High Court Recruitment: ಹೈಕೋರ್ಟ್‌ನಲ್ಲಿ ಭರ್ಜರಿ 3,300 ಖಾಲಿ ಹುದ್ದೆಗಳ ನೇಮಕಾತಿ, ವಿವರ
ಬಹುನಿರೀಕ್ಷೆಯ ವಿವಿಧ ಹೈಕೋರ್ಟ್ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹರಿಂದ ಇತ್ತೀಚೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಯಾರೆಲ್ಲ ಅರ್ಜಿ ಸಲ್ಲಿಸಿ ನೇಮಕಾತಿಗೆ ಕಾಯುತ್ತಿದ್ದಾರೋ ಅವರಿಗೆಲ್ಲ ಸಿಹಿ ಸುದ್ದಿ ಸಿಕ್ಕಿದೆ. ನೇಮಕಾತಿ ಪ್ರಕ್ರಿಯೆ ಮುಂದುವರಿದ ಭಾಗವಾಗಿ ಹೈಕೋರ್ಟ್ ಪರೀಕ್ಷೆ ದಿನಾಂಕಗಳನ್ನು ಪ್ರಕಟಿಸಿದೆ. ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಪರಿಶೀಲಿಸಬಹುದು. ವೇಳಾಪಟ್ಟಿಗೆ ಅಧಿಸೂಚನೆ ಓದಿಕೊಳ್ಳಬಹುದು. ವೇಳಾಪಟ್ಟಿ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿಯೇ 2025 ಜನವರಿ 4 ಮತ್ತು 5ರಂದು ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಲಾಗಿದೆ.

ವೇಳಾಪಟ್ಟಿ ಪರಿಶೀಲನೆ ಹೇಗೆ?
ಅರ್ಜಿ ಸಲ್ಲಿಸಿ ಪರೀಕ್ಷೆ ಎದುರು ನೋಡುತ್ತಿರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ, ವೇಳಾಪಟ್ಟಿಗಾಗಿ ನೀವು ಮೊದಲ ಇಲ್ಲಿ ನೀಡಲಾಗಿರುವ https://exams.nta.ac.in/AHCRE/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
* ಲಿಂಕ್ ಓಪನ್ ಆದ ಬಳಿಕ ಮುಖಪುಟದಲ್ಲಿ ಲಭ್ಯವಿರುವ ಹೈಕೋರ್ಟ್ ನೋಟಿಫೀಕೇಷನ್ ಲಿಂಕ್ ಆಯ್ಕೆ ಮಾಡಿಕೊಳ್ಳಿ.
* ಅಧಿಸೂಚನೆ ಪ್ರದರ್ಶಿಸುವ ಹೊಸ ಪರೆದೆ ತೆರೆಯುತ್ತದೆ.
* ಅದನ್ನು ನೀವು ಭವಿಷ್ಯದ ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಇದೇ ಲಿಂಕ್‌ನಲ್ಲಿ ಪರೀಕ್ಷಾ ವೇಳಾಪಟ್ಟಿ ಸಹ ಆ ಲಿಂಕ್ ಆಯ್ಕೆ ಮಾಡಿಕೊಂಡು ನೋಡಬಹುದು.
* ಪರೀಕ್ಷಾ ಕೇಂದ್ರದ ಮಾಹಿತಿ, ಸಮಯ, ನೋಂದಣಿ ಸಂಖ್ಯೆ, ದಿನಾಂಕ ನೆನಪಲ್ಲಿಟ್ಟುಕೊಳ್ಳಬೇಕು.
* ಪರೀಕ್ಷೆ ವೇಳಾಪಟ್ಟಿಗೆ ತಕ್ಕಂತೆ ಅರ್ಜಿದಾರರು ಅಭ್ಯಾಸ ಪ್ಲಾನ್ ಮಾಡಿಕೊಳ್ಳಬೇಕು.
ನೇಮಕಾತಿ ಪರೀಕ್ಷೆ ವೇಳಾಪಟ್ಟಿ ಮಾಹಿತಿ
* ಪರೀಕ್ಷೆ: ಚಾಲಕ ಗ್ರೇಡ್ IV ಹುದ್ದೆ
ದಿನಾಂಕ: 04 ಜನವರಿ 2025
ಸಮಯ: ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆ
* ಪರೀಕ್ಷೆ: ಗುಂಪು ಸಿ (ಕ್ಲೇರಿಕಲ್ ಕೇಡರ್)
ದಿನಾಂಕ: 04 ಜನವರಿ 2025
ಸಮಯ: ಮಧ್ಯಾಹ್ನ 3 ರಿಂದ 4.30
* ಪರೀಕ್ಷೆ: ಸ್ಟೆನೋಗ್ರಾಫರ್ ಗ್ರೇಡ್-III
ದಿನಾಂಕ: 05 ಜನವರಿ 2025
ಸಮಯ: ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆವರೆಗೆ
* ಪರೀಕ್ಷೆ: ಗ್ರೂಪ್ ಡಿ ಹುದ್ದೆಗಳಿಗೆ
ದಿನಾಂಕ: 05 ಜನವರಿ 2025
ಸಮಯ: ಮಧ್ಯಾಹ್ನ 3 ರಿಂದ 4.30 ಗಂಟೆವರೆಗೆ












Click it and Unblock the Notifications