ಬಾಗಲಕೋಟೆ; ಜಿಲ್ಲಾ ಪಂಚಾಯಿತಿ ನೇಮಕಾತಿ, ಹುದ್ದೆ ವಿವರ
ಬಾಗಲಕೋಟೆ, ಸೆಪ್ಟೆಂಬರ್ 28; ಜಿಲ್ಲಾ ಪಂಚಾಯಿತಿ ಬಾಗಲಕೋಟೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 19/10/2023 ಕೊನೆಯ ದಿನವಾಗಿದೆ.
ನರೇಗಾ ಯೋಜನೆಯಡಿ ಖಾಲಿಯಿರುವ ಹಾಗೂ ಹೊಸದಾಗಿ ಅನುಮತಿಸಿದ ತಾಂತ್ರಿಕ ಸಹಾಯಕರು (ತೋಟಗಾರಿಕೆ, ಅರಣ್ಯ, ರೇಷ್ಮೆ), ತಾಂತ್ರಿಕ ಸಹಾಯಕ ಸಿವಿಲ್ ಮತ್ತು ತಾಲೂಕಾ ಎಂಐಎಸ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ಹುದ್ದೆಗಳ ವಿವರ; ರೇಷ್ಮೆ ತಾಂತ್ರಿಕ ಸಹಾಯಕರು 1, ತೋಟಗಾರಿಕೆ ತಾಂತ್ರಿಕ ಸಹಾಯಕರು 7, ಅರಣ್ಯ ತಾಂತ್ರಿಕ ಸಹಾಯಕರು 4, ತಾಂತ್ರಿಕ ಸಹಾಯಕರು (ಸಿವಿಲ್) 1, ತಾಲೂಕು ಎಂಐಎಸ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸೆಪ್ಟೆಂಬರ್ 26 ರಿಂದ 19/10/2023ರ ತನಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ನೇಮಕಾತಿ ಅಧಿಸೂಚನೆಯನ್ನು https://bagalkot.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಜಿಗಳನ್ನು ಸಹ http://bagalkot.nic.in ಲಿಂಕ್ ಬಳಸಿ ಸಲ್ಲಿಕೆ ಮಾಡಬಹುದಾಗಿದೆ.
ಷರತ್ತುಗಳು
* ಅಭ್ಯರ್ಥಿಯ ವಯೋಮಿತಿ ಕನಿಷ್ಠ 18 ವರ್ಷ ಹಾಗೂ ಅಧಿಸೂಚನೆಯ ಅಂತಿಮ ದಿನಾಂಕ 19/10/2023ಕ್ಕೆ ಅಭ್ಯರ್ಥಿಯ ವಯಸ್ಸು 40 ವರ್ಷದೊಳಗೆ ಇರತಕ್ಕದ್ದು.
* ಅಭ್ಯರ್ಥಿಯು ವಿದ್ಯಾರ್ಹತೆ ಸಂಬಂಧಿಸಿದ ವಿಷಯದಲ್ಲಿ ಪದವಿ ಹೊಂದಿರಬೇಕು. ಸ್ನಾತಕೊತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
* ಸಂಬಂಧಿಸಿದ ವಿಷಯದ ಕಾರ್ಯಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಸೇವಾನುಭವ ಹೊಂದಿರಬೇಕು.
* ಮಾಸಿಕ ಸಂಭಾವನೆ ಹುದ್ದೆಗಣುಗುನವಾಗಿ ನಿಗದಿಪಡಿಸಿದೆ.
ಆಯ್ಕೆ ಪ್ರಕ್ರಿಯೆ; ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಜಿಲ್ಲಾ ಪಂಚಾಯತಿ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಲಾಗುವುದು. ಆಕ್ಷೇಪಣೆ ಪ್ರಕ್ರಿಯೆ ನಂತರ ಮೆರಿಟ್ ಪಟ್ಟಿಯನ್ನು ಅವಶ್ಯವಿರುವ ಹುದ್ದೆಗಣುಗುನವಾಗಿ ಅನುಪಾತ 1:3 ರಂತೆ Short list ಅನ್ನು ತಯಾರಿಸಲಾಗುವುದು.
ಶಾರ್ಟ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಹಾಗೂ ಸ್ವೀಕೃತಿ ಪ್ರತಿಯನ್ನು ಪರಿಶೀಲನೆ ಮಾಡಲಾಗುವುದು. ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ದಿನಾಂಕವನ್ನು ಇ-ಮೇಲ್/ ದೂರವಾಣಿ ಮೂಲಕ ತಿಳಿಸಲಾಗುವುದು. ಒಂದು ವೇಳೆ ಮೆರಿಟ್ ಶಾರ್ಟ್‌ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗದೇ ಇದ್ದಲ್ಲಿ ಮೆರಿಟ್ ಪಟ್ಟಿಯಲ್ಲಿರುವ (Waiting list) ಮುಂದಿನ ಅಭ್ಯರ್ಥಿಗಳನ್ನು ಹುದ್ದೆಯ ನೇಮಕಾತಿಗೆ ಪರಿಗಣಿಸಲಾಗುವುದು.
ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಹೊಂದಿರಬೇಕು ಈ ಬಗ್ಗೆ ಪ್ರಾಯೋಗಿಕ ಪರೀಕ್ಷೆ ಮೂಲಕ ಅಂತಿಮ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಸಂಸ್ಥೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಬಗ್ಗೆ ಪ್ರತಿ ವರ್ಷ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಅಂತಿಮ ಆಯ್ಕೆ ಪಟ್ಟಿ ಅನುಮೋದಿಸುವ ಅಥವಾ ರದ್ದುಪಡಿಸುವುದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಬಾಗಲಕೋಟೆ ಇವರ ತೀರ್ಮಾನವಾಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6360514369, 9110811094 ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.












Click it and Unblock the Notifications