Infosys Layoffs: ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ ಟ್ರೈನಿಗಳ ವಜಾ

ಮೈಸೂರು, ಮಾರ್ಚ್‌ 27: ಬೆಂಗಳೂರು ಮೂಲದ ಇನ್ಫೋಸಿಸ್‌ ಟ್ರೈನಿಗಳ ವಜಾ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದೆ. ಕಂಪನಿಯ ಮೈಸೂರು ಕ್ಯಾಂಪಸ್‌ನಿಂದ ಪುನಃ 35 ರಿಂದ 40 ಟ್ರೈನಿಗಳನ್ನು ವಜಾಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ. ಈ ಹಿಂದೆ ಫೆಬ್ರವರಿಯಲ್ಲಿ ಟ್ರೈನಿಗಳನ್ನು ವಜಾಗೊಳಿಸಿದಾಗ ಕಾರ್ಮಿಕ ನೀತಿಗಳ ಉಲ್ಲಂಘನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ತನಕ ದೂರುಗಳು ಸಲ್ಲಿಕೆಯಾಗಿತ್ತು.

ವಿವಿಧ ಮಾಧ್ಯಮಗಳ ವರದಿ ಪ್ರಕಾರ ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮಾರ್ಚ್‌ 26ರಂದು ನಡೆದ ಆಂತರಿಕ ಮೌಲ್ಯ ಮಾಪನ ಪರೀಕ್ಷೆಯ ಬಳಿಕ ಪರೀಕ್ಷೆಯಲ್ಲಿ ಪಾಸಾಗಲು ವಿಫಲರಾದ 35 ರಿಂದ 40 ತರಬೇತಿ ನಿರತ ಅಭ್ಯರ್ಥಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

35 To 40 Trainees Layoff By Infosys From Mysuru Campus

ಆದರೆ ವರದಿಗಳ ಪ್ರಕಾರ ಈ ಬಾರಿ ವಜಾಗೊಂಡ ಟ್ರೈನಿಗಳಿಗೆ ಇನ್ಫೋಸಿಸ್‌ ಈ ಬಾರಿ ಬೇರೆ ವಿಭಾಗದಲ್ಲಿ ಕೆಲಸವನ್ನು ನೀಡಲಿದೆ. ಇನ್ಫೋಸಿಸ್ ವ್ಯವಹಾರ ಪ್ರಕ್ರಿಯೆ ನಿರ್ವಹಣೆ (ಬಿಪಿಎಂ)ನಲ್ಲಿ 12 ವಾರಗಳ ಕಾಲ ಕೆಲಸ ಮಾಡಲು ಸಹ ಅವಕಾಶವನ್ನು ನೀಡಲಿದೆ. ಬಿಪಿಎಂನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಮತ್ತೊಂದು ತರಬೇತಿಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಟ್ರೈನಿಗಳ ವಜಾ ವಿಚಾರದಲ್ಲಿ ಸುದ್ದಿ: ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ ಟ್ರೈನಿಗಳ ವಜಾ ವಿಚಾರದಲ್ಲಿ ಹಿಂದೆಯೂ ಸುದ್ದಿಯಾಗಿತ್ತು. 2.5 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆಂತರಿಕ ಮೌಲ್ಯ ಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಫೆಬ್ರವರಿಯಲ್ಲಿ 350ಕ್ಕೂ ಅಧಿಕ ಟ್ರೈನಿಗಳನ್ನು ವಜಾಗೊಳಿಸಲಾಗಿತ್ತು.

Take a Poll

ವಜಾಗೊಂಡ ಟ್ರೈನಿಗಳನ್ನು ಬಲವಂತವಾಗಿ ಕ್ಯಾಂಪಸ್‌ನಿಂದ ಆಚೆ ಕಳಿಸಲಾಗಿದೆ ಎಂದು ದೂರಲಾಗಿತ್ತು. ಆಗ ಇನ್ಫೋಸಿಸ್‌ ಕಾರ್ಮಿಕ ಹಿತಾಸಕ್ತಿ ನಿಯಮವನ್ನು ಉಲ್ಲಂಘನೆ ಮಾಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹ ದೂರು ಸಲ್ಲಿಕೆ ಮಾಡಲಾಗಿತ್ತು. ಈ ದೂರಿನ ಕುರಿತು ವಿಚಾರಣೆ ನಡೆಸುವಂತೆ ಕರ್ನಾಟಕದ ಕಾರ್ಮಿಕ ಇಲಾಖೆಗೆ ಕೇಂದ್ರ ಸೂಚನೆಯನ್ನು ನೀಡಿತ್ತು.

ಈಗ ಇನ್ಫೋಸಿಸ್‌ ಟ್ರೈನಿಗಳನ್ನು ವಜಾಗೊಳಿಸಿ ಬಳಿಕ ಇ-ಮೇಲ್ ಕಳಿಸಿದ್ದು, ನಿಮಗೆ ಹೆಚ್ಚುವರಿ ತಯಾರಿ ಸಮಯ, ಸಂಶಯ ನಿವಾರಣಾ ಸೂತ್ರಗಳು ಮತ್ತು ಹಲವಾರು ಮಾದರಿ ಮೌಲ್ಯಮಾಪನ ಅವಕಾಶಗಳಿದ್ದರೂ ನೀವು ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಅರ್ಹತಾ ಮಾನದಂಡಗಳನ್ನು ಪೂರೈಸಿಲ್ಲ ಎಂಬುದು ನಿಮ್ಮ ಅಂತಿಮ ಮೌಲ್ಯಮಾಪನ ಪ್ರಯತ್ನದ ಫಲಿತಾಂಶಗಳ ಘೋಷಣೆಯ ನಂತರ ತಿಳಿಯುತ್ತಿದೆ ಎಂದು ಹೇಳಿದೆ.

ಆದರೆ ವಜಾ ಪ್ರಕ್ರಿಯೆ ಕುರಿತು ಇನ್ಫೋಸಿಸ್‌ನಿಂದ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ. ಅಲ್ಲದೇ ಇ-ಮೇಲ್‌ನಲ್ಲಿ ಭಾರತದ ಎರಡನೇ ಅತಿ ದೊಡ್ಡ ಐಟಿ ಸೇವಾ ಕಂಪನಿಯು ತರಬೇತಿ ಪಡೆದು ಬಿಡುಗಡೆ ಹೊಂದುತ್ತಿರುವವರಿಗೆ ಪ್ರಮಾಣ ಪತ್ರದ ಜೊತೆಗೆ ಒಂದು ತಿಂಗಳ ವಿಶೇಷ ವೇತನ ಪಾವತಿಯನ್ನು ನೀಡುತ್ತಿದೆ ಎಂದು ತಿಳಿಸಿದೆ.

ಒಂದು ವೇಳೆ ತರಬೇತಿ ಪಡೆದ ಅಭ್ಯರ್ಥಿಗಳು ಇನ್ಫೋಸಿಸ್ ವ್ಯವಹಾರ ಪ್ರಕ್ರಿಯೆ ನಿರ್ವಹಣೆ (ಬಿಪಿಎಂ)ನಲ್ಲಿ ಕೆಲಸ ಮಾಡಲು ಇಚ್ಛಿಸದಿದ್ದಲ್ಲಿ ಅವರು ಬೆಂಗಳೂರು ನಗರಕ್ಕೆ ಸಂಚಾರ ನಡೆಸಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುತ್ತದೆ, ಸಾರಿಗೆ ಭತ್ಯೆಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೈಸೂರು ಕ್ಯಾಂಪಸ್‌ ಅನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+