ಬೆಂಗಳೂರಿನಲ್ಲಿ 13,000 ಐಟಿ ಉದ್ಯೋಗಿಗಳ ನೇಮಕಾತಿ
ಯುರೋಪಿಯನ್ ಏರೋಸ್ಪೇಸ್ ಕಂಪೆನಿ ಏರ್‌ಬಸ್ ಎಂಜಿನಿಯರಿಂಗ್ ಮತ್ತು ಪ್ರತಿಭಾವಂತ ಐಟಿ ನೌಕರರನ್ನು ನೇಮಿಸಿಕೊಳ್ಳಲು ಈ ತಿಂಗಳು ಬೆಂಗಳೂರಿನ ಏರೋ ಇಂಡಿಯಾದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದೆ.
ಬೆಂಗಳೂರು, ಫೆಬ್ರವರಿ 8: ಏರೋ ಇಂಡಿಯಾ 2023 ಫೆಬ್ರವರಿ 13ರಿಂದ 17ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ.
ಯುರೋಪಿಯನ್ ಏರೋಸ್ಪೇಸ್ ಕಂಪೆನಿ ಏರ್‌ಬಸ್ ಎಂಜಿನಿಯರಿಂಗ್ ಮತ್ತು ಪ್ರತಿಭಾವಂತ ಐಟಿ ನೌಕರರನ್ನು ನೇಮಿಸಿಕೊಳ್ಳಲು ಈ ತಿಂಗಳು ಬೆಂಗಳೂರಿನ ಏರೋ ಇಂಡಿಯಾದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದೆ. ಈ ವರ್ಷದ ಕೈಗಾರಿಕಾ ವರ್ಷದಲ್ಲಿ ಏರ್‌ಬಸ್ ಕಂಪನಿಯು ಜಾಗತಿಕವಾಗಿ 13,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಹೊಸ ನೇಮಕಾತಿಯಿಂದ ಜಾಗತಿಕ ಏರೋಸ್ಪೇಸ್ ಸಂಸ್ಥೆ ಏರ್‌ಬಸ್‌ನ ಮಹತ್ವಾಕಾಂಕ್ಷೆಯ ಡಿಕಾರ್ಬನೈಸೇಶನ್ ಮಾರ್ಗಸೂಚಿ ಮತ್ತು ವಾಯುಯಾನದ ಭವಿಷ್ಯದ ಸಿದ್ಧತೆಗಳನ್ನು ಬೆಂಬಲಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಏರ್‌ಫ್ರೇಮ್ ವಿನ್ಯಾಸ, ಏವಿಯಾನಿಕ್ಸ್, ಏವಿಯೇಷನ್ ಸಿಸ್ಟಮ್ಸ್ ಸಿಮ್ಯುಲೇಶನ್, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ ಮತ್ತು ಕ್ಯಾಬಿನ್ ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹಾಲ್ ಸಿ ನಲ್ಲಿರುವ ಬೂತ್ ಸಿಆರ್7.1ನಲ್ಲಿ ಏರ್‌ಬಸ್ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಹೇಳಿದೆ.

ಭಾಗವಹಿಸುವವರು ಉನ್ನತ ಶ್ರೇಣಿಯ ಏರ್‌ಬಸ್ ಪ್ರತಿನಿಧಿಗಳ ಪ್ರಶ್ನೆಗಳನ್ನು ಕೇಳಲು ಮತ್ತು ಭಾರತ ಮತ್ತು ದಕ್ಷಿಣ ಏಷ್ಯಾದ ಉಳಿದ ಭಾಗಗಳಲ್ಲಿ ಕಂಪನಿಯ ಇರುವಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ. ಏರೋಸ್ಪೇಸ್‌ನ ಉತ್ಸಾಹದೊಂದಿಗೆ ಭಾರತದ ಅತ್ಯುತ್ತಮ ಇಂಜಿನಿಯರಿಂಗ್ ಮತ್ತು ಮಾಹಿತಿ ನಿರ್ವಹಣಾ ಪ್ರತಿಭೆಗಳಿಗೆ ಏರ್‌ಬಸ್ ಅತ್ಯುತ್ತಮ ತಾಣವಾಗಿದೆ ಎಂದು ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮಾನವ ಸಂಪನ್ಮೂಲ ನಿರ್ದೇಶಕ ಸೂರಜ್ ಚೆಟ್ರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏರ್‌ಬಸ್ ತನ್ನ ವಾಣಿಜ್ಯ, ರೋಟರ್‌ಕ್ರಾಫ್ಟ್, ರಕ್ಷಣಾ ಮತ್ತು ಬಾಹ್ಯಾಕಾಶ ಮತ್ತು ಇತರ ನವೀನ ಉತ್ಪನ್ನಗಳು, ತಂತ್ರಜ್ಞಾನಗಳು, ಸೇವೆಗಳು ಮತ್ತು ನಾವೀನ್ಯತೆಗಳನ್ನು ತನ್ನ ಬೂತ್‌ನಲ್ಲಿ ಪ್ರದರ್ಶಿಸುತ್ತದೆ. ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ವೆಬ್‌ಸೈಟ್ ಪ್ರಕಾರ, 731 ಪ್ರದರ್ಶಕರು (633 ದೇಶೀಯ ಮತ್ತು 98 ವಿದೇಶಿ) ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಎಕ್ಸ್‌ಪೋ ಜೊತೆಗೆ ಐದು ದಿನಗಳ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯು ಪ್ರದರ್ಶನವನ್ನು ನೀಡಲಿದೆ. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ನಾಯಕರು, ಪ್ರಮುಖ ಏರೋಸ್ಪೇಸ್ ಹೂಡಿಕೆದಾರರು ಮತ್ತು ಮಹತ್ವದ ಚಿಂತಕರನ್ನು ಒಳಗೊಂಡಿರುತ್ತದೆ.











Click it and Unblock the Notifications