ಬೆಂಗಳೂರು, ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನೇಮಕಾತಿ
ಬೆಂಗಳೂರು, ಜುಲೈ 17 : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ 250 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸುಮಾರು 15 ನಮೂನೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಆಗಸ್ಟ್ 11,2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) -22 ಹುದ್ದೆ, ವೈದ್ಯಾಧಿಕಾರಿ-01, ತಾಂತ್ರಿಕ ಅಧಿಕಾರಿ (ಡಿ.ಟಿ)-15, ತಾಂತ್ರಿಕ ಅಧಿಕಾರಿ ( ಇಂಜಿನಿಯರಿಂಗ್)-10, ಇಂಜಿನಿಯರಿಂಗ್-02 ಹುದ್ದೆ, ಎನ್ವಿರಾನ್ಮೆಂಟ್ ಇಂಜಿನಿಯರಿಂಗ್-01, ಕೃಷಿ ಅಧಿಕಾರಿ-03, ಮಾರುಕಟ್ಟೆ ಅಧಿಕಾರಿ-05, ವಿಸ್ತರಣಾಧಿಕಾರಿ ದರ್ಜೆ-3: 54, ಡೈರಿ ಸೂಪರ್ವೈಸರ್ ದರ್ಜೆ-2: 10, ಆಡಳಿತ ಸಹಾಯಕ ದರ್ಜೆ-2: 20, ಜೂನಿಯರ್ ಸಿಸ್ಟಂ ಆಪರೇಟರ್-20, ಕೆಮಿಸ್ಟ್ ದರ್ಜೆ-2: 23,ಮಾರುಕಟ್ಟೆ ಸಹಾಯಕ ದರ್ಜೆ-2: 02, ಲೆಕ್ಕ ಸಹಾಯಕ ದರ್ಜೆ-2: 06, ಶುಶ್ರೂಷಕರು: 02 ಹುದ್ದೆಗಳು.
ವಯೋಮಿತಿ: 10 ಆಗಸ್ಟ್ 2017ಕ್ಕೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18ರಿಂದ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಆಯ್ಕೆ ವಿಧಾನ: ಮೇಲಿನ ಕೆಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಅಭ್ಯರ್ಥಿಗಳು ಪಡೆದ ಅಂಕಗಳ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications