ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು, ಅಕ್ಟೋಬರ್ 20: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ, ಸುರತ್ಕಲ್‌ನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1) ಹುದ್ದೆಗಳಿಗೆ ನೇಮಕಾತಿ ಹೊರಡಿಸಿದೆ.

ಬಿಇ, ಬಿ.ಟೆಕ್, ಎಂಬಿಎ, ಎಂ.ಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 23 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 05, 2021ರಿಂದ ನವೆಂಬರ್ 10, 2021ರವರೆಗೆ ಆನ್​ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಮಾಹಿತಿಇಲ್ಲಿದೆ.

Mangaluru: Applications Are Invited For The Posts Of Assistant Professor In National Institute Of Technology

ಸಂಸ್ಥೆ: ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ- ಕರ್ನಾಟಕ, ಸುರತ್ಕಲ್
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್​-1)
ಒಟ್ಟು ಹುದ್ದೆಗಳು: 23
ವಿದ್ಯಾರ್ಹತೆ: ಬಿಇ, ಬಿ.ಟೆಕ್, ಎಂಬಿಎ, ಎಂಟೆಕ್, ಎಂಇ, ಪಿಎಚ್​ಡಿ
ಕೆಲಸದ ಸ್ಥಳ: ಸುರತ್ಕಲ್, ಮಂಗಳೂರು
ಅರ್ಜಿ ಸಲ್ಲಿಸುವುದು: ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/11/2021
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್ 3, 2021
ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 5, 2021

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಪ್ರಕ್ರಿಯೆ ಶುಲ್ಕವಾಗಿ 100 ರೂ. ಇರುತ್ತದೆ. (ಹಿಂದಿರುಗಿಸಲಾಗುವುದಿಲ್ಲ)

ವಿದ್ಯಾರ್ಹತೆ
ಹೊಸದಾಗಿ ಪ್ರವೇಶ ಪಡೆದವರೆಲ್ಲೂ ಪಿಎಚ್​ಡಿ ಹೊಂದಿರಬೇಕು. ಸಂಬಂಧಿತ/ ತತ್ಸಮಾನ ವಿಭಾಗದಲ್ಲಿ ಮತ್ತು ಹಿಂದಿನ ಪದವಿಗಳಲ್ಲಿ ಪ್ರಥಮ ದರ್ಜೆಯನ್ನು ಹೊಂದಿರಬೇಕು.

ಮೂಲ ಪದವಿಗಳು :
ಇಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಾಪಕ ಹುದ್ದೆಗಳಿಗೆ: B.E./ B.Tech. ಅಥವಾ ಯಾವುದೇ ಸಮಾನ ಪದವಿ ಮತ್ತು M.E./ M.Tech ಅಥವಾ ಸಂಬಂಧಿತ ವಿಭಾಗದಲ್ಲಿ ಯಾವುದೇ ಸಮಾನ ಪದವಿ ಪಡೆದಿರಬೇಕು. ಬಿಇ/ ಬಿಟೆಕ್ ನಂತರ ನೇರವಾಗಿ ಪಿಎಚ್‌ಡಿ ಪದವಿ ಪಡೆದಿರಬೇಕು. ಇತರ ಮಾನದಂಡಗಳನ್ನು ಪೂರೈಸಿದರೆ ಪ್ರತಿಷ್ಠಿತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಿಂದ ಪರಿಗಣಿಸಲಾಗುತ್ತದೆ.

ಗಣಿತದಲ್ಲಿ ಅಧ್ಯಾಪಕ ಹುದ್ದೆಗಳಿಗೆ: ಸಂಬಂಧಿತ ವಿಭಾಗದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.

ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಾಪಕ ಹುದ್ದೆಗಳಿಗೆ: ಸಂಬಂಧಿತ ವಿಭಾಗದಲ್ಲಿ ಎಂ.ಎ/ ಎಂ.ಎಸ್ಸಿ/ ಎಂ.ಕಾಂ/ ಎಂಬಿಎ/ ಎಂ.ಟೆಕ್ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ
ಶಾರ್ಟ್​ ಲಿಸ್ಟಿಂಗ್, ದಾಖಲಾತಿ ಪರಿಶೀಲನೆ, ಆನ್​ಲೈನ್ ಸಂದರ್ಶನ

NIT ಕರ್ನಾಟಕದ ನೇಮಕಾತಿ ಅನುಸಾರ ಸಹಾಯಕ ಪ್ರಾಧ್ಯಾಪಕ-ಗ್ರೇಡ್​ 1 ಮತ್ತು 2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಕ್ಟೋಬರ್ 5ರಿಂದ ನವೆಂಬರ್ 10ರವರೆಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಈ ಕೆಳಕಂಡ ಹಂತಗಳನ್ನು ಅನುಸರಿಸಿ.

ಮೊದಲಿಗೆ NIT ಕರ್ನಾಟಕದ ಅಧಿಕೃತ ವೆಬ್​ಸೈಟ್​ www.nitk.ac.in ಗೆ ಭೇಟಿ ನೀಡಬೇಕು. ಅಲ್ಲಿ ಕಾಣ ಸಿಗುವ "Recruitment/ Career/ Advertisement menu" ಲಿಂಕ್ ಮೇಲೆ ಕ್ಲಿಕ್ ಮಾಡಿ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1) ಹುದ್ದೆಗಳ ನೋಟಿಫಿಕೇಶನ್​ನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ.

ಅಧಿಕೃತ ನೋಟಿಫಿಕೇಶನ್​ನ ಲಿಂಕ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ. ನೋಟಿಫಿಕೇಶನ್​ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ. ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+