ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ; ಸೆ. 6ರೊಳಗೆ ಅರ್ಜಿ ಸಲ್ಲಿಸಿ
ಕಲಬುರಗಿ, ಆಗಸ್ಟ್ 18; ಅಪ್ರೆಂಟಿಸ್ ತರಬೇತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಎಸ್. ಎಸ್. ಎಲ್. ಸಿ. ಪಾಸಾದ ಅಭ್ಯರ್ಥಿಗಳಿಗೆ ಸಿಎನ್‌ಸಿ ಪ್ರೋಗ್ರಾಮರ್-ಕಂಆಪರೇಟರ್, ಮಶಿನಿಸ್ಟ್, ಎಲೆಕ್ಟ್ರಿಶಿಯನ್ ಹಾಗೂ ವೆಲ್ಡರ್ ಟ್ರೇಡ್‍ಗಳಿಗೆ ತರಬೇತಿ ನೀಡಲಾಗುತ್ತಿದೆ.
ಎಸ್. ಎಸ್. ಎಲ್. ಸಿ. ಯಲ್ಲಿ ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳು ಶೇ. 60 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಅಂಗವಿಕಲ ಅಭ್ಯರ್ಥಿಗಳು ಶೇ. 50 ಅಂಕಗಳನ್ನು ಪಡೆದಿರಬೇಕು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ವಯೋಮಿತಿ 15 ರಿಂದ 18 ವರ್ಷಗಳು. ಬಿಪಿಎಲ್/ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ ಅಭ್ಯರ್ಥಿಗಳು ಅಪ್ರೆಂಟಿಸ್ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಹ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಲು ಸೆಪ್ಟೆಂಬರ್ 6 ಕೊನೆಯ ದಿನವಾಗಿದೆ.
ಅರ್ಜಿಯೊಂದಿಗೆ ಎಸ್. ಎಸ್. ಎಲ್. ಸಿ ಪಾಸಾದ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಮೀಸಲಾತಿ ಬಯಸಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಅಂಗವಿಕಲ, ಬಿಪಿಎಲ್/ ಅಂತ್ಯೋದಯ ರೇಷನ್ ಕಾರ್ಡ್, ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ; ಜಿಲ್ಲಾಉದ್ಯೋಗ ವಿನಿಮಯ ಕಚೇರಿ, ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ, ಕಲಬುರಗಿ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು 08472-274846 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಹಾಕಿ; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿ ಚಕ್ಕೋಡುಬೈಲು, ಘಂಟೆಜನಗಲ್ (ಮಿನಿ), ಹಿರೆಕಲ್ಲಳ್ಳಿ (ಮಿನಿ), ಬಿಜ್ಜಳ (ಮಿನಿ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಮಿಟ್ಲಗೋಡು, ಬಸವಾನಿ, ತೊರೆಬೈಲು, ಕರಡಿಗ, ಕೋಡ್ಲು, ಕೋಣಂದೂರು-2, ಕೋಳಿಗೆ-1, ಮಲ್ಲೇಸರ, ಶಿರಗಣಿ, ಬೊಬ್ಬಿಹಿಂಚುವಳ್ಳಿ, ಮುತ್ತುವಳ್ಳಿ, ತೂದೂರು-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು www.anganwadirecruit.kar.nic.in ವೆಬ್‌ಸೈಟ್ ಮೂಲಕ ಸಲ್ಲಿಕೆ ಮಾಡಲು ಸೆಪ್ಟಂಬರ್ 16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08181-295940ಗೆ ಕರೆ ಮಾಡಬಹುದಾಗಿದೆ. ನ್ನು ಸಂಪರ್ಕಿಸುವುದು.
ಭದ್ರಾವತಿಯಲ್ಲಿ ಕೆಲಸ ಖಾಲಿ ಇದೆ; ಭದ್ರಾವತಿ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ 2 ಅಂಗನವಾಡಿ ಕಾರ್ಯಕರ್ತೆಯರು ಮತ್ತು 16 ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಹನುಮಂತಾಪುರ ಗ್ರಾಮ ಪಂಚಾಯತ್‌ನ ಕರಡಿ ಕ್ಯಾಂಪ್ ಮೀಸಲಾತಿ ಪ.ಜಾತಿ ಮತ್ತು ಕಾಗೆಕೋಡಮಗ್ಗೆ ಗ್ರಾಮ ಪಂಚಾಯತ್‌ನ ಬಾಬಳ್ಳಿ ಮುಸ್ಲಿಂ ಕ್ಯಾಂಪ್ ಮಿನಿ ಮೀಸಲಾತಿ ಇತರೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳು ಬಿಳಕಿ ಪ.ಜಾ, ಬಾರಂದೂರು ಇತರೆ, ಕೂಡ್ಲಿಗೆರೆ ಪ.ಜಾ, ಕಂಬದಾಳ್ ಹೊಸೂರು(ಸಿದ್ದರಹಳ್ಳಿ) ಪ.ಜಾ, ಕಂಬದಾಳ್ ಹೊಸೂರು(ತಮ್ಮಡಿಹಳ್ಳಿ) ಇತರೆ, ಕೊಮಾರನಹಳ್ಳಿ ಸಂಜೀವ್‍ನಗರ ಪ.ಜಾ, ನಿಂಬೆಗೊಂದಿ ಪ.ಜಾ, ಮಾರಶೆಟ್ಟಿಹಳ್ಳಿ ಇತರೆ, ಯಡೇಹಳ್ಳಿ ಇತರೆ, ಎರೇಹಳ್ಳಿ(ಎರೇಹಳ್ಳಿ) ಇತರೆ, ಎರೇಹಳ್ಳಿ(ಕೊರಲಕೊಪ್ಪ)ಇತರೆ, ವಾರ್ಡ್ ಸಂಖ್ಯೆ-2, 17 ಮತ್ತು ವಾರ್ಡ್ ಸಂಖ್ಯೆ 18 ಇತರೆ, ವಾರ್ಡ್ ಸಂಖ್ಯೆ -30 ಪ.ಜಾ, ವಾರ್ಡ್ ಸಂಖ್ಯೆ-32. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.












Click it and Unblock the Notifications