ಮಾಸಿಕ ₹1,42,400 ವೇತನದ ಹುದ್ದೆಗೆ ಅರ್ಜಿ ಆಹ್ವಾನ
Income Tax Department Recruitment 2025: ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಆದಾಯ ತೆರಿಗೆ ಇಲಾಖೆಯು ಖಾಲಿಯಿರುವ 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಅಂಶಗಳು ಹಾಗೂ ಮಾಸಿಕ ವೇತನ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯಡಿ ಬರುವ ಆದಾಯ ತೆರಿಗೆ ಇಲಾಖೆಯು ಹೊಸ ಉದ್ಯೋಗಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇಲಾಖೆಯಲ್ಲಿ ಖಾಲಿ ಇರುವಂತ ಡೇಟಾ ಸಂಸ್ಕರಣ ಸಹಾಯಕ ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.

ಆದಾಯ ತೆರಿಗೆ ಇಲಾಖೆಯು ನವದೆಹಲಿ, ಲಕ್ನೋ, ಕಾನ್ಪುರ, ಚಂಡೀಗಢ, ಕೋಲ್ಕತ್ತಾ, ಹೈದರಾಬಾದ್ ಮತ್ತು ಚೆನ್ನೈ ನಗರದಲ್ಲಿನ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ 8 ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಆಯ್ಕೆಯಾದವರನ್ನು ಜನರಲ್ ಸೆಂಟ್ರಲ್ ಸರ್ವಿಸಸ್ ಗ್ರೂಪ್-ಬಿ ಗೆಜೆಟೆಡ್, ನಾನ್ ಮಿನಿಸ್ಟ್ರೀಯಲ್ ಕೇಡರ್‌ನ ಭಾಗ ಆಗಿರುತ್ತಾರೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಹುದ್ದೆಯ ಅವಕಾಶವಿದೆ. ಬೇರೆಯವರಿಗೆ ಇವು ಅನ್ವಯ ಆಗುವುದಿಲ್ಲ. ಆಯ್ಕೆ ಆದವರಿಗೆ ಮಾಸಿಕ 44,900-1,42,400 ರೂಪಾಯಿ ವೇತನ ನೀಡಲಾಗುತ್ತದೆ. ಜನವರಿ 6ರಂದೇ ಈ ಉದ್ಯೋಗದ ನೋಟಿಫಿಕೆಶನ್ ಪ್ರಕಟಿಸಿದ್ದು, ಫೆಬ್ರುವರಿ 5ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿದೆ. incometaxindia.gov.in ವೆಬ್‌ಸೈಟ್.
ವಿದ್ಯಾರ್ಹತೆ ವಿವರ: ಕಂಪ್ಯೂಟರ್ ಅಪ್ಲಿಕೇಶನ್‌ಗಳು/ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಎಂಟೆಕ್ ಬಿಇ/ಬಿಟೆಕ್ ಕಂಪ್ಯೂಟರ್ ಇಂಜಿನಿಯರ್/ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಟೆಕ್ನಾಲಜಿ, 2 ವರ್ಷಗಳ ಕೆಲಸದ ಅನುಭವ ಇರಬೇಕಾಗುತ್ತದೆ.
56 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಪ್ರತಿ ಡೌನ್ಲೋಡ್ ಮಾಡಿಕೊಳ್ಳಿ. ಅರ್ಜಿ ಭರ್ತಿ ಮಾಡಿ ಕೇಳಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಈ ವಿಳಾಸಕ್ಕೆ ಕಳುಹಿಸಿಕೊಡಿ.
Directorate of Income Tax (Systems),
Central Board of Direct Taxes,
Ground Floor, E2, ARA Center,
Jhandewalan Ext., New Delhi- 110055
ಹೆಚ್ಚಿನ ಮಾಹಿತಿಗಾಗಿ https://incometaxindia.gov.in/Lists/Recruitment%20Notices/Attachments/126/cbdt-DPA-B-advertisement-on-website-v1.pdf ಭೇಟಿ ನೀಡಬಹುದಾಗಿದೆ.












Click it and Unblock the Notifications