Job: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಕೆಲಸ ಹುಡುಕುವುದು ಸುಲಭ!
Easy job search tips: ಕೆಲಸ ಹುಡುಕುವುದು ಈಗೆಲ್ಲ ತುಂಬಾ ಸುಲಭ. ಉದ್ಯೋಗ ಹುಡುಕುವುದಕ್ಕೆ ಹಲವು ಆಯ್ಕೆಗಳಿವೆ. ಕೆಲಸ ಹುಡುಕುವುದಕ್ಕೆ ಅನುಕೂಲವಾಗುವ ಹಾಗೂ ಕೆಲಸ ಹುಡುಕುವುದನ್ನು ಸುಲಭ ಮಾಡುವುದಕ್ಕೆ ಇಲ್ಲಿ ಕೆಲವೊಂದು ಪ್ರಮುಖ ಹಾಗೂ ಸರಳ ಸೂತ್ರಗಳಿವೆ. ಈ ಸೂತ್ರಗಳನ್ನು ಅಳವಡಿಸಿಕೊಂಡರೆ ನೀವು ಸುಲಭವಾಗಿ ಕೆಲಸ ಹುಡುಕಬಹುದು. ಆ ಐದು ಸಿಂಪಲ್ ಟಿಪ್ಸ್ ವಿವರ ಇಲ್ಲಿದೆ. ಈಗ ಕೆಲಸ ಸಿಗುವಷ್ಟೇ ಕೆಲಸ ಹುಡುಕುವುದು ಸಹ ಸವಾಲಾಗಿದೆ. ದಿನದಿಂದ ದಿನಕ್ಕೆ ಕಾಂಪಿಟೇಷನ್ ಹೆಚ್ಚಾಗುತ್ತಿದ್ದು, ಕೆಲಸ ಹುಡುಕುವುದು ಬಿಗ್ ಟಾಸ್ಕ್ ಎನ್ನುವಂತೆ ಆಗಿದೆ. ಆದರೆ ನೀವು ಕೆಲವೊಂದು ಸಿಂಪಲ್ ಸೂತ್ರಗಳನ್ನು ಫಾಲೋ ಮಾಡುವುದರಿಂದ ಅತ್ಯಂತ ಸುಲಭವಾಗಿ ಕೆಲಸ ಹುಡುಕಿಕೊಳ್ಳಬಹುದಾಗಿದೆ. ಅದರ ವಿವರ ನೋಡೋಣ...
ನಿಮ್ಮ ರೆಸ್ಯೂಮ್ ಮತ್ತು ಕವರ್ ಲೆಟರ್ ಅಪ್‌ಡೇಟ್ ಮಾಡಿ: ಕೆಲಸ ಹುಡುಕುವಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ರೆಸ್ಯೂಮ್ ಹಾಗೂ ಕವರ್ ಲೆಟರ್ ಅನ್ನು ಅಪ್‌ಡೇಟ್ ಮಾಡಿಟ್ಟುಕೊಳ್ಳಿ. ನಿಮ್ಮ ವೃತ್ತಿ ಜೀವನದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳನ್ನು ಅದರಲ್ಲಿ ಸೇರಿಸಿ. ಫೋಟೋ ಬದಲಾಯಿಸುವುದು. ಕೆಲಸ ಹುಡುಕಲು ಶುರು ಮಾಡುತ್ತೀರಿ ಎನ್ನುವಾಗಲೇ ಇದನ್ನು ಮೊದಲು ಮಾಡಿ ಆ ಮೇಲೆ ಕೆಲಸ ಖಾಲಿ ಇರುವ ಕಡೆ ಅರ್ಜಿಗಳನ್ನು ಸಲ್ಲಿಸುವುದಕ್ಕೆ ಪ್ರಾರಂಭಿಸಿ. ಕೆಲಸ ಖಾಲಿ ಇದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಅರ್ಜಿ ಹಾಕುವುದಕ್ಕೆ ರೆಸ್ಯೂಮ್ ರೆಡಿ ಇರುವುದು ಅವಶ್ಯಕವಾಗಿದೆ.

ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗಿರಿ: ಈಗ ಪ್ರಮುಖ ವಿಷಯಗಳು ತಿಳಿಯುವುದೇ ಮೊದಲು ಆನ್‌ಲೈನ್‌ನ ಮೂಲಕ. ಹೀಗಾಗಿ ನೀವು ಆನ್‌ಲೈನ್‌ನಲ್ಲಿ ಅಲರ್ಟ್ ಆಗಿರಬೇಕು. ಅಂದರೆ ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಅಲ್ಲ. ಲಿಂಕ್ಡ್‌ಇನ್ ಸೇರಿದಂತೆ ಕೆಲಸದ ಅಪ್‌ಡೇಟ್ ಫ್ಲಾಟ್ ಫಾರ್ಮ್‌ಗಳಲ್ಲಿ ಹೆಚ್ಚು ಆಕ್ಟಿವ್ ಆಗಿರಿ. ಅಲ್ಲದೆ ನಿಮ್ ಲಿಂಕ್ಡ್‌ಇನ್ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡುತ್ತಿರಿ. ನೀವು ಯಾವ ರೀತಿಯ ಕೆಲಸ ಹಾಗೂ ಯಾವ ಫೀಲ್ಡ್‌ನಲ್ಲಿ ಕೆಲಸ ಹುಡುಕುತ್ತಿದ್ದೀರಿ ಎನ್ನುವುದನ್ನು ನಿಮ್ಮ ಅಕೌಂಟ್‌ನಲ್ಲಿ ಬರೆಯುವುದನ್ನು ಮರೆಯಬೇಡಿ. ಪ್ರೊಫೈಲ್ ಫೋಟೋ ಹೊಸತಿರಲಿ.
ಸಾಮಾನ್ಯವಾಗಿ ನಾವು ಸೋಷಿಯಲ್ ಮೀಡಿಯಾಗಳಲ್ಲಿ ನಮ್ಮ ಅಭಿರುಚಿ ಅಥವಾ ಅಭಿಪ್ರಾಯಗಳನ್ನು ಬರೆದುಕೊಳ್ಳುವುದು ಇದೆ. ಕೆಲವೊಮ್ಮೆ ಇದು ಕೆಲಸ ಹುಡುಕುವಾಗ ಸಮಸ್ಯೆ ಆಗುವುದು ಇದೆ. ಯಾವುದಾದರೂ ವಿಷಯ ಕೆಲಸ ಹುಡುಕುವಾಗ ಸಮಸ್ಯೆ ಆಗುತ್ತದೆ ಎಂದು ಅನಿಸಿದರೆ ಆ ವಿಷಯಗಳನ್ನು ಡಿಜಿಟಲ್ ಮೀಡಿಯಾಗಳಿಂದ ತೆಗೆಯಿರಿ. ಇಲ್ಲವೇ ಪರ್ಸನಲ್ ಆಪ್ಷನ್‌ಗಳನ್ನು ಬಳಸಿ.
ಹೊಸ ಪೋಸ್ಟ್‌ಗಳನ್ನು ನೋಡಿ: ಕೆಲಸ ಹುಡುಕುವುದಕ್ಕೆ ಲಿಂಕ್ಡ್ ಇನ್ ಸೇರಿದಂತೆ ವಿವಿಧ ಆಪ್ಷನ್ಸ್ ಇವೆ. ಅಲ್ಲಿ ಕೆಲಸ ಹುಡುಕುವಾಗ ಸಾಧ್ಯವಾದಷ್ಟು ಹೊಸ ಆಪ್ಷನ್‌ಗಳನ್ನು ಹುಡುಕಿ. ಇತ್ತೀಚೆಗೆ ಪೋಸ್ಟ್ ಮಾಡಲಾಗಿರುವ ಕೆಲಸದ ಆಯ್ಕೆಗಳ ಕಡೆ ಗಮನಕೊಡಿ. ಸಾಮಾನ್ಯವಾಗಿ ಒಂದು ತಿಂಗಳ ಅವಧಿಯಲ್ಲಿ ಪೋಸ್ಟ್ ಮಾಡಿರುವ ಉದ್ಯೋಗಳಿಗೆ ಅರ್ಜಿ ಸಲ್ಲಿವುದಕ್ಕೆ ಹೆಚ್ಚು ಆದ್ಯತೆ ಕೊಡಿ. ಒಂದು ತಿಂಗಳಿಗಿಂತ ಹಳೆಯ ಪೋಸ್ಟ್‌ಗಳಿಗೆ ನೀವು ಅರ್ಜಿ ಸಲ್ಲಿಸಿದರೂ ಅದು ವಿಳಂಬವಾಗಬಹುದು. ಅವಧಿ ಮುಗಿದಿರುವ, ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ಅಥವಾ ಆ ಕೆಲಸಕ್ಕೆ ಯಾರಾದರೂ ಆಯ್ಕೆಯಾಗಿರುವ ಸಾಧ್ಯತೆ ಇರುತ್ತದೆ.
ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ: ಕೆಲಸ ಹುಡುಕುವಾಗ ಸಾಧ್ಯವಾದಷ್ಟು ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲನೆ ಮಾಡಿ. ವಿವಿಧ ಸಂಸ್ಥೆಗಳು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಅಪ್‌ಡೇಟ್ ಮಾಡುತ್ತಿರುತ್ತವೆ. ಇದರಿಂದ ಎಲ್ಲೆಲ್ಲಿ ಹಾಗೂ ಯಾವ ಉದ್ಯೋಗ ಖಾಲಿ ಇದೆ ಎನ್ನುವುದು ನಿಮಗೆ ಸುಲಭವಾಗಿ ತಿಳಿಯುತ್ತದೆ.












Click it and Unblock the Notifications