• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ; ಕರ್ನಾಟಕದಲ್ಲಿ 135 ಹುದ್ದೆಗೆ ಅರ್ಜಿ ಆಹ್ವಾನ

|
Google Oneindia Kannada News

ವಿಜಯಪುರ, ಅಕ್ಟೋಬರ್ 28; ವಿಜಯಪುರದಲ್ಲಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. 11/11/2021 ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ.

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ರಾಜ್ಯಾದ್ಯಂತ ಆರಂಭವಾಗಲಿರುವ ನೂತನ ಶಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು 135 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ರಾಜ್ಯದ ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ಸಿದ್ಧವಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಆಡಳಿತ ಕಚೇರಿ ವಿಜಯಪುರದ ಎಸ್. ಎಸ್.‌ ರಸ್ತೆಯಲ್ಲಿದೆ. ಬಸನಗೌಡ ರಾ. ಪಾಟೀಲ್ (ಯತ್ನಾಳ) ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾಗಿದ್ದಾರೆ. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು ಎಂದು ನೇಮಕಾತಿ ಪ್ರಕಟಣೆಯಲ್ಲಿ ಸ್ಪಷಟಪಡಿಸಲಾಗಿದೆ.

ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ?

ಹುದ್ದೆಗಳ ವಿವರ; ಸಿಬ್ಬಂದಿ ತರಬೇತಿ ಅಧಿಕಾರಿ (2), ಆಂತರಿಕ ಲೆಕ್ಕಪರಿಶೋಧಕರು (2), ಮಾನವ ಸಂಪನ್ಮೂಲ ಅಧಿಕಾರಿಗಳು (2), ಸಾಲ ಹಾಗೂ ಮುಂಗಡ ವಿಭಾಗ ಮಹಾ ಪ್ರಭಂದಕರು (2), ಮಾರಾಟ ಅಧಿಕಾರಿಗಳು (5), ಹಿರಿಯ ಅಧಿಕಾರಿಗಳು (30), ಕಿರಿಯ ಅಧಿಕಾರಿಗಳು (30), ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು (5), ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ ಮಾರ್ಕೆಟಿಂಗ್ ಆಫೀಸರ್ (5), ಸಿದ್ಧಸಿರಿ ಕೃಷಿ ಸೇವಾ ಕೇಂದ್ರ ಡೆವಲಪ್‌ಮೆಂಟ್ ಆಫೀಸರ್ (10), ಇಲೆಕ್ಟ್ರೀಶಿಯನ್ (5), ವಾಹನ ಚಾಲಕರು/ ಸಿಪಾಯಿ (30), ಭದ್ರತಾ ಸಿಬ್ಬಂದಿ (7) ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

ವೇತನ ಶ್ರೇಣಿ; ಸಿಬ್ಬಂದಿ ತರಬೇತಿ ಅಧಿಕಾರಿ (25,000), ಆಂತರಿಕ ಲೆಕ್ಕಪರಿಶೋಧಕರು (21,000), ಮಾನವ ಸಂಪನ್ಮೂಲ ಅಧಿಕಾರಿಗಳು (21,000), ಸಾಲ ಹಾಗೂ ಮುಂಗಡ ವಿಭಾಗ ಮಹಾ ಪ್ರಭಂದಕರು (25,000), ಮಾರಾಟ ಅಧಿಕಾರಿಗಳು (25,000), ಹಿರಿಯ ಅಧಿಕಾರಿಗಳು (18000 ರೂ.) ವೇತನ ನಿಗದಿ ಮಾಡಲಾಗಿದೆ.

KSLU ನೇಮಕಾತಿ 2021: 13 ಶಿಕ್ಷಕ, ಬೋಧಕ ಹುದ್ದೆಗಳಿಗೆ ನೇಮಕ KSLU ನೇಮಕಾತಿ 2021: 13 ಶಿಕ್ಷಕ, ಬೋಧಕ ಹುದ್ದೆಗಳಿಗೆ ನೇಮಕ

ಕಿರಿಯ ಅಧಿಕಾರಿಗಳು (15,000), ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು (18,000), ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ ಮಾರ್ಕೆಟಿಂಗ್ ಆಫೀಸರ್ (18,000), ಸಿದ್ಧಸಿರಿ ಕೃಷಿ ಸೇವಾ ಕೇಂದ್ರ ಡೆವಲಪ್‌ಮೆಂಟ್ ಆಫೀಸರ್ (18,000), ಇಲೆಕ್ಟ್ರೀಶಿಯನ್ (12,000), ವಾಹನ ಚಾಲಕರು/ ಸಿಪಾಯಿ (12,000), ಭದ್ರತಾ ಸಿಬ್ಬಂದಿ (12,000 ರೂ.) ವೇತನವಿದೆ.

ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು 11/11/2021 ಕೊನೆಯ ದಿನವಾಗಿದೆ. ರಾಜ್ಯದ ಯಾವುದೇ ಶಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಸ್ವವಿವರದ ಜೊತೆ ಸಂಪೂರ್ಣ ಮಾಹಿತಿ ಭಾವಚಿತ್ರ ಇರುವ ರೆಸ್ಯೂಮ್ ಕಳಿಸಬೇಕು. ಅರ್ಜಿ ಸಲ್ಲಿಸುವವರು ರೂ. 200 ಡಿಡಿಯನ್ನು Siddhasiri Souharda Sahakari Ltd. Vijayapura ಈ ಹೆಸರಿನಲ್ಲಿ ಸಂದಾಯ ಮಾಡಬೇಕು ಅಥವ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಜಮಾ ಮಾಡಿ ರಸೀದಿ ಪಡೆಯಬೇಕು

ಅರ್ಜಿಯ ಜೊತೆಗೆ ಯಾವುದೇ ಮೂಲ ದಾಖಲೆಗಳನ್ನು ಲಗತ್ತಿಸಬಾರದು. ಕೇವಲ ನಕಲು ಪ್ರತಿಗಳನ್ನು ಮಾತ್ರ ಲಗತ್ತಿಸಬೇಕು. ಅಭ್ಯರ್ಥಿಗಳು ಸಂದರ್ಶನಕ್ಕೆ ಅಗತ್ಯ ದಾಖಲಾತಿಗಳ ಜೊತೆ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.

ಅರ್ಜಿ ಕಳಿಸಬೇಕಾದ ವಿಳಾಸ; ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ, ವಿಜಯಪುರ ಆಡಳಿತ ಕಚೇರಿ, ಸಿದ್ದೇಶ್ವರ ದೇವಾಲಯ ಆವರಣ, ಸಿದ್ದೇಶ್ವರ ಮುಖ್ಯ ರಸ್ತೆ, ವಿಜಯಪುರ 586101.

ಪರೀಕ್ಷೆಗೆ ತರಬೇತಿ; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ "ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ"ದ ವತಿಯಿಂದ ಕರ್ನಾಟಕ ಸರ್ಕಾರ ನಡೆಸಲಿರುವ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ 45 ದಿನಗಳ ವಿಶೇಷ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ.

ಆಸಕ್ತರು ನವೆಂಬರ್ 6ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ 0821-2515944 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

English summary
Apply for 135 various post at Siddhasiri Souharda Sahakari Limited. Candidates can apply for officers, drivers, attenders and other post till November 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X