ಭದ್ರಾವತಿ ಆಕಾಶವಾಣಿಯಲ್ಲಿ ಕೆಲಸ ಖಾಲಿ ಇದೆ
ಶಿವಮೊಗ್ಗ, ಅಕ್ಟೋಬರ್ 15 : ಆಕಾಶವಾಣಿ ಭದ್ರವಾತಿ ಕೇಂದ್ರದಲ್ಲಿ ಯುವವಾಣಿ ಕಾರ್ಯಕ್ರಮಗಳನ್ನು ನಿರೂಪಿಸಲು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. Assignment basis ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಬೇಕಿದೆ.
ಧ್ವನಿ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರು ಮಾತ್ರ ಭದ್ರಾವತಿ ಆಕಾಶವಾಣಿ ಕೇಂದ್ರದ ಯುವವಾಣಿ ಕಾರ್ಯಕ್ರಮದ ಅವಶ್ಯಕತೆಗೆ ಅನುಗುಣವಾಗಿ ನಿಯೋಜನೆಯ ಮೇರೆಗೆ ಕೆಲಸ ಮಾಡಬೇಕು.
ಕನಿಷ್ಠ ವಿದ್ಯಾರ್ಹತೆ 18 ವರ್ಷ, ಗರಿಷ್ಠ 30 ವರ್ಷಗಳು. ಅರ್ಜಿ ಸಲ್ಲಿಸುವವರು 10+2 ಮಾದರಿಯ 12ನೇ ತರಗತಿ ಅಂದರೆ ಪಿಯುಸಿ ಉತ್ತೀರ್ಣರಾಗಿರಬೇಕು. ಭದ್ರಾವತಿ ನಗರದಲ್ಲಿ ವಾಸಿಸುತ್ತಿರುವವರಿಗೆ ಹೆಚ್ಚಿನ ಆದ್ಯತೆ.

ಕನ್ನಡ ಭಾಷೆಯ ಸ್ಪಷ್ಟ ಉಚ್ಛಾರಣೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಪರಿಜ್ಞಾನ, ದೈನಂದಿನ ಆಗುಹೋಗುಗಳ ಬಗ್ಗೆ ತಿಳುವಳಿಕೆ ಅತ್ಯವಶ್ಯ. ಇಂಗ್ಲಿಶ್ ಭಾಷಾ ಜ್ಞಾನ, ಕಂಪ್ಯೂಟರ್ ಜ್ಞಾನ ಆಕ್ಷೇಪಣಿಯ. ನಿರೂಪಣೆಗಾಗಿ ಮತ್ತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಬೇಕಾಗುವ ಸಂವಹನ ಕೌಶಲ್ಯ ಹೊಂದಿರಬೇಕು.
ಆಸಕ್ತರು ನಿಗದಿತ ಅರ್ಜಿಯನ್ನು ಆಕಾಶವಾಣಿ ಕೇಂದ್ರದಿಂದ ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದು.
ಅರ್ಜಿ ಶುಲ್ಕವಾದ 100 ರೂ., ಹಾಗೂ ಜಿಎಸ್‌ಟಿ 18 ರೂ. ಸೇರಿಸಿ ಒಟ್ಟು 118 ರೂಪಾಯಿಗಳನ್ನು ನೈಫ್ಟ್ ಮೂಲಕ ಪಾವತಿಸಬೇಕು.
ಇದು ಉದ್ಯೋಗ ನೇಮಕಾತಿ ಅಲ್ಲ. ಇದು ಕೇವಲ assigning for program presentation ಕಾರ್ಯ ಮಾತ್ರ. ಅಗತ್ಯಾನುಸಾರ ಅವಕಾಶ ಕೊಡುವ ಅಥವ ಬಿಡುವ ತೀರ್ಮಾನ ಆಕಾಶವಾಣಿಯದ್ದು.
ಭರ್ತಿ ಮಾಡಿದ ಅರ್ಜಿಗಳನ್ನು ಶುಲ್ಕ ಸಂದಾಯ ಮಾಡಿದ ದಾಖಲೆಯೊಂದಿಗೆ ಸಲ್ಲಿಸಲು 30/10/2019 ಕೊನೆಯ ದಿನ.
ಅರ್ಜಿ ಸಲ್ಲಿಸಲು ವಿಳಾಸ : ನಿಲಯ ನಿರ್ದೇಶಕರು (ಕಾರ್ಯಕ್ರಮ), ಆಕಾಶವಾಣಿ, ಜೆ. ಪಿ. ಎಸ್. ಕಾಲೋನಿ, ಭದ್ರಾವತಿ 577302












Click it and Unblock the Notifications