7th Pay Commission: ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ, ಶಿಫಾರಸುಗಳು

ಬೆಂಗಳೂರು, ಆಗಸ್ಟ್ 11: ಕರ್ನಾಟಕ ಸರ್ಕಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದೆ. ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ಖಾಲಿ ಹುದ್ದೆಗಳ ಭರ್ತಿ, ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಸೇರಿದಂತೆ ಹಲವು ಶಿಫಾರಸುಗಳನ್ನು ಆಯೋಗ ವರದಿಯಲ್ಲಿ ತಿಳಿಸಿದೆ. ಸರ್ಕಾರ ತನ್ನ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಕೆಲವು ಶಿಫಾರಸುಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸುತ್ತಿದೆ.

ಮಾರ್ಚ್‌ 16ರಂದು ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿದ ಕೆ. ಸುಧಾಕರ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಕುರಿತು ಕೆಲವು ಶಿಫಾರಸು ಮಾಡಿದೆ. ಅಲ್ಲದೇ ಸರ್ಕಾರಿ ನೌಕರಿಯಲ್ಲಿ ಲಿಂಗ ಸಮಾನತೆ ಬಗ್ಗೆ ವಿವರಣೆಯನ್ನು ಕೊಟ್ಟಿದೆ.

7th Pay Commission Recommendations On Women Recruitment Reservation

ಆಯೋಗ ಹುದ್ದೆಗಳನ್ನು ಸೃಜಿಸುವ ವಿಷಯದಲ್ಲಿ ಯಾವುದೇ ಸುವ್ಯವಸ್ಥಿತ ವಿಧಾನ ಅಥವಾ ನೀತಿಯು ಇರುವುದಿಲ್ಲವೆಂಬ ಅಂಶವನ್ನು ಗಮನಿಸಿದೆ. ಇದನ್ನು ಸರಳೀಕರಣಗೊಳಿಸುವ ನಿರ್ದಿಷ್ಟ ಅವಶ್ಯಕತೆಯಿದೆ. ಆಯಾ ಇಲಾಖೆಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿ ಕಾರ್ಯಬಲವನ್ನು ನಿರ್ಧರಿಸಲು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿನ ಸಿಬ್ಬಂದಿ ಸಂಖ್ಯಾಬಲವನ್ನು ಪುನರ್ ವಿಮರ್ಶೆ ಮಾಡಬೇಕೆಂದು ಮತ್ತು ಆಡಳಿತಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ಕಾರ್ಯವಿಧಾನಗಳು, ಅಗತ್ಯ ಮಾನವ ಸಂಪನ್ಮೂಲಗಳ ಮೇಲೆ ಬೀರಬಹುದಾದ ಪ್ರಭಾವವನ್ನು ಸಹ ಪರಿಗಣಿಸುವಂತೆ 6ನೇ ರಾಜ್ಯ ವೇತನ ಆಯೋಗ ಶಿಫಾರಸ್ಸು ಮಾಡಿರುವುದನ್ನು ಈ ಆಯೋಗ ಪುನರುಚ್ಚರಿಸಿದೆ.

ಮಹಿಳಾ ಮೀಸಲಾತಿ ಶಿಫಾರಸುಗಳು: 7ನೇ ವೇತನ ಆಯೋಗದ ವರದಿ ಪ್ರಕಾರ ರಾಜ್ಯ ಸರ್ಕಾರದಲ್ಲಿ ದಿನಾಂಕ 01.10.2023 ರಲ್ಲಿದ್ದಂತೆ ಒಟ್ಟು 1,84,688 ಮಹಿಳಾ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಶೇ.34 ರಿಂದ ಶೇ.35ಕ್ಕೆ ಏರಿಕೆಯಾಗಿದ್ದು, ಇದು ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ ಪುಕಾರ ನೇರ ನೇಮಕಾತಿಯಲ್ಲಿ ಮಹಿಳೆಯರಿಗಾಗಿ ಮೀಸಲಿಡಿಸಲಾದ ಶೇ.33 ರಷ್ಟಕ್ಕಿಂತ ತುಸು ಹೆಚ್ಚಾಗಿದೆ.

2018 ರಿಂದ 2022ರ ನಡುವೆ ಮಹಿಳಾ ಪ್ರಾತಿನಿಧ್ಯವು ಪವರ್ಗ 'ಎ' ದಲ್ಲಿ ಶೇ.25 ರಿಂದ ಶೇ.31 ರಷ್ಟು, ಪವರ್ಗ 'ಬಿ' ಯಲ್ಲಿ ಶೇ.27 ರಿಂದ ಶೇ.30 ಮತ್ತು ಪವರ್ಗ 'ಡಿ' ಯಲ್ಲಿ ಶೇ.34 ರಿಂದ ಶೇ.39 ರಷ್ಟು ಏರಿಕೆಯಾಗಿದ್ದು ಪವರ್ಗ 'ಸಿ; ಯಲ್ಲಿ ಶೇ.35 ರಷ್ಟರಲ್ಲಿಯೇ ಮುಂದುವರೆದಿದೆ ಎಂದು ಹೇಳಿದೆ. 2022 ರ ಅವಧಿಯಲ್ಲಿ ಮಹಿಳಾ ಪ್ರಾತಿನಿಧ್ಯವು 39 ಇಲಾಖೆಗಳಲ್ಲಿ ಶೇ.33 ಕ್ಕಿಂತ ಹೆಚ್ಚಿದ್ದು, 35 ಇಲಾಖೆಗಳಲ್ಲಿ ಶೇ.20 ರಿಂದ ಶೇ.32 ರ ನಡುವಿನಲ್ಲಿದ್ದು, ಮತ್ತು ಇತರೆ ಇಲಾಖೆಗಳಲ್ಲಿ ಶೇ.20 ಕ್ಕಿಂತ ಕಡಿಮೆಯಿತ್ತು ಎಂದು ಸಹ ತಿಳಿಸಿದೆ.

ಕೆಲವು ಇಲಾಖೆಗಳು ನೇರ ನೇಮಕಾತಿಯಲ್ಲಿ ಕೆಲವು ನಿರ್ದಿಷ್ಟ ಅವಕಾಶಗಳನ್ನು ಮಾಡಿಕೊಂಡಿರುತ್ತವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗಾಗಿ ಶೇ.50 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ ಎಂದು ಉದಾಹರಿಸಬಹುದಾಗಿದೆ. ಇದರ ಪರಿಣಾಮವಾಗಿ ಒಟ್ಟು 1,44,266 ಶಿಕ್ಷಕರ ಪೈಕಿ 71,537 ಶಿಕ್ಷಕಿಯರಿರುತ್ತಾರೆ.

ಪೊಲೀಸ್ ಇಲಾಖೆಯು ಪೊಲೀಸ್ ಪೇದೆಗಳ ನೇಮಕಾತಿಯಲ್ಲಿ ಶೇ.20 ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸಿದ್ದು, 75,447 ಕಾರ್ಯನಿರತ ಪೋಲೀಸ್ ಪೇದೆಗಳ ಪೈಕಿ 8,002 ರಷ್ಟು ಮಹಿಳಾ ಪೇದೆಗಳಿದ್ದಾರೆ.

ಪ್ರಸ್ತುತ, ಯಾವ ಇಲಾಖೆಯಲ್ಲಿ, ಯಾವ ವೃಂದದಲ್ಲಿ ಮಹಿಳಾ ನೌಕರರ ಪ್ರಾತಿನಿಧ್ಯವು ಕಡಿಮೆಯಿರುತ್ತದೆಯೋ ಅಂತಹಃ ಪಕರಣಗಳಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯತೆಯನ್ನು ಖಚಿತಪಡಿಸಲು ಗಂಭೀರ ಪ್ರಯತ್ನಗಳನ್ನು ಇಲಾಖೆಗಳು ಕೈಗೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದೆ.

ಈ ಸಂಬಂಧ, 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಪೊಲೀಸ್ ಪೇದೆ ವೃಂದದ ನೇಮಕಾತಿಯಲ್ಲಿ ಹಾಲಿ ಇರುವ ಮಹಿಳೆಯರ ಮೀಸಲಾತಿಯನ್ನು ಶೇ.20 ರಿಂದ ಶೇ.30 ಕ್ಕೆ ಹೆಚ್ಚಿಸಲು ಮಾಡಿರುವ ಶಿಫಾರಸ್ಸನ್ನು ಆಯೋಗವು ಸಹ ಸಹಮತಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+