅಗತ್ಯ ದಾಖಲೆಗಳಿಗೆ ಸ್ವಯಂ ಹಸ್ತಾಕ್ಷರದೊಂದಿಗೆ ಅರ್ಜಿಯೊಂದಿಗೆ ಲಗತ್ತಿಸಿರಬೇಕು. ತುಂಬಿದ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು
ವಿಳಾಸ:
The DY.GEN.MANAGER (HR/Mil-Com), Military Communication SBU,
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಜಾಲಹಳ್ಳಿ ಪೋಸ್ಟ್, ಬೆಂಗಳೂರು 560 013
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications