ಕೋಲಾರ; ಕೆಲಸ ಖಾಲಿ ಇದೆ, ಸೆ. 16ರೊಳಗೆ ಅರ್ಜಿ ಹಾಕಿ

ಕೋಲಾರ, ಸೆಪ್ಟೆಂಬರ್ 10; ಜಿಲ್ಲಾ ಆಯುಷ್ ಕಛೇರಿ, ಕೋಲಾರ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮೇಲ್ದರ್ಜೆಗೇರಿಸಲಾದ ಆಯುಷ್ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು 16/9/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಖಾಲಿ ಇರುವ ತಜ್ಞ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ಹುದ್ದೆಗಳನ್ನು ಸಂಪೂರ್ಣ ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಈ ನೇಮಕಾತಿಯು ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

doctor-jobs-kolar

ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಕೋಲಾರ ಇಲ್ಲಿ ಹೋಮಿಯೋಪತಿ ತಜ್ಞ ವೈದ್ಯರು 1 ಹುದ್ದೆಗೆ ಅರ್ಜಿ ಕರೆಯಲಾಗಿದೆ. ವೇತನ 52,550 + 5 ಸಾವಿರ ಭತ್ಯೆ. ಕ್ಷಾರಸೂತ್ರ ಅಟೆಂಡೆಂಟ್ 1 ಹುದ್ದೆ, ವೇತನ 18,500 ರೂ. ಮತ್ತು ಮಸಾಜಿಸ್ಟ್ 1 ಹುದ್ದೆ, ವೇತನ 18,500 ರೂ.ಗಳು.

ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶ್ರೀನಿವಾಸಪುರದಲ್ಲಿ ಆಯುರ್ವೇದ ತಜ್ಞ ವೈದ್ಯರು 1 ಹುದ್ದೆಗೆ ಅರ್ಜಿ ಕರೆಯಲಾಗಿದೆ. ವೇತನ 52,550 + 5 ಸಾವಿರ ಭತ್ಯೆ. ಫಾರ್ಮಸಿಸ್ಟ್ 2 ಹುದ್ದೆ, ವೇತನ 27,550 ರೂ.ಗಳು ಎಂದುದ ನಿಗದಿ ಮಾಡಲಾಗಿದೆ.

ನೇಮಕಾತಿಯ ಷರತ್ತುಗಳು

* ಗುತ್ತಿಗೆ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು ದಿನಾಂಕ 31/3/2024ಕ್ಕೆ ಅಂತ್ಯಗೊಳ್ಳುತ್ತದೆ. ಆರ್ಥಿಕ ವರ್ಷ ಕೊನೆಯ ದಿನ ಮುಕ್ತಾಯವಾದ ನಂತರ ಒಂದು ದಿನ ವಿರಾಮ (Break) ನೀಡಿ ತರುವಾಯ ಮುಂದಿನ ಆರ್ಥಿಕ ವರ್ಷದ ಕೊನೆಯ ದಿನಾಂಕದವರೆಗೆ ಗುತ್ತಿಗೆ ಸೇವೆಯನ್ನು ಮುಂದುವರೆಸುವ ಬಗ್ಗೆ ಆಯುಷ್‌ ನಿರ್ದೇಶನಾಲಯ ಹಾಗೂ ಜಿಲ್ಲಾ ಆಯುಷ್‌ ಸಮಿತಿಯು ನಿರ್ಣಯಿಸಿದಂತೆ ಕ್ರಮಕೈಗೊಳ್ಳಲಾಗುವುದು.

* ಕ.ನಾ.ಸೇ (ಸಾಮಾನ್ಯ ನೇಮಕಾತಿ) ನಿಯಮಗಳು ರೀತ್ಯ ನಿಗದಿತ ವಯೋಮಿತಿಯಲ್ಲಿರುವುದು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು, ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳು, ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು, ಅಂಗವಿಕಲ ಅಭ್ಯರ್ಥಿ ಅಥವಾ ವಿಧವೆಯಾಗಿದ್ದಲ್ಲಿ 10 ವರ್ಷಗಳು ವಯೋಮಿತಿ ಸಡಿಲಿಕೆ. (ನಿಯಮಗಳು ಅನ್ವಯ).

* ಜಿಲ್ಲಾ ಆಯುಷ್ ಸಮಿತಿಯ ಸಂದರ್ಶನಕ್ಕೆ ಹಾಜರಾಗುವ ಮುನ್ನ ವಿದ್ಯಾರ್ಹತೆ/ ಮೀಸಲಾತಿ/ ವಯಸ್ಸು/ ವಾಸಸ್ಥಳ/ ವಾರ್ಷಿಕ ಆದಾಯ/ ಸಮಿತಿಯು ಕೋರುವ ಇತರೆ ಮೂಲ ದಾಖಲೆಗಳನ್ನು ಹಾಜರುಪಡಿಸುವುದು. ಕೇಂದ್ರ ಸ್ಥಾನದಲ್ಲಿ ತಂಗಿದ್ದು 24 ಗಂಟೆಗಳಲ್ಲೂ ಯಾವುದೇ ತುರ್ತು ಸೇವೆಗೆ ಲಭ್ಯವಿದ್ದು ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರಬೇಕು.

* ತೃಪ್ತಿಕರವಾದ ಕರ್ತವ್ಯ ನಿರ್ವಹಣೆ ಷರತ್ತಿಗೆ ಒಳಪಟ್ಟು ಪ್ರತಿ ತಿಂಗಳು ಸಂಚಿತ ಮೊತ್ತವನ್ನು ಮಾತ್ರ ನೀಡಲಾಗುವುದು. ಗುತ್ತಿಗೆ ಆಧಾರದ ತಾತ್ಕಾಲಿಕ ನೇಮಕಾತಿಯನ್ನು ಯಾವುದೇ ಸಮಯದಲ್ಲಿ ಕಾರಣವಿಲ್ಲದೇ ಅಥವಾ ಸರ್ಕಾರ, ಉಭಯ ಪಕ್ಷಗಳು ಒಂದು ತಿಂಗಳ ನೋಟೀಸ್ ಕೊಟ್ಟು ಸೇವೆಯನ್ನು ಪರ್ಯವಸನಗೊಳಿಸುವ ಷರತ್ತಿಗೊಳಪಟ್ಟಿರುತ್ತದೆ.

* ಅಭ್ಯರ್ಥಿಗಳು ದುರ್ನಡತೆಯಿಂದಾಗಿ ಸರ್ಕಾರಕ್ಕೆ ಆರ್ಥಿಕ & ಇನ್ನಿತರೆ ನಷ್ಟ ಉಂಟಾದಲ್ಲಿ ಅದನ್ನು ಅವರುಗಳೇ ಸರ್ಕಾರಕ್ಕೆ ತುಂಬಿ ಕೊಡುವುದು. ಖಾಯಂ ನೇಮಕಾತಿಗಾಗಲೀ, ವಿಶ್ರಾಂತಿ ವೇತನಕ್ಕಾಗಲೀ, ನಿವೃತ್ತಿ ಉಪದಾನಕ್ಕಾಗಲೀ, ವೇತನ ಶ್ರೇಣಿಗಾಗಲೀ ಅಥವಾ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ.

* ಗುತ್ತಿಗೆ ಆಧಾರದ ತಾತ್ಕಾಲಿಕ ನೇಮಕಾತಿಯು ನಿರ್ದಿಷ್ಟ ಆಸ್ಪತ್ರೆಗೆ ಆಗಿರುವುದರಿಂದ ಯಾವುದೇ ಇತರೆ ಆಸ್ಪತ್ರೆಗಾಗಲೀ/ ಚಿಕಿತ್ಸಾಲಯಕ್ಕಾಗಲೀ ಅಥವಾ ಬೇರೆ ಜಿಲ್ಲೆಗೆ ವರ್ಗಾವಣೆ ಅಥವಾ ಪ್ರತಿ ನಿಯೋಜನೆ ಪಡೆಯಲು ಅವಕಾಶವಿರುವುದಿಲ್ಲ. ಅಪೂರ್ಣ ಅರ್ಜಿಗಳು ಹಾಗೂ ಅವಧಿ ಮೀರಿ ಬರುವ ಅರ್ಜಿಗಳನ್ನು ಯಾವುದೇ ಸೂಚನೆ ನೀಡದೇ ತಿರಸ್ಕರಿಸಲಾಗುವುದು. ಅರ್ಜಿದಾರರ ವಾಸಸ್ಥಳದ ಬಗ್ಗೆ ಸಂಬಂಧಿಸಿದ ನಗರಪಾಲಿಕೆ/ ತಹಶೀಲ್ದಾರ್‌ರಿಂದ ಪಡೆದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

* ಆಸಕ್ತರು https://kolar.nic.in/en/notice_category/recruitments/ ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಆಯುಷ್‌ ಅಧಿಕಾರಿಗಳು, ಜಿಲ್ಲಾ ಆಯುಷ್‌ ಕಛೇರಿ, ಎಸ್.ಎನ್.ಆರ್ ಆಸ್ಪತ್ರೆ ಆವರಣ, ಕೋಲಾರ-563101 ಇಲ್ಲಿಗೆ ಕಛೇರಿ ಅವಧಿಯಲ್ಲಿ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಕೆ ಮಾಡುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+